ಬಾಗಲಕೋಟೆ: ಒಳಮೀಸಲಾತಿ ಎಂಬುದು ಅನ್ಯಾಯದ ಕೆಲಸ ಅಲ್ಲ. ಅದಕ್ಕೆ ಬಿಜೆಪಿ-ಅರ್.ಎಸ್.ಎಸ್ ಈಗಲೂ ಬದ್ಧ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಬಾಗಲಕೋಟೆಯಲ್ಲಿ ಈ ಕುರಿತು ಮಾತನಾಡಿದ ಅವರು, ನಾರಾಯಣಸ್ವಾಮಿ ಅವರು ಸದ್ಯ ಸಂವಿಧಾನದಲ್ಲಿ ಒಳಮೀಸಲಾತಿಗೆ ಅವಕಾಶ ಇಲ್ಲ ಎಂದು ಉತ್ತರಿಸಿದ್ದಾರೆ. ಆದರೆ ಸಂವಿಧಾನದ ಪರಿಚ್ವೇದ ೩೪೧ಕ್ಕೆ ತಿದ್ದುಪಡಿ ತಂದು ಜಾರಿ ಮಾಡಬಹುದು. ನಾವು ಅದಕ್ಕಾಗಿಯೇ ಶಿಫಾರಸ್ಸು ಮಾಡಿದ್ದೇವೆ ಎಂದರು.
ಒಳಮೀಸಲಾತಿಯಿಂದ ಸೋತಿರುವ ಬಗ್ಗೆ ಬಿಜೆಪಿ ಮಾಜಿ ಶಾಸಕರ ಆರೋಪ ಕುರಿತು ಮಾತನಾಡಿ, ಅದು ಅವರ ಭ್ರಮೆ.ತಪ್ಪು ಲೆಕ್ಕಾಚಾರದಿಂದ ಸೋತಿದ್ದೇವೆ. ೭೨ ಹೊಸ ಮುಖ ಜನ ಒಪ್ಪಲಿಲ್ಲ. ಮಾತ್ರವಲ್ಲದೇ ಸರ್ಕಾರದ ಮೇಲಿನ ಆರೋಪಗಳಿಗೆ ಅಭಿಯಾನದ ರೂಪದಲ್ಲಿ ಉತ್ತರ ಕೊಡಬೇಕಿತ್ತು ಎಂದರು.
ಲೋಕಸಭೆಗೆ ತಮ್ಮ ಸ್ಪರ್ಧೆ ವಿಚಾರ ಕುರಿತು ಮಾತನಾಡಿ, ಯಾವ ಚುನಾವಣೆಗೂ ನಾನು ಆಕಾಂಕ್ಷಿಯಲ್ಲ. ಬಾಗಲಕೋಟೆ, ವಿಜಯಪುರಕ್ಕೆ ಸಂಸದರು ಇದ್ದಾರೆ ಎಂದು ಹೇಳಿದರು.
ಮಹಾದಾಯಿ ಹುಲಿ ಸಂರಕ್ಷಿತ ಪ್ರದೇಶ ಎಂದು ಗೋವಾದಿಂದ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಳಸಾ ಹಾಗೂ ಬಂಡೂರಿ ಪ್ರತ್ಯೇಕಿಸಿ ಟೆಂಡರ್ ಆಗಿದೆ. ಎಲ್ಲೆಲ್ಲಿ ಕೆಲಸ ಶುರು ಮಾಡಲು ಅವಕಾಶವಿದೆ ನಾವು ಮಾಡಬೇಕು. ಕಳಸಾ ಬಂಡಾವರೂ ನೀರಾವರಿ ಯೋಜನೆಯಲ್ಲಿ ಅದು ಕುಡಿಯುವ ನೀರಿನ ಯೋಜನೆ ಹಾಗಾಗಿ ಸಮಸ್ಯೆ ಇಲ್ಲ. ಯುಕೆಪಿ, ಕಳಸಬಂಡೂರಿಗೆ ರಾಜ್ಯ ಸರ್ಕಾದ ನಯಾಪೈಸೆ ಕೊಟ್ಟಿಲ್ಲ ಎಂದು ಕಿಡಿಕಾರಿದರು.
ನೀರಾವರಿ ಯೋಜನೆ ಹಣ ನೀಡದ ವಿಚಾರವಾಗಿ ಮಾತನಾಡಿ, ನಾನು ನೀರಾವರಿ ಮಂತ್ರಿದ್ದಾಗ ಬಾಗಲಕೋಟೆ-ವಿಜಯಪುರಕ್ಕೆ ೧೦ ಸಾವಿರ ಕೋಟಿ ಕೊಟ್ಟಿರೋ ಹೆಮ್ಮೆ ನನಗಿದೆ. ೫೦ ಸಾವಿರ ಕೋಟಿ ಕೃಷ್ಣೆಗೆ ಕೊಡ್ತೀನಿ ಎಂದು ಇದೇ ಸಿದ್ದರಾಮಯ್ಯ ಕೂಡಲಸಂಗಮದಲ್ಲಿ ಆಣೆ ಮಾಡಿ, ಕೊಟ್ಟರಾ? ಎಂದು ಪ್ರಶ್ನಿಸಿದರು.
ಹಿಂದಿನ ಅವಧಿಯಲ್ಲಿ ಅಧಿಕಾರ ಬಿಡೋವಾಗ ೧ ಲಕ್ಷ ಕೋಟಿ ಹೊರೆ ಹೊರಸಿ ಹೋದರು ಆಗ ಕಮಿಷನ್ ಹೊಡೆದವರು ಯಾರು? ಎಂದು ಕಿಡಿಕಾರಿದ ಅವರು, ನಾನು ಬಾಗಲಕೋಟೆ ಜನರ ತ್ಯಾಗಕ್ಕಾಗಿ ಕೆಲಸ ಮಾಡಿದೆ. ಯಾರೂ ಕೇಳಿದರೂ ಉತ್ತರಿಸೋ ತಾಕತ್ತು ನನಗೆ ಇದೆ ಎಂದರು.
ನೀರಾವರಿ ಬಗ್ಗೆ ಸಚಿವ ತಿಮ್ಮಾಪುರ ಅವರು ತನಿಖೆ ಮಾಡಿಸುವುದಾಗಿ ಹೇಳಿಕೆ ನೀಡಿರುವ ಕುರಿತು ಮಾತನಾಡಿ, ೨೦೧೩ ರಿಂದ ೨೦೨೩ರ ಅವಧಿ ೧೦ ವರ್ಷದ ಅವಧಿವರೆಗೆ ತಾಕತ್ತಿದ್ದರೆ ತನಿಖೆ ಮಾಡಿಸಲು ಹೇಳಿ ಎಂದು ಸವಾಲ್ ಹಾಕಿದರು.
ಹೆಚ್ ಡಿಕೆ ವಿದೇಶಿ ಪ್ರವಾಸ ಕುರಿತು ಡಿಕೆಶಿ ಆರೋಪಕ್ಕೆ ಪ್ರತಿಕ್ರಿಯಿಸಿ, ತಮ್ಮ ಶಾಸಕರ ಮೇಲೆ ಅವರಿಗೆ ವಿಶ್ವಾಸ ಇಲ್ಲ ಎಂಬಂತಾಗಲ್ಲವೇ? ಎಂದು ಪ್ರಶ್ನಿಸಿದರು.
ಬಿಜೆಪಿಯಿಂದ ಹಿಂಬಾಗಿಲ ಸರ್ಕಾರದ ವಿಚಾರವಾಗಿ ಮಾತನಾಡಿ, ಆಗಲೂ ಶಾಸಕರು ಅವಿಶ್ವಾಸದಿಂದ ಹೊರ ಬಂದರು.. ಹಾಲು ಕುಡಿದು ಸಾಯೋರಿಗೆ ವಿಷ ಕೊಟ್ಟು ಸಾಯಿಸೋದು ಬೇಕಿಲ್ಲ ಎಂದು ತಿರುಗೇಟು ನೀಡಿದರು.