Sunday, April 20, 2025
Google search engine

Homeಸ್ಥಳೀಯಭೋಗಾಪುರದಲ್ಲಿ ನಿರ್ಮಾಣವಾಗಿರುವ ವಸತಿ ಪ್ರಥಮ ದರ್ಜೆ ಕಾಲೇಜು : ಸಾಮಾಜಿಕ, ಶೈಕ್ಷಣಿಕ ಅಭ್ಯುದಯದಕ್ಕೆ ಸಹಕಾರಿ

ಭೋಗಾಪುರದಲ್ಲಿ ನಿರ್ಮಾಣವಾಗಿರುವ ವಸತಿ ಪ್ರಥಮ ದರ್ಜೆ ಕಾಲೇಜು : ಸಾಮಾಜಿಕ, ಶೈಕ್ಷಣಿಕ ಅಭ್ಯುದಯದಕ್ಕೆ ಸಹಕಾರಿ

ಚಾಮರಾಜನಗರ: ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುನ್ನಡೆಯುತ್ತಿರುವ ಚಾಮರಾಜನಗರಕ್ಕೆ ನೂತನವಾಗಿ ಸರ್ಕಾರಿ ವಸತಿ ಪ್ರಥಮ ದರ್ಜೆ ಕಾಲೇಜು ಆರಂಭಗೊಳ್ಳುತ್ತಿರುವುದು ನಗರದ ಜನತೆಗೆ ಸಂತಸದ ಸಂಗತಿಯಾಗಿದೆ.

ಚಾಮರಾಜನಗರ ಸಮೀಪದ ಭೋಗಾಪುರದಲ್ಲಿ 5 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಸರ್ಕಾರಿ ವಸತಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣಗೊಂಡಿದೆ. 2017-18ನೇ ಸಾಲಿನಲ್ಲಿ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ನವರ ನೇತೃತ್ವದ ಸರ್ಕಾರ ಕರ್ನಾಟಕದ ಹತ್ತು ಹಿಂದುಳಿದ ಜಿಲ್ಲೆಗಳಿಗೆ ತಲಾ ಒಂದರಂತೆ ವಸತಿ ಪ್ರಥಮ ದರ್ಜೆ ಕಾಲೇಜು ಆರಂಭಕ್ಕೆ ಆದೇಶಿಸಿತ್ತು. ಈ ಪೈಕಿ ಚಾಮರಾಜನಗರವೂ ಒಂದು. ಹತ್ತು ಕಾಲೇಜುಗಳಿಗೂ 160 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಮಂಜೂರು ಮಾಡಲಾಗಿತ್ತು. ಪ್ರತಿ ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ತಲಾ 40 ಕೋಟಿ ರೂ. ಗಳನ್ನು ನೀಡಲಾಗಿದೆ. ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಕನ್ನಡ, ಇಂಗ್ಲೀಷ್, ಭೌತಶಾಸ್ತ್ರ, ಗಣಿತಶಾಸ್ತ್ರ ಹಾಗೂ ಗಣಕ ವಿಜ್ಞಾನ ವಿಷಯದ ಖಾಯಂ ಸಹಾಯಕ ಪ್ರಾಧ್ಯಾಪಕರು ವಾಣಿಜ್ಯಶಾಸ್ತ್ರಕ್ಕೆ 3 ಖಾಯಂ ಸಹಾಯಕ ಪ್ರಾಧ್ಯಾಪಕರು ಒಟ್ಟು 11 ಹುದ್ದೆಗಳನ್ನು ಮಂಜೂರು ಮಾಡಿ ಆದೇಶಿಸಲಾಗಿದೆ.

ಭೋಗಾಪುರದ ವಸತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಣ್ಣು ಮಕ್ಕಳಿಗೆ ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ವಸತಿ ನಿಲಯ, ಕಾಲೇಜು ಕಟ್ಟಡ ಪ್ರಯೋಗಾಲಯಗಳು ಮತ್ತು ಗ್ರಂಥಾಲಯ ನಿರ್ಮಾಣಗೊಂಡಿದೆ. ಜಿಲ್ಲೆ ಹಾಗೂ ತಾಲ್ಲೂಕಿನ ಸುತ್ತಮುತ್ತ ಇರುವ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಹಾಗೂ ಬಡ ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗಿದೆ. ಕಾಲೇಜು 2023-24ನೇ ಶೈಕ್ಷಣಿಕ ಸಾಲಿನಿಂದ ಕಾರ್ಯಾರಂಭ ಮಾಡಲಿದ್ದು, ಸದ್ಯಕ್ಕೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಹತ್ತಿರವಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಾತಿ ಆರಂಭಗೊಂಡಿದೆ. ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುವ ಮೂಲಕ ಸರ್ಕಾರದ ಈ ಅವಕಾಶಗಳನ್ನು ಉಪಯೋಗಪಡಿಸಿಕೊಳ್ಳಬಹುದಾಗಿದೆ.

ಈ ವರ್ಷ ಕಾರ್ಯಾರಂಭ ಮಾಡುವ ಈ ಕಾಲೇಜಿನಲ್ಲಿ ಬಿ.ಎ, ವಿಭಾಗದಲ್ಲಿ ಹೆಚ್.ಪಿ (ಇತಿಹಾಸ, ರಾಜ್ಯಶಾಸ್ತ್ರ), ಇ.ಪಿ (ಅರ್ಥಶಾಸ್ತ್ರ, ರಾಜ್ಯಶಾಸ್ತ್ರ), ಹೆಚ್.ಇ (ಇತಿಹಾಸ, ಅರ್ಥಶಾಸ್ತ್ರ), ಬಿ.ಕಾಂ, ವಾಣಿಜ್ಯಶಾಸ್ತ್ರ ಹಾಗೂ ಬಿ.ಎಸ್ಸಿ, ಪಿ.ಎಂ (ಭೌತಶಾಸ್ತ್ರ, ಗಣಿತಶಾಸ್ತ್ರ), ಪಿ.ಸಿ.ಎಸ್.ಸಿ (ಭೌತಶಾಸ್ತ್ರ, ಗಣಕ ವಿಜ್ಞಾನ), ಎಂ.ಸಿಎಸ್.ಸಿ (ಗಣಿತಶಾಸ್ತ್ರ, ಗಣಕ ವಿಜ್ಞಾನ) ಕೋರ್ಸ್‍ಗಳು ಆರಂಭಗೊಂಡಿದೆ. ಚಾಮರಾಜನಗರ ವಿಶ್ವವಿದ್ಯಾನಿಲಯ ಪಠ್ಯಕ್ರಮದಂತೆ ಭೋಧನಾ ಕಾರ್ಯ ಜೊತೆಗೆ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಕ್ರೀಡಾ ಚಟುವಟಿಕೆ, ಸಾಂಸ್ಕøತಿಕ ಚಟುವಟಿಕೆ, ರಾಷ್ಟ್ರೀಯ ಸೇವಾ ಯೋಜನೆ, ಎನ್‍ಸಿಸಿ, ಅಭಿವ್ಯಕ್ತಿ ಬಲವರ್ಧನೆಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಾಧ್ಯಾಪಕರಿಂದ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೇಳಿರುವಂತೆ ಜಗತ್ತಿನಲ್ಲಿ ಅತ್ಯಂತ ಹರಿತವಾದ ಅಸ್ತ್ರ ಶಿಕ್ಷಣವಾಗಿದೆ. ಬಡತನ, ಅಜ್ಞಾನ, ನಿರುದ್ಯೋಗ ಅಸಮಾನತೆಗಳನ್ನು ತೊಲಗಿಸುವ ಶಕ್ತಿ ಶಿಕ್ಷಣಕ್ಕಿದೆ. ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳನ್ನು ಒಳಗೊಂಡಿರುವ ವಸತಿ ಕಾಲೇಜಿನ ಪ್ರಯೋಜನವನ್ನು ವಿದ್ಯಾಥಿಗಳು ಪಡೆದುಕೊಳ್ಳಬೇಕು. ಸರ್ಕಾರದ ಆಶಯ ಉದ್ದೇಶ ಸಾರ್ಥಕತೆಯಾಗಬೇಕು. ಈ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಆಶಿಸುವುದಾಗಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಹೇಳಿದ್ದಾರೆ.

ಚಾಮರಾಜನಗರ ಸಮಗ್ರ ಅಭಿವೃದ್ಧಿಯಲ್ಲಿ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರು ನೀಡಿದ ಶೈಕ್ಷಣಿಕ ಕೊಡುಗೆ ಅಪಾರವಾಗಿದೆ. ವಿದ್ಯಾಥಿಗಳು ಶೈಕ್ಷಣಿಕ ಅಭಿವೃದ್ದಿಗೆ ಪೂರಕವಾಗಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಜಿಲ್ಲೆಗೆ ಕೀರ್ತಿ ತರಲಿ ಎಂದು ಹಾರೈಸುವುದಾಗಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಹೇಳಿದ್ದಾರೆ. ಕಾಲೇಜಿನ ಪ್ರವೇಶಾತಿ ಸಂಬಂಧಿಸಿದಂತೆ ಮೊಬೈಲ್ ಸಂಖ್ಯೆ: 9481168915, 79758961.ಸಂಪರ್ಕಿಸಬಹುದಾಗಿದೆ. ಒಟ್ಟಾರೆ ಸುಸಜ್ಜಿತ ಕಟ್ಟಡ, ಮೂಲ ಸೌಕರ್ಯ, ವಸತಿ, ಪ್ರಾಧ್ಯಾಪಕ ವೃಂದದ ಸೇವೆಗಳನ್ನು ಬಳಸಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ. ದೇವರಾಜು ಅವರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular