Monday, April 21, 2025
Google search engine

Homeರಾಜ್ಯಸುದ್ದಿಜಾಲಹುಣಸೂರಿನಲ್ಲಿ 'ಬಿ-ಖಾತೆ' ಅವ್ಯವಸ್ಥೆ ಖಂಡಿಸಿ 94 ಬಡಾವಣೆ ನಿವಾಸಿಗಳ ಧರಣಿ

ಹುಣಸೂರಿನಲ್ಲಿ ‘ಬಿ-ಖಾತೆ’ ಅವ್ಯವಸ್ಥೆ ಖಂಡಿಸಿ 94 ಬಡಾವಣೆ ನಿವಾಸಿಗಳ ಧರಣಿ

ಹುಣಸೂರು: ಇಲ್ಲಿನ ನಗರಸಭೆ ವತಿಯಿಂದ ಅನಧಿಕೃತ ಬಡಾವಣೆಗಳ ಬಿ-ಖಾತೆಗೆ ದುಪ್ಪಟ್ಟು ಕಂದಾಯ ವಿಧಿಸುತ್ತಿರುವುದನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಸತ್ಯ ಎಂ.ಎ.ಎಸ್ ಫೌಂಡೇಶನ್ ವೇತೃತ್ವದಲ್ಲಿ 94 ಅನಧಿಕೃತ ಬಡಾವಣೆಗಳ ನಿವಾಸಿ ಗಳೊಂದಿಗೆ ಏ.21ರಂದು ನಗರಸಭೆ ಮುಂಭಾಗ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ’ ಎಂದು ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆದ ನಾನಾ ತಾಲೂಕುಗಳ ಸ್ಥಳಿದು ಸಂಸ್ಥೆಗಳಲ್ಲಿ ಒಂದು ವರ್ಷಕ್ಕೆ ಮಾತ್ರ ದುಪ್ಪಟ್ಟು ಕಂದಾಯ ಕಟ್ಟಿಸಿಕೊಳ್ಳುತ್ತಿದ್ದರೆ. ಇಲ್ಲಿನ ನಗರಸಭೆಯಲ್ಲಿ ಮಾತ್ರ ಆರು ವರ್ಷಗಳ ದುಪ್ಪಟ್ಟು ಕಂದಾಯ ಪಡೆಯುವ ಮೂಲಕ ನಿವೇಶನದಾರರು, ಮನೆಗಳವರಿಗೆ ಅನ್ಯಾಯ ಮಾಡುತ್ತಿದ್ದರೂ ಜನಪ್ರತಿನಿಧಿಗಳು ಪ್ರಶ್ನಿಸುತ್ತಿಲ್ಲ. ನಗರಸಭೆದುವರು ದುಪ್ಪಟ್ಟು ಕಂದಾದುದ ಬಗ್ಗೆ ದೂವುದೇ ಸರಕಾರಿ ಆದೇಶವನ್ನು ಪ್ರದರ್ಶಿಸದೆ ನಾಗರಿಕರನ್ನು ವಂಚಿಸುತ್ತಿರುವುದರಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ,” ಎಂದರು.

ಹುಣಸೂರು ನಗರಸಭೆ ಬಿ-ಖಾತಾ ಅವ್ಯವಸ್ಥೆ ವಿರೋಧಿಸಿ ಪ್ರತಿಭಟನೆಯ ಕರಪತ್ರವನ್ನು ಸತ್ಯ ಫೌಂಡೇಷನ್‌ನ ಸತ್ಯಪ್ಪ ಮತ್ತಿತರರ ಮುಖಂಡರು ಬಿಡುಗಡೆಗೊಳಿಸಿದರು.

”ಸುಮಾರು 6-7 ಸಾವಿನ ಫಲಾನುಭವಿ ಗಳಿರುವ 94 ಅನಧಿಕೃತ ಬಡಾವಣೆಗಳಿಂದ ಈಗಾ ಗಲೇನಗರಸಭೆಗೆ ಕೋಟ್ಯಂತರ ರೂ.ಗಳ ಕಂದಾದು ಪಾವತಿಯಾಗುತ್ತಿದ್ದು, ಬಿ.ಖಾತೆ ಮಾಡುವುದರ ಜತೆಗೆ ಬಡಾವಣೆಗಳ ಡಾಂಬರು ರಸ್ತೆ, ಚರಂಡಿ, ಮುಜಿಡಿ ಮುಂತಾದ ಮೂಲ ಸೌಲಭ್ಯಗಳ ಅಭಿವೃದ್ಧಿ ಕಾರ್ಯವನ್ನು ಮಾಡಬೇಕೆಂದು ಒತ್ತಾಯಿಸುತ್ತೇವೆ. ದುಪ್ಪಟ್ಟು ಕಂದಾಯ ಕಟ್ಟುವುದು ಕಡ್ಡಾಯವಲ್ಲ ಎಂಬ ಆದೇಶವಿಲ್ಲ ದಿದ್ದರೆ ಈಗಾಗಲೇ ಕಟ್ಟಿಸಿಕೊಂಡಿರುವ ಕಂದಾಯ

ವಾಪಸ್ ಕೊಡಬೇಕು ಅಥವಾ ಮುಂದಿನ ಅವಧಿಗೆ ಹೊಂದಿಸಿಕೊಳ್ಳಬೇಕು,” ಎಂದು ಒತ್ತಾಯಿಸಿದರು. ಅವಶ್ಯವಿಲ್ಲದಿದ್ದರೂ ದಾಖಲೆ ನೀಡಬೇಕೆಂದು ಒತ್ತಾಯಿಸುತ್ತಿರುವುದು ಸರಿಯಲ್ಲ. ಇ.ಸಿ. ದಾಖಲೆಗಾಗಿ ನಿತ್ಯ ನೂರಾರು ಮಂದಿ ಸಬ್ ರಿಜಿಸ್ಟರ್ ಕಚೇರಿ ಅಲೆಯುವಂತಾಗಿದೆ. ಬೋಕರ್ ಗಳ ಕಾಟ ತಪ್ಪಿಸುವಂತೆ ಒತ್ತಾಯಿಸಿದರು. ಗೋಷ್ಠಿಯಲ್ಲಿ ಎಚ್.ಆರ್.ಸುಂದರ್, ಲೋಕೇಶ್, ಸಂದೀಪ್, ಕುಮಾರ್ ಇದ್ದರು.

RELATED ARTICLES
- Advertisment -
Google search engine

Most Popular