ಚಾಮರಾಜನಗರ: ದಸರಾ ಮಹೋತ್ಸವದ ಅಂಗವಾಗಿ ದಸರಾ ಗೊಂಬೆ ಪದ್ಧತಿಯನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂಥ್ ಕ್ಲಬ್ ವತಿಯಿಂದ ಗೊಂಬೆ ಕೂರಿಸುವ ಮನೆಗಳಿಗೆ ಭೇಟಿ ನೀಡಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಚಾಮರಾಜನಗರದಲ್ಲಿ ಹಲವು ದಶಕಗಳಲ್ಲಿ ಗೊಂಬೆಮನೆ ಎಂದೇ ಪ್ರಸಿದ್ಧವಾಗಿದ್ದ ಶ್ರೀಮತಿ ಲೀಲಾವತಮ್ಮ ಮತ್ತು ಟಿ ಕೆ ನಂಜುಂಡಯ್ಯನವರ ನೆನಪಿನಲ್ಲಿ ಗೌರವಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದ್ದಾರೆ.
ದಸರಾ ಮಹೋತ್ಸವದಲ್ಲಿ ಗೊಂಬೆ ಕೂರಿಸುವ ಪದ್ಧತಿ ಹಲವಾರು ಶತಮಾನಗಳಿಂದ ರೂಢಿಯಲ್ಲಿದೆ. ಗೊಂಬೆ ಪ್ರದರ್ಶನದ ಮೂಲಕ ಮಾನವನ ಆಧ್ಯಾತ್ಮಿಕ ಚಿಂತನೆ, ಧರ್ಮದ ಉಳಿವು ,ಸಂಸ್ಕೃತಿ, ಪರಂಪರೆಯ ಬೆಳವಣಿಗೆ ,ಮಾನವ ಸಂಬಂಧದ ಪ್ರತೀಕವಾಗಿ ಏಕತೆ, ಸಾಮರಸ್ಯ, ಪ್ರಕೃತಿ , ಪ್ರಾಣಿ ಪಕ್ಷಿಗಳ ಪ್ರೀತಿ, ಕುಟುಂಬ ಸಾಮರಸ್ಯದ ಸಂಪ್ರದಾಯದ ಗೊಂಬೆ ಮನೆ ಸ್ಪರ್ಧೆಗೆ ತಮ್ಮ ಮನೆಯ ಗೊಂಬೆ ಚಿತ್ರಗಳನ್ನು 9902317670 ಗಳಿಗೆ ಕಳಿಸಿ ಕೊಡಬೇಕಾಗಿ ಮನವಿ ಮಾಡಿದ್ದಾರೆ.