ಉಡುಪಿ:ಮಂಗಳೂರು ರಸ್ತೆಯಲ್ಲಿ ನಮಾಜ್ ವಿಚಾರವಾಗಿ ಎಸ್ ಡಿ ಪಿ ಐ ವಕ್ತಾರ ರಿಯಾಜ್ ಕಡಂಬು ಪ್ರತಿಕ್ರಿಯಿಸಿ ದಕ್ಷಿಣ ಕನ್ನಡ ಮಾತ್ರವಲ್ಲ, ನಮ್ಮ ದೇಶ ವೈವಿಧ್ಯತೆಯನ್ನು ಹೊಂದಿದೆ.ಯಾವುದೋ ಕಾಲದಿಂದ ನಡೆದು ಬಂದ ಧಾರ್ಮಿಕ ಆಚರಣೆಗಳಿವೆ. ಬೇರೆ ಬೇರೆ ಕಾರ್ಯಕ್ರಮಗಳು ನಡೆಯುವಾಗ ರಸ್ತೆಯಲ್ಲಿ ಏನೆಲ್ಲಾ ಮಾಡುತ್ತೇವೆ ನಾವು. ಗಣೇಶೋತ್ಸವ ಸಂದರ್ಭದಲ್ಲಿ ಇಡೀ ರಸ್ತೆಯನ್ನು ಬಂದ್ ಮಾಡಿ ಮೆರವಣಿಗೆ ಮಾಡುತ್ತೇವೆ. ಅದು ಆಯಾ ಧರ್ಮದ ಆಚರಣೆ, ಅದನ್ನು ಗೌರವಿಸಬೇಕು.
ವಿರೋಧಿಸಿ ಕೋಮುಗಲಭೆ ಸೃಷ್ಟಿ ಮಾಡಬಾರದು.ನಮಾಜ್ ನಡೆಸಿರುವುದನ್ನು ವಿರೋಧಿಸಿ ಶರಣ್ ಪಂಪ್ ವೆಲ್ ಹೇಳಿಕೆ ನೀಡಿದ್ದಾರೆ, ತಾಕತ್ತಿದ್ದರೆ ಶರಣ್ ಪಂಪ್ ವೆಲ್ ಅದನ್ನು ಮಾಡಿ ನೋಡಲಿ, ಸಮಾಜದಲ್ಲಿ ಶಾಂತಿ ಮೂಡಿಸಲು ನಾವು ಕಟಿಬದ್ಧರಾಗಿದ್ದೇವೆ.ಎರಡು ನಿಮಿಷ ನಮಾಜ್ ಮಾಡಿ ಎದ್ದು ಹೋಗಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ಮೇಲೆ ಸರಕಾರ ಕಣ್ಣಿಡ ಬೇಕು.ಕಾನೂನು ವಿರುದ್ಧವಾಗಿ ನಮಾಜ್ ನಡೆದಿದ್ದರೆ ಅದನ್ನು ನೋಡಿಕೊಳ್ಳಲು ಪೊಲೀಸ್ ಇಲಾಖೆ ಇದೆ. ಬಜರಂಗದಳದವರು ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎಂದರೆ ನಾವು ಕೈ ಕಟ್ಟಿ ಕುಳಿತಿಲ್ಲ.
ನಮಾಜ್ ಮಾಡುವ ಸ್ಥಳದಲ್ಲಿ ಜನಸಂಖ್ಯೆ ತುಂಬಿಕೊಂಡಿತ್ತು.ನಾಲ್ಕೈದು ಮಂದಿಗೆ ಸ್ಥಳ ಇರಲಿಲ್ಲ.ಎರಡು ನಿಮಿಷ ನಮಾಜು ಮಾಡಿ ಎದ್ದು ಹೋಗಿದ್ದಾರೆ.ಅದನ್ನೇ ದೊಡ್ಡ ರಾದ್ದಾಂತ ಮಾಡುತ್ತಿದ್ದಾರೆ ಎಂದು ಹೇಳಿದರು.
ಉಡುಪಿಯಲ್ಲಿ ಗ್ಯಾಂಗ್ ವಾರ್ ವಿಚಾರವಾಗಿ , ಯುವಕರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದನ್ನ ಸಮಾಜ ಮತ್ತು ಇಲಾಖೆ ಒಗ್ಗೂಡಿ ಎದುರಿಸಬೇಕು. ಗ್ಯಾಂಗ್ವಾರ್ ವಿಚಾರದಲ್ಲಿ ಉಡುಪಿ ಪೊಲೀಸರ ನಡೆಸುತ್ತೇನೆ. ತಕ್ಷಣ ಎಚ್ಚೆತ್ತು ಯಾರನ್ನು ಬಂಧಿಸಬೇಕು ಕ್ರಮ ಕೈಗೊಂಡಿದ್ದಾರೆ.ಯುವಕರು ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಎಸ್ ಡಿ ಪಿ ಐ ವಕ್ತಾರ ರಿಯಾಜ್ ಕಡಂಬು ಹೇಳಿದರು.
ಎಸ್ ಡಿ ಪಿ ಐ ಮುಖಂಡನ ಅಕ್ರಮ ಕಟ್ಟಡ ತೆರವಿಗೆ ಶಾಸಕ ಯಶ್ಪಾಲ್ ಸುವರ್ಣ ಎಚ್ಚರಿಕೆ ವಿಚಾರವಾಗಿ, ಉಡುಪಿಯಲ್ಲಿ ಬಿಜೆಪಿ ಚಿಂತಾ ಜನಕ ಸ್ಥಿತಿಯಲ್ಲಿದೆ. ಬಿಜೆಪಿ ಒಳಗೆ ಕಚ್ಚಾಟ ಹೆಚ್ಚಾಗಿದೆ. ಮಾಜಿ ಶಾಸಕ ರಘುಪತಿ ಭಟ್ಟರನ್ನು ಉಚ್ಚಾಟನೆ ಮಾಡುವ ಪರಿಸ್ಥಿತಿ ಬಿಜೆಪಿಯಲ್ಲಿದೆ. ಇದನ್ನು ಮರೆಮಾಚಲು ಶಾಸಕರು ಹೇಳಿಕೆ ನೀಡುತ್ತಿದ್ದಾರೆ. ನಗರಸಭೆ ಉದ್ಯಮ ಮಾಡಲು ಅವಕಾಶ ಕೊಟ್ಟಿದೆ.ಅಶಾಂತಿ ಸೃಷ್ಟಿಸಿ ಜನರ ಮಧ್ಯೆ ಭೀತಿ ಹುಟ್ಟಿಸಲು ಶಾಸಕರು ಮುಂದಾಗಿದ್ದಾರೆ. ನೀವೊಬ್ಬ ಜನಪ್ರತಿನಿಧಿ ಶಾಸಕ,ಸಾರ್ವಜನಿಕರ ನಡುವೆ ಜವಾಬ್ದಾರಿತವಾಗಿ ಮಾತನಾಡುವುದು ಕಲಿಯಿರಿ.ಒಂದು ವ್ಯಕ್ತಿಯನ್ನು ಟಾರ್ಗೆಟ್ ಮಾಡಬೇಡಿ ಎಲ್ಲರನ್ನೂ ಸಮಾನವಾಗಿ ನೋಡಿ, ಯಶ್ ಪಾಲ್ ಸುವರ್ಣ ಇದೇ ರೀತಿ ಮುಂದುವರೆದರೆ ಅವರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.