Thursday, May 8, 2025
Google search engine

Homeರಾಜ್ಯಸುದ್ದಿಜಾಲಹೆತ್ತವರ ಗೌರವ ಕಾಪಾಡಿ, ಸಾಮಾಜಿಕ ಜಾಲತಾಣದಲ್ಲಿ ಶಿಸ್ತಿನ ವರ್ತನೆ ಅಳವಡಿಸಿಕೊಳ್ಳಿ: ಪದ್ಮರಾಜ್

ಹೆತ್ತವರ ಗೌರವ ಕಾಪಾಡಿ, ಸಾಮಾಜಿಕ ಜಾಲತಾಣದಲ್ಲಿ ಶಿಸ್ತಿನ ವರ್ತನೆ ಅಳವಡಿಸಿಕೊಳ್ಳಿ: ಪದ್ಮರಾಜ್

ಮಂಗಳೂರು (ದಕ್ಷಿಣ ಕನ್ನಡ): ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಗಳ ಜೊತೆ ಕೆಟ್ಟ ಸಂದೇಶಗಳನ್ನು ಬರೆಯುವವರು ತಮ್ಮ ಹೆತ್ತವರ ಗೌರವ ಉಳಿಸುವತ್ತ ಯೋಚನೆ ಮಾಡಬೇಕು. ಪ್ರಚೋದನಕಾರಿ, ಕೆಟ್ಟ ಸಂದೇಶಗಳನ್ನು ಬರೆದು ಪ್ರಕರಣ ದಾಖಲಿಸಿಕೊಂಡಾಗ ಅದರಿಂದ ತೊಂದರೆಗೊಳಗಾಗುವುದು ಹೆತ್ತವರು ಎಂಬುದನ್ನು ಮರೆಯಬಾರದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಹೇಳಿದ್ದಾರೆ.

ಮಂಗಳೂರು ನಗರದ ಕಾಂಗ್ರೆಸ್ ‌ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಬರೆಯುವ ಸಂದೇಶಗಳು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕಾನೂನು ಕ್ರಮ ವಹಿಸುತ್ತದೆ. ಆದರೆ ಈ ರೀತಿಯಲ್ಲಿ ವರ್ತಿಸುವವರು ತಮ್ಮ ಹೆತ್ತವರ ಬಗ್ಗೆ ಆಲೋಚನೆ ಮಾಡಬೇಕು. ಅವರ ಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ದ.ಕ. ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಕರಾವಳಿ ಶಾಸಕರ ಜೊತೆ ಸಮಾಲೋಚನೆ ನಡೆಸಿ ಮಾಸ್ಟರ್ ಪ್ಲಾನ್ ತಯಾರಾಗುತ್ತಿರುವ ಹೊತ್ತಿನಲ್ಲಿಯೇ ಕಳೆದ 10ರಿಂದ 12 ದಿನಗಳಿಂದೀಚೆಗೆ ಜಿಲ್ಲೆಗೆ ಕಪ್ಪು ಚುಕ್ಕೆ ತರುವ ಕಾರ್ಯ ನಡೆಯುತ್ತಿದೆ. ಬಜ್ಪೆಯಲ್ಲಿ ಅಮಾಯಕ ಅಶ್ರಫ್‌ನ ಗುಂಪು ಹತ್ಯೆ ನಡೆದಿರುವುದು ನಾಗರಿಕ ಸಮಾಜವೇ ತಲೆತಗ್ಗಿಸುವಂತದ್ದು. ಈ ಪ್ರಕರಣದ ತನಿಖೆಯ ಆರಂಭದಲ್ಲಿ ಪೊಲೀಸರಿಂದ ವಿಳಂಬದ ಜತೆ ಹಾದಿ ತಪ್ಪಿಸುವ ಕೆಲಸ ಆಗಿತ್ತು. ಆದರೆ ಗೃಹ ಸಚಿವರು ಹಾಗೂ ಉಸ್ತುವಾರಿ ಸಚಿವರ ಆದೇಶದ ಮೇರೆಗೆ ತನಿಖೆ ಚುರುಕುಗೊಳಿಸಿ 21 ಮಂದಿಯ ಬಂಧನ ಹಾಗೂ 17 ಜನರಿಗೆ ನೋಟೀಸು ನೀಡುವ ಕೆಲಸವಾಗಿದೆ. ತನಿಖೆ ಸುಗಮವಾಗಿ ಸಾಗುತ್ತಿರುವ ವೇಳೆಯಲ್ಲೇ ಸುಹಾಸ್ ಕೊಲೆಯಾಗಿದೆ. ಸುಹಾಸ್ ಶೆಟ್ಟಿಯ ಕೊಲೆ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಅನುಕರಣೀಯವೂ ಅಲ್ಲ. ಆ ಕೃತ್ಯ ಎಸಗಿದ ಎಲ್ಲರಿಗೂ ತಕ್ಕ ಶಿಕ್ಷೆಯಾಗಬೇಕು ಎಂಬುದು ನಮ್ಮ ಆಗ್ರಹ. ಆದರೆ ಆತನ ಮೇಲೆ ರೌಡಿ ಶೀಟ್ ತೆರೆದಿರುವುದು ಯಾರು ಹಾಗೂ ಯಾರ ಅವಧಿಯಲ್ಲಿ ಎಂಬುದನ್ನು ಮರೆಯಬಾರದು. ಸಮಾಜ ಬಾಹಿರ ಕೃತ್ಯದಲ್ಲಿ ತೊಡಗಿದವರನ್ನು ಸರಿದಾರಿಗೆ ತರುವ ಕೆಲಸವನ್ನು ಇದೀಗ ಆತನ ಕೊಲೆಯಾದ ಬಳಿಕ ಆತನನ್ನು ಹಿಂದೂ ಕಾರ್ಯಕರ್ತ ಎಂದು ಹೇಳವವರು ಮಾಡಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು.

RELATED ARTICLES
- Advertisment -
Google search engine

Most Popular