Friday, April 18, 2025
Google search engine

Homeರಾಜ್ಯಸುದ್ದಿಜಾಲವಿಶ್ರಾಂತ ಪ್ರಾಧ್ಯಾಪಕಿ ಪ್ರಮೀಳಾ ಬಿ.ಕುನ್ನೂರ್ ನಿಧನ

ವಿಶ್ರಾಂತ ಪ್ರಾಧ್ಯಾಪಕಿ ಪ್ರಮೀಳಾ ಬಿ.ಕುನ್ನೂರ್ ನಿಧನ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಪ್ರಮೀಳಾ ಕುನ್ನೂರ್ (62) ಹುಬ್ಬಳ್ಳಿಯ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಪತಿ ಮತ್ತು ಸಂಬಂಧಿಕರು, ಸ್ನೇಹಿತರು ಹಾಗೂ ತಮ್ಮ ಅಪಾರ ವಿದ್ಯಾರ್ಥಿ ಬಳಗವನ್ನು ಬಿಟ್ಟು ಅಗಲಿದ್ದಾರೆ.
ಪ್ರೊ. ಪ್ರಮೀಳಾ ಬಿ ಕುನ್ನೂರ್ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 1990-94 ರಲ್ಲಿ ಅತಿಥಿ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ 1994ರಲ್ಲಿ ಉಪನ್ಯಾಸಕರಾಗಿ (ಸಹಾಯಕ ಪ್ರಾಧ್ಯಾಪಕರಾಗಿ) ನೇಮಕಗೊಂಡರು.
ಪ್ರಮೀಳಾ ಬಿ ಕುನ್ನೂರು ಪ್ರತಿಷ್ಟಿತ ಮಹಾರಾಜ ಕಾಲೇಜಿನ ಪತ್ರಿಕ್ಯೋದ್ಯಮದಲ್ಲಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಅವರ ಮಾರ್ಗದರ್ಶನದಲ್ಲಿ ಸುಮಾರು 10 ಅಭ್ಯರ್ಥಿಗಳು ಪಿಎಚ್‌ಡಿ ಪಡೆದಿದ್ದಾರೆ.ಈಗ ಅವರ ಅಗಲಿಕೆಗೆ ಅಪಾರ ವಿದ್ಯಾರ್ಥಿ ಬಳಗ ಕಂಬನಿ ಮಿಡಿದಿದೆ.

ವಾತ್ಯಾಲ್ಯಮಯಿ: ಡಾ.ಪ್ರಮೀಳಾ ಬಿ.ಕುನ್ನೂರ್ ಅವರು ಉದಾತ್ತ ಗುಣಗಳನ್ನು ಮೈಗೂಡಿಸಿಕೊಂಡಿದ್ದ ವಾತ್ಯಲ್ಯಮಯಿ, ಸಹೋದ್ಯೋಗಿಗಳೊಂದಿಗೆ ವಿಶ್ವಾಸ, ಅಕ್ಕರೆ, ಪ್ರೀತಿ ಹಾಗೂ ಅಭಿಮಾನವಿಟ್ಟುಕೊಂಡಿದ್ದರು ಎಂದು ಮೈಸೂರು ವಿವಿ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ.ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಹಾರಾಜ ಕಾಲೇಜಿನಲ್ಲಿ ನಾನು, ಡಾ.ಗೋಪಾಲ, ಡಾ.ಜೆ.ಲೋಹಿತ್, ಡಾ.ಶ್ವೇತ ಎಂ.ಹನ್ಸ್ ಮತ್ತಿತರರ ಶೈಕ್ಷಣಿಕ ವ್ಯಕ್ತಿತ್ವ ಬೆಳೆಸಿದವರು. ಅವರಿಂದ ಪಡೆದ ಜೀವನೋತ್ಸಾಹ, ಮಾರ್ಗದರ್ಶನ, ಉಪಕಾರಗಳನ್ನು ನಾವು ಎಂದೆಂದೂ ತೀರಿಸಲು ಸಾಧ್ಯವಿಲ್ಲ. ಸಜ್ಜನಿಕೆ ನಿಷ್ಠೆಗೆ ಹೆಸರು ಪ್ರತಿಫಲಾಪೇಕ್ಷೆಯನು ಗಣಿಸದೆಯೆ ದುಡಿದವರು. ತುಂಬ ನಿಷ್ಠಾವಂತರು. ಶ್ರದ್ಧೆಯಿಂದ ಕೆಲಸವನ್ನು ಮಾಡುತ್ತಿದ್ದರು ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ್ದಾರೆ.

RELATED ARTICLES
- Advertisment -
Google search engine

Most Popular