ಮೈಸೂರು: 2023-24ನೇ ಸಾಲಿನಲ್ಲಿ ಪ್ರಪ್ರಥಮವಾಗಿ ಕರ್ನಾಟಕ ರಾಜ್ಯ ಸರ್ಕಾರ ಮೈಸೂರು ಪತ್ರಿಕಾ ವಿತರಕರನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿರುವ ಸವಿ ನೆನಪಿಗಾಗಿ 2024-25 ಸಾಲಿನ ಕನ್ನಡ ರಾಜ್ಯೋತ್ಸವ ಆಚರಣೆ ದಿನದಂದು ಮೈಸೂರಿನ ನಿವೃತ್ತ ಹಿರಿಯ ಪತ್ರಿಕಾ ವಿತರಕರುಗಳಾದ ಶ್ರೀ ಶಾಂತಕುಮಾರ್ (85 ), ಶ್ರೀ ಪ್ರಕಾಶ್ (70) , ಶ್ರೀ ಅಶ್ವತ್ (72) ಇವರುಗಳ ಹಿರಿತನ ಮತ್ತು ಸೇವೆಯನ್ನು ಗುರುತಿಸಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹೋಮದೇವ ಜೆ.ಎಸ್, ಮೈಸೂರು ಜಿಲ್ಲಾ ಪತ್ರಿಕಾ ಪ್ರತಿನಿಧಿಗಳ ಸಂಘದ ಪ್ರಧಾನಕಾರ್ಯದರ್ಶಿ ಎ.ರವಿ, ಮಾತನಾಡಿ ಮುಂದಿನ ದಿನಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ನಮ್ಮ ಪತ್ರಿಕ ವಿತರಕರಿಗೆ ಆಯೋಜನೆ ಮಾಡಿ ಮುಂದಿನ ದಿನಗಳಲ್ಲಿ ಪತ್ರಿಕಾ ವಿತರಕರು ಕಾಣದೆ ಹೋಗಬಹುದು. ಆದ್ದರಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪತ್ರಿಕಾ ವಿತರಕರಿಗೆ ಸಹಾಯ ಮಾಡುವ ಮೂಲಕ ಉತ್ತೇಜನ ಕೊಡಬೇಕು ಎಂದು ಹೇಳಿದರು.
ಸಂಘದ ಪದಾಧಿಕಾರಿಗಳಾದ ಎಂ.ನಾಗರಾಜು, ಸಿ.ಶಿವಣ್ಣ, ಟಿ.ಕೆ.ಎಸ್, ಸಿ.ಆರ್.ದತ್ತಾತ್ರೇಯ, ಈಶ್ವರಪ್ರಸಾದ್, ಶ್ರೀ ಕಾಂತ, ಜಯದೇವ್, ಸ್ವಾಮಿ, ನಂಜುಂಡಯ್ಯ, ಬಂ.ಶಿವಣ್ಣ, ಹರಿರಾವ್, ಆರಾಧ್ಯ ಕನ್ನಡ ಪ್ರಭ ಪತ್ರಿಕೆಯ ವ್ಯವಸ್ಥಾಪಕ ಶ್ರೀ ಗಣೇಶ್, ಟೈಮ್ಸ್ ಆಫ್ ಇಂಡಿಯಾ,ಮತ್ತು ವಿಜಯಕರ್ನಾಟಕ ಪತ್ರಿಕೆಯ ವ್ಯವಸ್ಥಾಪಕ ಪ್ರತಾಪ್ ಮತ್ತು ಸತೀಶ್, ಹಾಗೂ ಇನ್ನಿತರ ಪತ್ರಿಕಾ ವಿತರಕರುಗಳು ಹಾಜರಿದ್ದರು.