ಮೈಸೂರು: ಮೊಸಂಬಾಯನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ವರುಣಾಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಕಂದಾಯ ಅದಾಲತ್ ಕಾರ್ಯಕ್ರಮ ನಡೆಸಿದರು. ವರುಣಾಕ್ಷೇತ್ರದ ಮೊಸಂಬಾಯನಹಳ್ಳಿ, ಮಾರಶೆಟ್ಟಿಹಳ್ಳಿ, ಟಿ.ಎಂ.ಹುಂಡಿ, ಸಜ್ಜೆಹುಂಡಿ, ಜಂತಗಳ್ಳಿ, ಕಿರಾಳು, ಯಾಂದಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿನ ಅವರು ನಮ್ಮ ತಂದೆ ಸಿದ್ದರಾಮಯ್ಯರವರನ್ನು ೨ನೇ ಬಾರಿಗೆ ಮುಖ್ಯಮಂತ್ರಿಯಾಗಲು ಕಾರಣರಾದ ನಿಮಗೆ ಅನಂತ ಧನ್ಯವಾದಗಳು. ಪ್ರತಿ ಗ್ರಾಮದಲ್ಲಿಯು ಸಮಸ್ಯೆಗಳು ಇದ್ದು ನಿಮ್ಮ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಮುಖ್ಯಮಂತ್ರಿಗಳು ಕಳುಹಿಸಿದ್ದಾರೆ. ಎಲ್ಲಾ ಸಮಸ್ಯೆಗಳನ್ನು ಒಂದೇ ಸಾರಿ ಪರಿಹರಿಸಲು ಸಾಧ್ಯವಾಗದಿದ್ದರೂ ಸಹ ಹಂತ ಹಂತವಾಗಿ ಆಧ್ಯತೆಯ ಮೇಲೆ ಪರಿಹರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ರಸ್ತೆ, ಮೆಟ್ಲಿಂಗ್ ಮಾಡಿಸಿ ಡಾಂಬರ್ ಹಾಕಿಸಿಕೊಡಿ, ವಿದ್ಯುತ್ ಕಂಬ ಹಾಕಿಸಿಕೊಡಿ. ಯು.ಜಿ.ಡಿ ಮಾಡಿಸಿಕೊಡಿ, ದೇವಸ್ಥಾನ ನಿರ್ಮಾಣಕ್ಕೆ ಹಣ ಕೊಡಿ, ಸಾಗುವಳಿಯಾಗಬೇಕು ಚಿಕ್ಕಳ್ಳಿಯಿಂದ ಹದಿನಾರುವರೆಗೆ ಬಸ್ ಹಾಕಿಸಿಕೊಡಿ, ಸ್ಮಶಾನ ಬೇಕು, ವೃದ್ದಾಪ್ಯ ವೇತನ, ವಿಧವಾವೇತನ ಮಾಡಿಸಿಕೊಡಿ ಎಂದು ಮನವಿ ಮಾಡಿದಾಗ ಅದಕ್ಕೆ ಉತ್ತರಿಸಿದ ಅವರು, ಅಲ್ಲೇ ಇದ್ದು ಇಲಾಖೆಯ ಅಧಿಕಾರಿಗಳಿಗೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್.ವಿಜಯ್, ಆಪ್ತ ಸಹಾಯಕ ಶಿವಸ್ವಾಮಿ, ಗ್ರಾ.ಪಂ. ಅಧ್ಯಕ್ಷೆ ಸಾಕಮ್ಮ, ಜಿ.ಪಂ. ಮಾಜಿ ಸದಸ್ಯ ಪಟೇಲ್ ಜವರೇಗೌಡ, ಶಿವಮ್ಮ, ನಿರ್ಮಲ, ಜಂತಗಳ್ಳಿ ಜಗದೀಶ, ಶಿವಪ್ರಸಾದ್, ಪಾಲಾಕ್ಷ, ರಾಜಣ್ಣ, ಉಮೇಶ್, ಉತ್ತನಹಳ್ಳಿ ಶಿವಣ್ಣ, ರವಿ, ಗಿರೀಶ್, ಮೆಲ್ಲಹಳ್ಳಿ ರವಿ, ಅನು ಕುಮಾರಗೌಡ, ಧರ್ಮೇಶ್, ಆರ್.ಐ. ಶಂಕರ, ಪಿ.ಡಿ.ಒ. ಗೋಪಾಲಕೃಷ್ಣ ಹಾಜರಿದ್ದರು.