ಚಾಮರಾಜನಗರ: ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮ ಉದಮ್ ಸಿಂಗ್ ಭಾರತೀಯರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರು ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ , ಋಗ್ವೇದಿ ಯೂತ್ ಕ್ಲಬ್ ಹಾಗೂ ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಕ್ರಾಂತಿಕಾರಿ ಹುತಾತ್ಮ ಉಧಮ್ ಸಿಂಗ್ ಬಲಿದಾನ ದಿವಸ್ ಕಾರ್ಯಕ್ರಮದಲ್ಲಿ ಉಧಮ್ ಸಿಂಗ್ ರವರ ಭಾವಚಿತ್ರ ಪ್ರದರ್ಶಿಸಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡುತ್ತಾ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಭಾರತೀಯರ ಮೇಲೆ ನಡೆಸಿದ ನಿರಂತರ ಶೋಷಣೆ, ದಬ್ಬಾಳಿಕೆ ಹಾಗೂ ಕ್ರೌರ್ಯದ ವಿರುದ್ಧ ಹೋರಾಡಿದ ಸಾವಿರಾರು ಕ್ರಾಂತಿಕಾರಿಗಳ ತ್ಯಾಗ ಬಲಿದಾನಕ್ಕೆ ನಾವೆಲ್ಲರೂ ಗೌರವ ಸಲ್ಲಿಸಬೇಕು. ಉದಂ ಸಿಂಗ್ ಜಲಿಯನ್ ವಾಲಾಬಾಗ್ ಘಟನೆಯಲ್ಲಿ ಮರಣ ಹೊಂದಿದ 300 ಕ್ಕು ಹೆಚ್ಚು ಹೋರಾಟಗಾರರು, ನೊಂದ ಸಾವಿರಾರು ಸ್ವಾತಂತ್ರ ಪ್ರೇಮಿಗಳ ನೋವನ್ನು ಕಂಡ ಉಧಮ್ ಸಿಂಗ್ ಬ್ರಿಟಿಷರ ವಿರುದ್ಧ ತೀವ್ರ ಹೋರಾಟವನ್ನು ನಡೆಸುವ ದಿಕ್ಕಿನಲ್ಲಿ ಕ್ರಾಂತಿಕಾರಿ ಸಂಘಟನೆಗಳನ್ನು ಸೇರಿ ಹೋರಾಟ ನಡೆಸಿದ ಮಹಾನ್ ದೇಶಭಕ್ತ. ಬ್ರಿಟಿಷ್ ಅಧಿಕಾರಿ ಮೈಕಲ್ ಓ ಡಯರ್ ನನ್ನ ಕೊಂದು ಹಾಕಿದ ಉಧಮ್ ಸಿಂಗ್ ರವರನ್ನು ಜುಲೈ 31 ರಲ್ಲಿ ಗಲ್ಲಿಗೇರಿಸಲಾಯಿತು.
ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಉದಂ ಸಿಂಗ್ ರಂತಹ ನೂರಾರು ಕ್ರಾಂತಿಕಾರಿಗಳ ವೀರ ಮರಣ ಅಮೃತ ಮಹೋತ್ಸವದ ಸಂದರ್ಭದಲ್ಲಿ ಎಲ್ಲಾ ಕ್ರಾಂತಿಕಾರಿಗಳ ಹಾಗೂ ವೀರ ಮರಣ ಹೊಂದಿದ ಹುತಾತ್ಮರ ಗಳಿಗೆ ಗೌರವ ಸಲ್ಲಿಸಿ ಅವರ ತ್ಯಾಗ ಬಲಿದಾನವನ್ನು ಯುವಕರಿಗೆ ತಿಳಿಸುವ ಕಾರ್ಯವನ್ನು ಮಾಡಬೇಕಿದೆ.
ಸ್ವಾತಂತ್ರ್ಯ ಚಳುವಳಿಯ ವೀರಗಾಥೆ ಯನ್ನ ತಿಳಿಸುವ ಕಾರ್ಯವನ್ನು ಯುವ ಸಂಘಟನೆ ಮಾಡಬೇಕಿದೇ ಎಂದು ಋಗ್ವೇದೀ ತಿಳಿಸಿದರು.
ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ಸುರೇಶ್ ದೊಡ್ಡಮೋಳೆ ಮಾತನಾಡಿ ಯುವ ಸಂಘಟನೆ ದೇಶಭಕ್ತಿ ಮೂಡಿಸುವ ಕಾರ್ಯಕ್ರಮವನ್ನು ರೂಪಿಸುವ ಜೊತೆಗೆ ಭಾರತದ ಇತಿಹಾಸವನ್ನು, ಸ್ವಾತಂತ್ರ್ಯ ಚಳುವಳಿಯ ಅನೇಕ ವಿಚಾರಗಳನ್ನು ತಿಳಿಸುವ ಕಾರ್ಯವನ್ನು ಮಾಡಲು ಪ್ರಯತ್ನಿಸುತ್ತಿದೆ . ಸ್ವಯಂ ಪ್ರೇರಿತವಾಗಿ ಗ್ರಾಮಗಳಲ್ಲಿ ಯುವ ಸಂಘಟನೆಯನ್ನು ರಚನೆ ಮಾಡುವ, ಸಕ್ರಿಯವಾಗಿ ಪಾಲ್ಗೊಳ್ಳುವ ಮನಸ್ಸು ಇರುವವರು ಸಂಘಟನೆಯೊಂದಿಗೆ ಜೊತೆಗೂಡಬೇಕೆಂದು ಮನವಿ ಮಾಡಿದರು.
ಉಪನ್ಯಾಸಕ ಶಿವಸ್ವಾಮಿ ರವರು ಉಧಮ್ ಸಿಂಗ್ ರವರ ಜೀವನ , ಹೋರಾಟ, ಇತಿಹಾಸ ವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಆನಂದ್, ಶೃತಿ,.ಕೆಂಪ ,ರಾಜು, ನಾಗೇಂದ್ರ, ಮುಂತಾದವರು ಉಪಸ್ಥಿತರಿದ್ದರು.