ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಆಕಸ್ಮಿಕವಾಗಿ ಬಿದ್ದ ಬೆಂಕಿಗೆ ಭತ್ತದ ಹುಲ್ಲಿನ ಮತ್ತು ರಾಗಿ ಹುಲ್ಲಿನ ಮೆದೆ ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ಸಾಲಿಗ್ರಾಮ ತಾಲೂಕಿನ ಬೆಣಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಮಲಮ್ಮ ಕುಮಾರ್ ಎಂಬುವರಿಗೆ ಸೇರಿದ ಹುಲ್ಲಿನ ಮೇದೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಇದರಿಂದ 2 ಲಕ್ಷ ರೂ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಹುಲ್ಲಿನ ಮೇದೆಗೆ ಬೆಂಕಿ ಬಿದ್ದ ತಕ್ಷಣವೇ ಗ್ರಾಮಸ್ಥರು ಮತ್ತು ಅಗ್ನಿ ಶಾಮಕ ದಳ ಬೆಂಕಿ ಆರಿಸುವ ಪ್ರಯತ್ನ ಮಾಡಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ.
ಪರಿಹಾರ ನೀಡಿ : ಬೆಂಕಿ ಆಕಸ್ಮಿಕವಾಗಿ ಭತ್ತದ ಹುಲ್ಲಿನ ಮೆದೆ ಮತ್ತು ರಾಗಿ ಹುಲ್ಲಿನ ಮೇದೆ ಸುಟ್ಟು ಕಮಲಮ್ಮ ಕುಮಾರ್ ಅವರಿಗೆ ಅಪಾರ ನಷ್ಟವಾಗಿದ್ದು ಇವರಿಗೆ ತಾಲೂಕು ಆಡಳಿತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.



