Thursday, May 14, 2026
Google search engine

Homeರಾಜ್ಯಅಡುಗೆ ತೈಲದ ಬೆನ್ನಲ್ಲೆ ಅಕ್ಕಿಯ ದರ ಹೆಚ್ಚಳ..?

ಅಡುಗೆ ತೈಲದ ಬೆನ್ನಲ್ಲೆ ಅಕ್ಕಿಯ ದರ ಹೆಚ್ಚಳ..?

ಬೆಂಗಳೂರು: ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಜೇಬಿಗೆ ಭಾರಿ ಕತ್ತರಿ ಬಿದ್ದಿದೆ.

ಇತ್ತೀಚೆಗಷ್ಟೇ ಪ್ರತಿ ಲೀಟರ್ ಅಡುಗೆ ಎಣ್ಣೆಯ ದರ 13 ರಷ್ಟು ಹೆಚ್ಚಳವಾಗಿ ಗ್ರಾಹಕರು ಕಂಗಾಲಾಗಿದ್ದರು. ಇದರ ಬೆನ್ನಲ್ಲೇ ಇದೀಗ ನಿತ್ಯ ಬಳಕೆಯ ಮುಖ್ಯ ಆಹಾರವಾದ ಅಕ್ಕಿಯ ಬೆಲೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರಿಗೆ ಆಘಾತ ಎದುರಾಗಿದೆ.


ಮಾರುಕಟ್ಟೆಯ ಮೂಲಗಳ ಪ್ರಕಾರ, ಬೆಂಗಳೂರಿನಲ್ಲಿ ವಿವಿಧ ತಳಿಯ ಅಕ್ಕಿ ದರದಲ್ಲಿ ಶೇಕಡಾ 10 ರಷ್ಟು ಹೆಚ್ಚಳ ದಾಖಲಾಗಿದೆ. ಮುಂಬರುವ ದಿನಗಳಲ್ಲಿ ಪ್ರತಿ ಕೆಜಿ ಅಕ್ಕಿಗೆ ₹10 ರವರೆಗೆ ದರ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರ್ತಕರು ಮುನ್ಸೂಚನೆ ನೀಡಿದ್ದಾರೆ. ರಫ್ತು ಪ್ರಮಾಣದಲ್ಲಿ ಉಂಟಾಗಿರುವ ಗಣನೀಯ ಹೆಚ್ಚಳ ಹಾಗೂ ಮಾರುಕಟ್ಟೆಗೆ ಭತ್ತದ ಆವಕ ಕಡಿಮೆಯಾಗಿರುವುದೇ ಈ ದಿಢೀರ್ ಬೆಲೆ ಏರಿಕೆಗೆ ಮುಖ್ಯ ಕಾರಣ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular