Friday, April 4, 2025
Google search engine

Homeಅಪರಾಧಹುಟ್ಟು ಹಬ್ಬ ಆಚರಣೆ ವೇಳೆ ಗಲಾಟೆ: ಓರ್ವನಿಗೆ ಚಾಕು ಇರಿತ

ಹುಟ್ಟು ಹಬ್ಬ ಆಚರಣೆ ವೇಳೆ ಗಲಾಟೆ: ಓರ್ವನಿಗೆ ಚಾಕು ಇರಿತ

ಮೈಸೂರು: ಹುಟ್ಟುಹಬ್ಬ(Birthday) ಆಚರಣೆ(Celebration) ವೇಳೆ ನಡೆದ ಗಲಾಟೆಯಲ್ಲಿ ಅನ್ಯ ಕೋಮಿನ ಯುವಕರಿಂದ ಯುವಕನೋರ್ವನಿಗೆ ಚಾಕು ಇರಿದಿರುವ ಘಟನೆ ನಂಜನಗೂಡು(Nanjangud) ಪಟ್ಟಣದ ನೀಲಕಂಠನಗರದಲ್ಲಿ ನಡೆದಿದೆ.

ಪ್ರಸಾದ್ (22) ಚಾಕು ಇರಿತಕ್ಕೊಳಗಾದ ಯುವಕ.

ಹುಟ್ಟುಹಬ್ಬ ಆಚರಿಸುತ್ತಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅನ್ಯಕೋಮಿನ ಯುವಕರು, ಇಲ್ಲಿ ಹುಟ್ಟುಹಬ್ಬ ಆಚರಿಸಬೇಡಿ. ಇನ್ನು ಮುಂದೆ ನಿಮ್ಮ ಮನೆಗಳಲ್ಲಿ ಹುಟ್ಟುಹಬ್ಬ ಆಚರಿಸಿ. ಇದು ನಮ್ಮ ಸರ್ಕಾರ, ನೀವು ಹಿಂದೂಗಳು ಏನು ಮಾಡಲಾಗುವುದಿಲ್ಲ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ

ಬಳಿಕ ನಡೆದ ಗಲಾಟೆಯಲ್ಲಿ ಚಾಕು ಇರಿಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಗಾಯಗೊಂಡಿರುವ ಪ್ರಸಾದ್‌ ಗೆ ನಂಜನಗೂಡು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಮೈಸೂರಿನ‌ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ಶೋಹೆಬ್, ಶಹೇನಸಾ, ಸಲ್ಮಾನ್, ಇಲ್ಲು ಹಾಗೂ ಜಾಫರ್ ವಿರುದ್ದ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

RELATED ARTICLES
- Advertisment -
Google search engine

Most Popular