ಹೊಸೂರು : ಅಂಗವೈಕಲ್ಯವನ್ನು ಗೌಪ್ಯವಾಗಿಟ್ಟುಕೊಂಡರೆ ಜೀವನಪೂರ್ತಿ ನರಕವಾಗಲಿದ್ದು ಸಾಧ್ಯವಾದಷ್ಟು ಚಿಕಿತ್ಸಾವಿಧಾನಗಳಿಂದ ಅದನ್ನು ಭಾಗಶಃ ಮೆಟ್ಟಿನಿಂತು ಗೌರವಯುತ ಜೀವನ ನಡೆಸಬಹುದು ಎಂದು ಹಳಿಯೂರು ಗ್ರಾಪಂ ಅಧ್ಯಕ್ಷೆ ರೇಖಾಜಗದೀಶ್ ಹೇಳಿದರು.
ಸಾಲಿಗ್ರಾಮ ತಾಲ್ಲೋಕಿನ ಹೊಸೂರು ಗ್ರಾಮದಲ್ಲಿ ಕಾಂಗ್ರೇಸ್ ಪಕ್ಷ ಮತ್ತು ಲಯನ್ಸ್ ಕ್ಲಬ್ ಮೈಸೂರು ವತಿಯಿಂದ ನಡೆದ ವಾಕ್ ಮತ್ತು ಶ್ರವಣದೋಷ ಪತ್ತೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ದಿವ್ಯಾಂಗರನ್ನು ಸಮುದಾಯಗಳು ಇಂದಿಗೂ ಕೀಳರಿಮೆಯಿಂದ ನೋಡುವ ಸನ್ನಿವೇಶಗಳಿದ್ದು ಇಂತಹ ಶಿಬಿರಗಳ ಮೂಲಕ ಜಾಗೃತಿ ಮೂಡಿಸುತ್ತಿರುವುದು ಅಭಿನಂಧನೀಯ ಎಂದರು.
ಲಯನ್ಸ್ ಕ್ಲಬ್ ಕೃಷ್ಣರಾಜದ ಅಧ್ಯಕ್ಷ ಜಿ.ಮಹೇಂದ್ರ ಮಾತನಾಡಿ ನಮ್ಮ ವತಿಯಿಂದ ಚಿಕಿತ್ಸೆ ಮತ್ತು ಉಚಿತವಾದ ಶ್ರವಣ ಸಾಧನಗಳನ್ನು ದಿವ್ಯಾಂಗರಿಗೆ ವಿತರಿಸಲಾಗುತ್ತಿದ್ದು ಇಲ್ಲಿನ ಶಾಸಕ ರವಿಶಂಕರ್ ಅವರ ಒತ್ತಾಯದ ಮೇರೆಗೆ ಕೆ.ಆರ್ ನಗರ ಕ್ಷೇತ್ರದಲ್ಲಿ ೫ ಕಡೆಗಳಲ್ಲಿ ಶಿಬಿರವನ್ನು ಆಯೋಜಿಸಿದ್ದು ಸಾವಿರಾರು ಮಂದಿ ಇದರ ಸದುಪಯೋಗಪಡಿಸಿಕೊಂಡಿದ್ದು ನಾಳೆ ೧೧ರ ಗುರುವಾರ ಚುಂಚನಕಟ್ಟೆ ಹೋಬಳಿ ಹೊಸಕೋಟೆ ಗ್ರಾಮದಲ್ಲಿಯೂ ಶಿಬಿರ ಇದ್ದು ಇದರ ಪ್ರಯೋಜನಪಡೆದುಕೊಳ್ಳಿ ಎಂದರು.
ಶಿಬಿರದ ಅಂಗವಾಗಿ ಶಾಸಕ ರವಿಶಂಕರ್ ಅವರ ಪತ್ನಿ ಸುನಿತಾರವಿಶಂಕರ್ ಅವರ ಪರವಾಗಿ ದಿವ್ಯಾಂಗ ಬಾಲಕಿಗೆ ಉಚಿತ ಬೈಸಿಕಲ್ ವಿತರಿಸಲಾಯಿತು ಹಾಗೂ ಶಿಬಿರದಲ್ಲಿ ೨೦೦ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆದು ಕೊಂಡರು.
ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಮುಖಂಡ ಡೇರಿ ಮಾದು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದಮ್ಮನಹಳ್ಳಿ ಉದಯ್, ಗ್ರಾ. ಪಂ ಉಪಾಧ್ಯಕ್ಷ ನೂತನ್,ಮಾಜಿ ಉಪಾಧ್ಯಕ್ಷ ಮಂಜುನಾಥ್,ಸಹಕಾರ ಸಂಘದ ನಿರ್ದೇಶಕ ಹಳಿಯೂರುಜಗದೀಶ್,ಹೊಸೂರು ಆಸ್ಪತ್ರೆ ವೈಧ್ಯಾಧಿಕಾರಿ ಡಾ|| ಸುನಂದ,ಲಯನ್ಸ್ ಕ್ಲಬ್ ಉಪಾಧ್ಯಕ್ಷ ಆಕಾಶ್,ಪಿಡಿಒ ಸುನಿಲ್‌ಅಂಕನಹಳ್ಳಿ, ಮುಖಂಡರಾದ ಉಷಾಪ್ರಶನ್ನ, ನದ್ದು ಮತ್ತಿತರರು ಹಾಜರಿದ್ದರು.