Friday, April 11, 2025
Google search engine

Homeಅಪರಾಧಬಿಹಾರ್‌ದಲ್ಲಿ ಆರ್‌ಜೆಡಿ ನಾಯಕನಿಗೆ ಗುಂಡಿಕ್ಕಿ ಹತ್ಯೆ

ಬಿಹಾರ್‌ದಲ್ಲಿ ಆರ್‌ಜೆಡಿ ನಾಯಕನಿಗೆ ಗುಂಡಿಕ್ಕಿ ಹತ್ಯೆ

ಪಾಟ್ನಾ: ಮೊದಲ ಬಾರಿಗೆ ಚುನಾಯಿತರಾಗಿದ್ದ ಕೌನ್ಸಿಲರ್, ಆರ್ ಜೆಡಿ ನಾಯಕನನ್ನು ಬೈಕ್ ನಲ್ಲಿ ಬಂದ ಗುಂಪೊಂದು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಿಹಾರ್‌ನಲ್ಲಿ ನಡೆದಿದೆ.

ಸ್ಥಳೀಯ ಕೌನ್ಸಿಲರ್ ಪಂಕಜ್ ಹತ್ಯೆಯಾದವರು. ಬಿಹಾರದ ಹಾಜಿಪುರದಲ್ಲಿರುವ ತಮ್ಮ ನಿವಾಸದ ಬಳಿಯ ಬಟ್ಟೆ ಅಂಗಡಿಯಲ್ಲಿ ಕುಳಿತಿದ್ದರು. ದ್ವಿಚಕ್ರವಾಹನದಲ್ಲಿ ಬಂದ ಮೂವರು ಪಂಕಜ್ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ.

ಹಾಜಿಪುರದ ವಾರ್ಡ್ ನಂ.೫ ರಲ್ಲಿ ಮೊದಲ ಬಾರಿಗೆ ಚುನಾಯಿತರಾದ ಕೌನ್ಸಿಲರ್ ಮತ್ತು ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ (RJD) ಸದಸ್ಯ ರೈ ಆತ್ಮರಕ್ಷಣೆಗೆ ಮನೆ ಕಡೆ ಓಡಿದರು. ಆದಾಗ್ಯೂ, ದಾಳಿಕೋರರು ಹಿಂಬಾಲಿಸಿ ಗುಂಡಿನ ದಾಳಿ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular