ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : 15ಕೋಟಿ ರೂಗಳ ವೆಚ್ಚದಲ್ಲಿ ಕೆಸ್ತರು ಕೊಪ್ಪಲು ಗೇಟ್ ನಿಂದ ಕೆ ಆರ್ ನಗರ ತಾಲೂಕಿನ ಗಡಿ ಗ್ರಾಮ ಮಾದಹಳ್ಳಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಡಿ ರವಿಶಂಕರ್ ಹೇಳಿದರು.

ಕೆ ಆರ್ ನಗರ ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದ ಚಾಮರಾಜ ಬಲದಂಡೆ ನಾಲೆಯ 15 ಕೋಟಿ ರೂ ವೆಚ್ಚದ ಅಕ್ವಾಡಕ್ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ನಾಲೆ ನಿರ್ಮಾಣದ ಸಮಯದಲ್ಲಿ 180 ವರ್ಷಗಳ ಹಿಂದೆ ಆಕ್ವಾಡಕ್ ನಿರ್ಮಾಣ ಮಾಡಿದ್ದು ಈಗಾಗಲೇ ಶಿಥಿಲಗೊಂಡು ನೀರಿನ ಹರಿವಿಗೆ ತೊಂದರೆಯಾಗಿ ನಾಳೆಯ ಕೊನೆಯ ಹಂತದ ರೈತರ ಭೂಮಿಗಳಿಗೆ ನೀರಿನ ಕೊರತೆಯನ್ನು ಗಮನಿಸಿ ಕಾಮಗಾರಿಗೆ ಅನುದಾನ ಕೋರಲಾಗಿತ್ತು ಅದರಂತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಈ ಕಾಮಗಾರಿಗಾಗಿ ಸುಮಾರು ಐದು ಜನ ರೈತರ ಜಮೀನು ಸ್ವಾಧೀನಕ್ಕಾಗಿ ಬೇಕಿದ್ದು ಅವರಿಗೆ ಯಾವುದೇ ರೀತಿ ಅನ್ಯಾಯವಾಗದಂತೆ ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಚಾಮರಾಜ ಬಲದಂಡೆ ಮತ್ತು ಎಡದಂಡೆ ನಾಲೆಯ ವ್ಯಾಪ್ತಿಯ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರುಹರಿಸುವ ಸಲುವಾಗಿ ಶಾಸಕ ಮಂತರ್ ಗೌಡ ಅವರ ನೀರಾವರಿ ಸಲಹಾ ಸಮಿತಿಗೆ ಮನವಿ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ನಾಲೆ ನೀರಿಗೆ ತೊಂದರೆಯಾಗದಂತೆ ಕ್ರಮಹಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಾರ್ಯಕ್ರಮದಲ್ಲಿ ನೀರಾವರಿ ಇಲಾಖೆಯಇಇ ಕುಶಕುಮಾರ್ ಎಇಇ ಆಯಾಜ್, ಇಂಜಿನಿಯರ್ ಕಿರಣ್, ಹಾರಂಗಿ ಇಲಾಖೆಯ ಪುಟ್ಟರಾಜು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಹದೇವ್ ವಕ್ತಾರ ಜಾಬೀರ್, ಕಬ್ಬು ಬೆಳೆಗಾರರ ಸಂಘ ದ ತಿಮ್ಮಪ್ಪ ಗ್ರಾಮದ ಮುಖಂಡರಾದ ಜವರೇಗೌಡ ಧನರಾಜ್, ಕೀರ್ತಿ ಶೇಷ, ಪುಟ್ಟರಾಜ್, ಗೇಟ್ ಮಹದೇವ್, ಜಗದೀಶ್, ರಮೇಶ್, ಗುರುರಾಜ್, ಗುತ್ತಿಗೆ ದಾರ ಬಸವರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.



