Friday, April 4, 2025
Google search engine

Homeರಾಜ್ಯಸುದ್ದಿಜಾಲಅಕ್ರಮವಾಗಿ ಗ್ರಾವೆಲ್ ಮಣ್ಣು ಸಾಗಾಟ: ದಾಳಿ ನಡೆಸಿ ದಂಡ ವಿಧಿಸಿದ ಅಧಿಕಾರಿಗಳು

ಅಕ್ರಮವಾಗಿ ಗ್ರಾವೆಲ್ ಮಣ್ಣು ಸಾಗಾಟ: ದಾಳಿ ನಡೆಸಿ ದಂಡ ವಿಧಿಸಿದ ಅಧಿಕಾರಿಗಳು

ಯಳಂದೂರು: ತಾಲೂಕಿನ ವಡಗೆರೆ ಸಮೀಪದ ಗೌಡಹಳ್ಳಿ ಎಲ್ಲೆಗೆ ಸೇರಿದ ಖಾಸಗಿ ವ್ಯಕ್ತಿಯೊಬ್ಬರ ಜಮೀನಿನಿಂದ ಯಳಂದೂರಿನಿಂದ ಬಿಳಿಗಿರಿರಂಗನಬೆಟ್ಟಕ್ಕೆ ಮಾಡುತ್ತಿರುವ ರಸ್ತೆಗೆ ಹಾಕಲು ಶ್ರೀ ಅನ್ನಪೂರ್ಣೇಶ್ವರಿ ಕನ್ಸಟ್ರಕ್ಷನ್‌ಗೆ ಸೇರಿದ ಟಿಪ್ಪರ್ (ಕೆ.ಎ.೦೯, ಸಿ. ೬೧೮೭) ನಲ್ಲಿ ಅಕ್ರಮವಾಗಿ ಗ್ರಾವೆಲ್ ಮಣ್ಣನ್ನು ಸಾಗಿಸುತ್ತಿದ್ದ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಧಾಳಿ ನಡೆಸಿ ದಂಡ ವಿಧಿಸಿರುವ ಘಟನೆ ಗುರುವಾರ ಜರುಗಿದೆ.

ವಡಗೆರೆ ಗ್ರಾಮದ ಗೌಡಹಳ್ಳಿ ಎಲ್ಲೆಗೆ ಸೇರಿದ ಸರ್ವೇನಂ. ೧೩೩ ಕ್ಕೆ ಸೇರಿದ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಜಮೀನಿನಲ್ಲಿ ಎಕ್ಸವೇಟರ್ ಮೂಲಕ ಟಿಪ್ಪರ್‌ಗಳಲ್ಲಿ ಮಣ್ಣು ತುಂಬಲಾಗುತ್ತಿತ್ತು. ಈ ಮಣ್ಣನ್ನು ಯಳಂದೂರು ಪಟ್ಟಣದಿಂದ ಬಿಳಿಗಿರಿರಂಗನಬೆಟ್ಟದ ಚೆಕ್ ಪೋಸ್ಟ್ ರಸ್ತೆ ಕಾಮಗಾರಿಯನ್ನು ಮಾಡಲು ಶ್ರೀ ಅನ್ನಪೂರ್ಣೇಶ್ವರಿ ಕನ್ಸಟ್ರಕ್ಷನ್‌ನ ಟಿಪ್ಪರ್‌ಗಳಲ್ಲಿ ತುಂಬಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಿಜ್ಞಾನಿ ಡಾ. ಮಾಲತಿ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಡಗೆರೆ ಬಿದ್ದಾಂಜನೇಯ ದೇಗುಲದ ಬಳಿ ಬರುತ್ತಿದ್ದ ಟಿಪ್ಪರ್‌ನ್ನು ವಿಚಾರಿಸಿದಾಗ ಇದಕ್ಕೆ ಇಲಾಖೆಯಿಂದ ಪೂರ್ವಾನುಮತಿ ಪಡೆದುಕೊಂಡಿಲ್ಲ ಎಂಬ ಮಾಹಿತಿ ಸಿಕ್ಕ ಮೇಲೆ ೧೫ ಮೆಟ್ರಿಕ್ ಟನ್ ತೂಕವಿದ್ದ ಈ ಟಿಪ್ಪರ್‌ಗೆ ೩೫,೧೦೦ ರೂ. ದಂಡವನ್ನು ವಿಧಿಸಲಾಯಿತು.

ಈ ಸಂದರ್ಭದಲ್ಲಿ ಭೂ ವಿಜ್ಞಾನಿ ಡಾ. ಮಾಲತಿ ಮಾಹಿತಿ ನೀಡಿ, ನಮ್ಮ ಇಲಾಖೆಯಿಂದ ಮಣ್ಣನ್ನು ಸಾಗಾಟ ಮಾಡಬೇಕಾದರೆ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕು. ಮೆಟ್ರಿಕ್ ಟನ್‌ಗೆ ನಿಗಧಿತ ರಾಯಲ್ಟಿ ಹಣವನ್ನು ಕಟ್ಟಬೇಕು. ಆದರೆ ಇವರು ಯಾವುದೇ ಅನುಮತಿಯನ್ನು ಪಡೆದುಕೊಂಡಿಲ್ಲ. ಹಾಗಾಗಿ ಇದಕ್ಕೆ ದಂಡ ಹಾಕಲಾಗಿದೆ. ಅಲ್ಲದೆ ಇಲ್ಲಿ ಮಣ್ಣೆತ್ತುವ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಗರ ರಜಸ್ವ ರಮೇಶ್, ಕಸಬಾ ಹೋಬಳಿ ರಜಸ್ವ ನಿರೀಕ್ಷಕ ಯದುಗಿರಿ, ಗ್ರಾಮ ಲೆಕ್ಕಾಧಿಕಾರಿ ರಮ್ಯಶ್ರೀ, ಸುಹಾಸ್ ನೇತೃತ್ವದ ತಂಡ ಸ್ಥಳ ಮಹಜರು ನಡೆಸಿದರು.


RELATED ARTICLES
- Advertisment -
Google search engine

Most Popular