Friday, April 18, 2025
Google search engine

Homeಸಿನಿಮಾಇಂದು ತೆರೆ ಕಾಣುತ್ತಿರುವ ‘ರೋಡ್ ಕಿಂಗ್’, ‘ಅಗ್ರಸೇನಾ’, ‘ಮೊದಲ ಮಳೆ’

ಇಂದು ತೆರೆ ಕಾಣುತ್ತಿರುವ ‘ರೋಡ್ ಕಿಂಗ್’, ‘ಅಗ್ರಸೇನಾ’, ‘ಮೊದಲ ಮಳೆ’

ಮುರುಗೇಶ್‌ ಕಣ್ಣಪ್ಪ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಅಗ್ರಸೇನಾ ಚಿತ್ರ ಇಂದು ರಾಜ್ಯಾದ್ಯಂತ ತೆರೆಕಾಣಲಿದೆ. ಮಮತಾ ಜಯರಾಮರೆಡ್ಡಿ ಹಾಗೂ ಜಯರಾಮರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಹಳ್ಳಿ ಹಾಗೂ ನಗರದಲ್ಲಿ ಡಬಲ್‌ ಟ್ರ್ಯಾಕ್‌ ನಲ್ಲಿ ಸಾಗುವ ಕಥಾಹಂದರ ಈ ಚಿತ್ರದಲ್ಲಿದ್ದು, ತಂದೆ-ಮಗನ ಸಂಬಂಧದ ಕಥೆ ಒಂದು ಕಡೆಯಾದರೆ, ನಾಯಕ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೇಗೆ ಹೋರಾಡುತ್ತಾನೆ ಎನ್ನುವುದು ಮತ್ತೊಂದು ಟ್ರಾಕ್‌ ನಲ್ಲಿ ಸಾಗುತ್ತದೆ. ಆ್ಯಕ್ಷನ್‌ ಫ್ಯಾಮಿಲಿ, ಲವ್‌, ಸೆಂಟಿಮೆಂಟ್‌ ಎಲ್ಲಾ ರೀತಿಯ ಅಂಶಗಳನ್ನು ಒಳಗೊಂಡ ಈ ಚಿತ್ರದಲ್ಲಿ ಅಮರ್‌ ವಿರಾಜ್‌ ಹಾಗೂ ಅಗಸ್ತ್ಯ ಬೆಳಗೆರೆ ಇಬ್ಬರು ನಾಯಕರಾಗಿ ಕಾಣಿಸಿಕೊಂಡಿದ್ದಾರೆ, ರಚನಾ ದಶರಥ್‌, ಭಾರತಿ ಹೆಗ್ಡೆ ನಾಯಕಿಯರಾಗಿ ನಟಿಸಿದ್ದಾರೆ. ಅಲ್ಲದೆ ಚಿತ್ರದಲ್ಲಿ ಹಿರಿಯ ನಟ ರಾಮಕೃಷ್ಣ ಅವರು ಗ್ರಾಮದ ಮುಖಂಡ ಸೂರಪ್ಪ

ಹಾಗೂ ನಾಯಕನ ತಂದೆಯ ಪಾತ್ರ ನಿರ್ವಹಿಸಿದ್ದಾರೆ. ಚಿತ್ರಕ್ಕೆ ಎಂ.ಎಸ್‌. ತ್ಯಾಗರಾಜ್‌ ಸಂಗೀತ ನಿರ್ದೇಶನ, ಆರ್‌.ಪಿ.ರೆಡ್ಡಿ ಅವರ ಛಾಯಾಗ್ರಹಣವಿದೆ

ರೋಡ್‌ ಕಿಂಗ್‌

ಮತೀನ್‌ ಹುಸೇನ್‌ ಅಭಿನಯದ “ರೋಡ್‌ ಕಿಂಗ್‌’ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ ರಾಂಡಿ ಕೆಂಟ್‌ ಎಂಬ ಹಾಲಿವುಡ್‌ ನಿರ್ದೇಕರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

 “ರೋಡ್‌ ಕಿಂಗ್‌’ ಚಿತ್ರದ ನಾಯಕ ಮತ್ತು ನಿರ್ಮಾಪಕರೂ ಆಗಿರುವ ಮತೀನ್‌ ಹುಸೇನ್‌ ಮೂಲತಃ ಬೆಂಗಳೂರಿನವರಾದರೂ ಬೆಳೆದಿದ್ದೆಲ್ಲಾ ಅಮೆರಿಕಾದಲ್ಲಿ. ಕೋಲಾರದಲ್ಲಿ ನಡೆದ ನೈಜ ಘಟನೆ ಆಧರಿಸಿ ಒಂದು ಸಣ್ಣ ಬಜೆಟ್‌ ಚಿತ್ರ ಮಾಡುವುದಕ್ಕೆ ಹೊರಟಾಗ, ಸೂಕ್ತ ನಿರ್ದೇಶಕರು ಸಿಗಲಿಲ್ಲವಂತೆ. ಆಗ ಅವರಿಗೆ ನೆನಪಾಗಿದ್ದೇ ರಾಂಡಿ ಕೆಂಟ್‌. ಮತೀನ್‌ ಮತ್ತು ರಾಂಡಿ ಹಳೆಯ ಸ್ನೇಹಿತರು. ಸ್ನೇಹದಲ್ಲಿ ಚಿತ್ರ ಮಾಡಿಕೊಡುವುದಕ್ಕೆ ಕೇಳಿಕೊಂಡಾಗ, ಮೊದಲು ರಾಂಡಿ ಹಿಂದೇಟು ಹಾಕಿದರಂತೆ. ಕಾರಣ, ಅವರಿಗೆ ಕನ್ನಡ ಭಾಷೆ ಗೊತ್ತಿಲ್ಲದಿರುವುದು. ಕೊನೆಗೆ ಒಪ್ಪಿ ಅವರು ಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಅಂದಹಾಗೆ, ಈ ಚಿತ್ರದ ನಿರ್ದೇಶನವನ್ನು ದೂರದ ಅಮೆರಿಕಾದಲ್ಲಿದ್ದುಕೊಂಡು ಸ್ಕೈಪ್‌ ಮೂಲಕವೇ ಮಾಡಿದ್ದಾರೆ. ಅದಕ್ಕೆ ಕಾರಣವೂ ಇದೆ. ಈ ಬಗ್ಗೆ ಮಾತನಾಡುವ ಮತೀನ್‌, “ಚಿತ್ರೀಕರಣಕ್ಕೆ ಎಲ್ಲ ತಯಾರಿಯೂ ಆಗಿತ್ತು. ಆದರೆ, ರಾಂಡಿಗೆ ವೀಸಾ ಸಿಗಲಿಲ್ಲ. ಎರಡನೆಯ ಬಾರಿಗೂ ಅದೇ ರೀತಿ ಆಯಿತು. ಕೊನೆಗೆ ಅವರು ಸ್ಕೈಪ್‌ ಮೂಲಕವೇ ಚಿತ್ರ ನಿರ್ದೇಶನ ಮಾಡಿದ್ದಾರೆ’ ಎನ್ನುತ್ತಾರೆ ಮತೀನ್‌.

ಹೊಸಬರ ಮೊದಲ ಮಳೆ

ಸಂಪೂರ್ಣ ಹೊಸಬರೇ ಸೇರಿಕೊಂಡು ಮಾಡಿರುವ “ಮೊದಲ ಮಳೆ’ ಎಂಬ ಚಿತ್ರ ಕೂಡಾ ಇಂದು ತೆರೆಕಾಣುತ್ತಿದೆ. ರಾಜನರಸಿಂಹ ಎನ್ನುವವರು ಈ ಸಿನಿಮಾವನ್ನು ನಿರ್ಮಿಸಿ, ನಾಯಕರಾಗಿ ನಟಿಸಿದ್ದಾರೆ. ರಾಜಶರಣ್‌ ಈ ಚಿತ್ರದ ನಿರ್ದೇಶಕರು.

RELATED ARTICLES
- Advertisment -
Google search engine

Most Popular