Friday, April 11, 2025
Google search engine

Homeರಾಜ್ಯಸುದ್ದಿಜಾಲತಮಿಳುನಾಡಿಗೆ ಕಾವೇರಿ ನೀರು ವಿರೋಧಿಸಿ ರಸ್ತೆತಡೆ ಚಳುವಳಿ: ರೈತರ ಬಂಧನ,ಬಿಡುಗಡೆ

ತಮಿಳುನಾಡಿಗೆ ಕಾವೇರಿ ನೀರು ವಿರೋಧಿಸಿ ರಸ್ತೆತಡೆ ಚಳುವಳಿ: ರೈತರ ಬಂಧನ,ಬಿಡುಗಡೆ

ಟಿ ನರಸೀಪುರ: ಇಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬುಬೆಳೆಗಾರರ ಸಂಘ ಟಿ.ನರಸೀಪುರ ತಾಲೂಕು ಘಟಕದಿಂದ ಕಬಿನಿ ,ಕಾವೇರಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನ ವಿರೋಧಿಸಿ ಮೈಸೂರು- ಟಿ ನರಸೀಪುರ ರಾಷ್ಟ್ರೀಯ ಹೆದ್ದಾರಿ ಬಿಂದಿಗೆ ಫ್ಯಾಕ್ಟರಿ ಹತ್ತಿರ ರೈತರು ಸುಮಾರು ಒಂದು ಗಂಟೆ ಕಾಲ ರಸ್ತೆ ಬಂದ್ ಮಾಡಿ ರೈತರ ಭತ್ತದ ಬೆಳೆಗೆ ನಿರಂತರವಾಗಿ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಚಳುವಳಿ ಮುಖಾಂತರ ಬಿಸಿ ಮುಟ್ಟಿಸಲಾಯಿತು.

ನದಿಯಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ರಾಜ್ಯದ ರೈತರ ಹಿತರಕ್ಷಣೆ ಕಾಪಾಡಬೇಕು ಎಂದು ಒತ್ತಾಯಿಸಲಾಯಿತು. ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ, ಬೇಕೇ ಬೇಕು ನ್ಯಾಯ ಬೇಕು ತಮಿಳುನಾಡಿಗೆ ನೀರು ನಿಲ್ಲಲೇ ಬೇಕು ಎಂದು ಘೋಷಣೆ ಕೂಗಲಾಯಿತು. ನಂತರ ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಕಿರಗಸೂರು ಶಂಕರ್ ಹಾಗೂ ಕುರುಬೂರು ಸಿದ್ದೇಶ್ ಚಳುವಳಿ ಜಾಗದಲ್ಲಿ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿ ರಾಜ್ಯದ ರೈತರ ಹಿತ ಕಾಯುವಂತೆ ರಾಜ್ಯ ಸರ್ಕಾರಕ್ಕೆ ಓತ್ತಾಯಿಸಲಾಯಿತು. ರಸ್ತೆಯಲ್ಲಿ ವಾಹನಗಳ ಸಂಚಾರ ಹಸ್ತವ್ಯಸ್ತ ಕಾರಣ ಚಳುವಳಿ ನಿರತ ರೈತರನ್ನು ಪೊಲೀಸರು ಬಂಧಿಸಿ ಆನಂತರ ಬಿಡುಗಡೆ ಮಾಡಿದರು.

ಇಂದಿನ ಚಳುವಳಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಹಳ್ಳಿ ಕೆರೆಹುಂಡಿ ಭಾಗ್ಯರಾಜ್, ಕಿರಗಸೂರ್ ಶಂಕರ್, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಪ್ರಸಾದ್ ನಾಯಕ್, ಪ್ರದೀಪ್ ಕುರುಬೂರು,ರಾಜೇಶ್, ಆದಿ ಬೆಟ್ಟಳ್ಳಿ ನಂಜುಂಡಸ್ವಾಮಿ, ಅನಿಲ್ ಹೊಸೂರು, ಗೌರಿಶಂಕರ್, ವಾಜ್ ಕುಮಾರ್, ತರಕಾರಿ ನಿಂಗರಾಜು, ಅಪ್ಪಣ್ಣ, ಮಾದೇವ ಪ್ರಸಾದ್, ಜಾಲಹಳ್ಳಿ ರಾಜೇಶ್, ಉಮೇಶ್ ಇನ್ನು ಹಲವು ರೈತರು ಚಳುವಳಿಯಲ್ಲಿ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular