ಚಾಮರಾಜನಗರ: ಒಂದು ಕಾಲದ ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾಗೂ ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿರುವ ರೋಜರ್ ಬಿನ್ನಿ ಅವರು ಇಂದು ಚಾಮರಾಜನಗರದಲ್ಲಿ ಹೊಸ ಟ್ರಾಕ್ಟರ್ ಖರೀದಿ ಮಾಡಿದ್ದಾರೆ.
ಚಾಮರಾಜನಗರದ ಮೈಸೂರು ರಸ್ತೆಯಲ್ಲಿರುವ ಮಹೀಂದ್ರಾ ಟ್ರಾಕ್ಟರ್ ಶೋರೂಂನಲ್ಲಿ ಮಹೀಂದ್ರ ಕಂಪನಿಯ ಟ್ರಾಕ್ಟರ್ ಕೊಂಡುಕೊಂಡರು.ನಮ್ಮ ಪೂರ್ವಿಕರು ಕೃಷಿಕರಲ್ಲ. ನಾನು ಇತ್ತೀಚೆಗೆ ಕೃಷಿ ಮೇಲೆ ಉತ್ಸಾಹ ಹೊಂದಿದ್ದೇನೆ. ಗುಂಡ್ಲುಪೇಟೆಯ ಸಮೀಪದಲ್ಲಿ ಜಮೀನು ಖರೀದಿ ಮಾಡಿದ್ದೇನೆ. ಹತ್ತಿರದ ಶೋರೂಂನಲ್ಲಿ ಟ್ರಾಕ್ಟರ್ ಖರೀದಿ ಮಾಡಬೇಕೆಂದು ಚಾಮರಾಜನಗರದ ಟ್ರಾಕ್ಟರ್ ಶೋರೂಂನಲ್ಲಿ ಟ್ರಾಕ್ಟರ್ ಖರೀದಿ ಮಾಡಿದ್ದೇನೆ ಎಂದು ಬಿನ್ನಿ ತಿಳಿಸಿದರು.
ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ನಮ್ಮ ಶೋ ರೂಂನಲ್ಲಿ ಟ್ರಾಕ್ಟರ್ ಖರೀದಿ ಮಾಡಿರುವುದು ತುಂಬಾ ಖುಷಿ ತಂದಿದೆ ಎಂದು ಶೋ ರೂಂ ಮಾಲೀಕ ಸಂತಸ ವ್ಯಕ್ತಪಡಿಸಿದ್ದಾರೆ.
ಮಹೀಂದ್ರಾ ಟ್ರಾಕ್ಟರ್ ಕಂಪನಿಯ ರಾಜ್ಯ ಮುಖ್ಯಸ್ಥರ ಅರವಿಂದ್ ಪಾಂಡೆ, ಮೌಲಿಕ್‌ತಕ್ಕರ್ ಅವರು ರೋಜರ್ ಬಿನ್ನಿಗೆ ವಾಹನ ಕೀ ಹಸ್ತಾಂತರ ಮಾಡಿದರು.