Friday, April 4, 2025
Google search engine

Homeಕ್ರೀಡೆದೆಹಲಿ ಕ್ರಿಕೆಟ್​ ಸಂಸ್ಥೆ ಅಧ್ಯಕ್ಷರಾಗಿ ರೋಹನ್​ ಜೇಟ್ಲಿ ಪುನರಾಯ್ಕೆ

ದೆಹಲಿ ಕ್ರಿಕೆಟ್​ ಸಂಸ್ಥೆ ಅಧ್ಯಕ್ಷರಾಗಿ ರೋಹನ್​ ಜೇಟ್ಲಿ ಪುನರಾಯ್ಕೆ

ಕರಾಚಿ: ಮಾಜಿ ಕೇಂದ್ರ ಸಚಿವ ಅರುಣ್​ ಜೇಟ್ಲಿ ಅವರ ಪುತ್ರ ರೋಹನ್​ ಜೇಟ್ಲಿ ಅವರು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್​ ಸಂಸ್ಥೆ (ಡಿಡಿಸಿಎ) ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದ ಕೀರ್ತಿ ಆಜಾದ್ ಅವರನ್ನು ಸೋಲಿಸಿ ಸತತ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.

ವೃತ್ತಿಯಲ್ಲಿ ವಕೀಲರಾಗಿರುವ ರೋಹನ್​ ಜೇಟ್ಲಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಕೀರ್ತಿ ಆಜಾದ್​ ಡಿಡಿಸಿಎ ಚುನಾವಣೆಯ ಕಾವು ಏರಿಸಿದ್ದರು. ಆದರೂ ಅವರಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ರೋಹನ್ ಜೇಟ್ಲಿ 1577 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಆಜಾದ್ 777 ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಿಖಾ ಕುಮಾರ್ (1246 ಮತಗಳು) ರಾಕೇಶ್ ಕುಮಾರ್ ಬನ್ಸಾಲ್ (536) ಮತ್ತು ಸುಧೀರ್ ಕುಮಾರ್ ಅಗರ್ವಾಲ್ (498) ಅವರನ್ನು ಸೋಲಿಸಿದರು.

ಕಾರ್ಯದರ್ಶಿ ಹುದ್ದೆಗೆ ಜೇಟ್ಲಿ ಬಣದ ಅಶೋಕ್ ಶರ್ಮಾ ಮತ್ತು ವಿನೋದ್ ತಿಹಾರ ನಡುವೆ ತೀವ್ರ ಪೈಪೋಟಿ ಇತ್ತು. ಆದಾಗ್ಯೂ, ಶರ್ಮಾ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು. ಅವರು 893 ಮತಗಳೊಂದಿಗೆ ಗೆದ್ದು ಬೀಗಿದರು. ಎದುರಾಳಿ ತಿಹಾರ 744 ಮತಗಳನ್ನು ಪಡೆದರು.

ಖಜಾಂಚಿ ಹುದ್ದೆಗೆ ನಡೆದ ಸ್ಪರ್ಧೆಯಲ್ಲಿ ಹರೀಶ್ ಸಿಂಗ್ಲಾ 1328 ಮತಗಳನ್ನು ಪಡೆದರೆ, ಜಂಟಿ ಕಾರ್ಯದರ್ಶಿಯಾಗಿ ಅಮಿತ್ ಗ್ರೋವರ್ (1189) ಆಯ್ಕೆಯಾದರು. ನಿರ್ದೇಶಕ ಹುದ್ದೆಗೆ ಆನಂದ್ ವರ್ಮಾ (985), ಮಂಜಿತ್ ಸಿಂಗ್ (1050), ನವದೀಪ್ ಎಂ (1034), ಶ್ಯಾಮ್ ಶರ್ಮಾ (1165), ತುಷಾರ್ ಸೈಗಲ್ (926), ವಿಕಾಸ್ ಕತ್ಯಾಲ್ (1054), ವಿಕ್ರಮ್ ಕೊಹ್ಲಿ (939) ವಿಜೇತರಾಗಿದ್ದಾರೆ.

ಜಯ್‌ ಶಾ ಅವರು ಐಸಿಸಿ ಅಧ್ಯಕ್ಷರಾದ ಕಾರಣ ಅವರಿಂದ ತೆರವಾದ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ರೋಹನ್​ ಜೇಟ್ಲಿ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿತ್ತು. ಆದರೆ ಅವರು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್​ ಸಂಸ್ಥೆಯಲ್ಲೇ ಮುಂದುವರಿಯಲು ಬಯಸಿದ್ದರಿಂದ ಹೊಸ ಹುಡುಕಾಟ ಆರಂಭವಾಗಿದೆ. ಸದ್ಯ ಜಂಟಿ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ಅವರನ್ನು ಬಿಸಿಸಿಐ ಹಂಗಾಮಿ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

RELATED ARTICLES
- Advertisment -
Google search engine

Most Popular