ನವದೆಹಲಿ : ಟಿ 20 ವಿಶ್ವಕಪ್ ಚಾಂಪಿಯನ್ ನಾಯಕ ರೋಹಿತ್ ಶರ್ಮಾಗೆ ಗೌರವ ಡಾಕ್ಟರೇಟ್ ಲಭಿಸಿದ್ದು, ಕ್ರಿಕೆಟ್ ಜೀವನದಲ್ಲಿ ತೋರಿರುವ ಸಾಧನೆ, ಸಮರ್ಪಣೆ ಹಾಗೂ ಭಾರತದ ಕ್ರಿಕೆಟ್ ಅಭಿವೃದ್ಧಿಗೆ ತಮ್ಮ ನಾಯಕತ್ವದಲ್ಲಿ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅಜಿಂಕ್ಯಾ ಡಿ.ವೈ ಪಾಟೀಲ್ ವಿಶ್ವವಿದ್ಯಾಲಯವು ಹಿಟ್ ಮ್ಯಾನ್ ಗೆ ಗೌರವ ಡಾಕ್ಟರೇಟ್ ಘೋಷಿಸಿದೆ.
ಶನಿವಾರ(ಡಿ.24)ರಂದು ನಡೆಯಲಿರುವ ಅಜಿಂಕ್ಯಾ ಡಿ.ವೈ.ಪಾಟೀಲ್ ವಿಶ್ವವಿದ್ಯಾಲಯದ 10ನೇ ವಾರ್ಷಿಕೋತ್ಸವದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕನಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದ್ದು, ರೋಹಿತ್ ಶರ್ಮಾ ಅವರು ತಮ್ಮ ಕ್ರಿಕೆಟ್ ಜೀವನದಲ್ಲಿ ಅನೇಕ ಮೈಲುಗಲ್ಲು ಸಾಧಿಸಿದ್ದಾರೆ, ಅವರ ಈ ಸಾಧನೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿದ್ದೇವೆ ಎಂದು ವಿವಿಯ ಅಧ್ಯಕ್ಷ ಡಾ.ಅಜಿಂಕ್ಯಾ ಡಿ.ವೈ.ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟೆಸ್ಟ್ ಹಾಗೂ ಟ್ವೆಂಟಿ-20 ಕ್ರಿಕೆಟ್ ವಿದಾಯ ಹೇಳಿರುವ ರೋಹಿತ್ ಶರ್ಮಾ ಅವರು ಸದ್ಯ ಏಕದಿನ ಕ್ರಿಕೆಟ್ ನಲ್ಲಿ ಸಕ್ರಿಯರಾಗಿದ್ದು, 67 ಟೆಸ್ಟ್ ಪಂದ್ಯಗಳಿಂದ 4301 ರನ್(12 ಶತಕ, 18 ಅರ್ಧಶತಕ), 282 ಏಕದಿನ ಪಂದ್ಯಗಳಲ್ಲಿ 11,577 ರನ್ (33 ಶತಕ,61 ಅರ್ಧಶತಕ) ಹಾಗೂ ಟ್ವೆಂಟಿ-20ಯ 159 ಪಂದ್ಯಗಳಿಂದ 5 ಶತಕ ಹಾಗೂ 32 ಅರ್ಧಶತಕಗಳ ಸಹಿತ 4231 ರನ್ ಬಾರಿಸಿದ್ದಾರೆ.
ಇನ್ನೂ ಮಾಜಿ ಕ್ರಿಕೆಟಿಗ ಅವಿಷ್ಕಾರ್ ಸಾಲ್ವಿ ಅವರು ಆಸ್ಟ್ರೋಫಿಸಿಕ್ಸ್ ನಲ್ಲಿ ಪಿಎಚ್ಡಿ ಪಡೆದು ಡಾಕ್ಟರೇಟ್ ಪಡೆದ ಏಕೈಕ ಕ್ರಿಕೆಟಿಗರಾಗಿದ್ದಾರೆ.
ಡಾಕ್ಟರೇಟ್ ಪಡೆದ ಇತರ ಭಾರತೀಯ ಆಟಗಾರರು ನೋಡುವುದಾದರೇ :
- ಮಹೇಂದ್ರಸಿಂಗ್ ಧೋನಿ- 2011- ಡಿ ಮೋಂಟ್ಫೋರ್ಟ್ ವಿವಿ-ಯುಕೆ
- ಸೌರವ್ ಗಂಗೂಲಿ- 2014- ಬೆಂಗಾಲ್ವಿವಿ
- ವಿವಿಎಸ್ ಲಕ್ಷ್ಮಣ್- 2015-ಥೇರಿ ವಿವಿ
- ಯುವರಾಜ್ ಸಿಂಗ್-2017- ಐಟಿಎಂ ವಿವಿ- ಗ್ವಾಲಿಯರ್
- ಸುರೇಶ್ ರೈನಾ- 2022- ವಿಇಎಲ್ಎಸ್ ವಿವಿ, ಚೆನ್ನೈ
- ಸುನೀಲ್ ಗವಾಸ್ಕರ್- 2022- ಕರ್ನಾಟಕ ವಿಶ್ವವಿದ್ಯಾನಿಲಯ
- ವೆಂಕಟೇಶ್ ಪ್ರಸಾದ್- 2025- ಜೈನ್ವಿವ



