ಹುಣಸೂರು:ಅ.24: ಇಡೀ ದೇಶದಲ್ಲಿ ಪೋಲಿಯೊ ನಿರ್ಮೂಲನೆ ಕಾರ್ಯದಲ್ಲಿ ಅಂತರಾಷ್ಟ್ರೀಯ ರೋಟರಿ ಕ್ಲಬ್ ನ ಪಾತ್ರ ಪ್ರಮುಖವಾಗಿದೆ. ಎಂದು ಸಹಾಯಕ ಗವರ್ನರ್ ಆರ್. ಆನಂದ್ ತಿಳಿಸಿದರು.
ಹುಣಸೂರು ರೋಟರಿ ಸಂಸ್ಥೆವತಿಯಿಂದ 52ನೇ ಪೊಲಿಯೋ ದಿನಾಚರಣೆ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಲವು ದಶಕಗಳಿಂದ ದೇಶಕ್ಕೆ ಮಾರಕವಾಗಿದ್ದ ಪೊಲಿಯೋ ನಿರ್ಮೂಲನೆ ಮುಂದಾಗಿ ಇಡೀ ವಿಶ್ವದಲ್ಲಿ ಪಣತೊಟ್ಟು ,ನಿಂತ ಏಕೈಕ ಸಂಸ್ಥೆ ರೋಟರಿ ಸಂಸ್ಥೆ ಎಂದರು.
ಕಾರ್ಯದರ್ಶಿ ಹೆಚ್.ಆರ್.ಕೃಷ್ಣಕುಮಾರ್ ಮಾತನಾಡಿ, ಪೊಲಿಯೋ ಅಂತಹ ಮಾರಕ ರೋಗವನ್ನು ದೇಶದಿಂದಲೇ ಹೊರಹಾಕಿದ ಸೇವಾ ಸಂಸ್ಥೆ ರೋಟರಿ ಕ್ಲಬಾಗಿದೆ. ಆ ನಿಟ್ಟಿನಲ್ಲಿ ಇಂದಿಗೂ ಸಮಾಜಕ್ಕೆ ಆರೋಗ್ಯದಲ್ಲಿ ಸ್ನೇಹ ಸೇತುವೆಯಾಗಿ ನಿಂತಿರುವುದು ಶ್ಲಾಘನೀಯ ವೆಂದರು.
ವಿಶ್ವಸಂಸ್ಥೆಯಲ್ಲಿ ಇಂದಿಗೂ ಕೂಡ ಆರೋಗ್ಯಕ್ಕೆ ಎಚ್ಚಿನ ಕಾಳಜಿವಹಿಸಿ. ಸಹಕಾರ ನೀಡುತ್ತಿರುವ ರೋಟರಿ ಕ್ಲಬ್ ಧ್ಯೇಯವನ್ನು ಇಟ್ಟುಕೊಂಡು ಸಮಾಜ ಮುಖಿ ಕೆಲಸ ಮಾಡುವ, ನಿಟ್ಟಿನಲ್ಲಿ ಮೂಂಚೂಣಿಯಲ್ಲಿದೆ. ಅದಕ್ಕೆ ನಮ್ಮ ದೇಶದ ಕೊಡುಗೆ ಅಪಾರವಾಗಿದೆ ಎಂದರು.
ಜಾಥಾ ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರಾದ ಚನ್ನಕೇಶವ ಎಸ್. ಧರ್ಮಾಪುರ ಶ್ಯಾಮಣ್ಣ, ನಗರಸಭೆ ಸದಸ್ಯರಾದ ದಾವಣಿ ಬೀದಿ ಶ್ರೀ ನಾಥ್, ಹರೀಶ್, ರಮೇಶ್, ಶಿಕ್ಷಕಿ ತೇಜಶ್ವಿನಿ, ಶಿಕ್ಷಕ ಪ್ರಸನ್ನ ಹಾಗೂ ಶಾಲಾ ಮಕ್ಕಳು ಇದ್ದರು.