Tuesday, April 22, 2025
Google search engine

Homeಸ್ಥಳೀಯಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವಲ್ಲಿ ಪೋಷಕರ ಪಾತ್ರ ಬಹುಮುಖ್ಯ: ಕಲ್ಪನಾ ಸಿದ್ದರಾಜು

ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವಲ್ಲಿ ಪೋಷಕರ ಪಾತ್ರ ಬಹುಮುಖ್ಯ: ಕಲ್ಪನಾ ಸಿದ್ದರಾಜು

ಮದ್ದೂರು: ಸಮಾಜದ ಎಲ್ಲ ರಂಗಗಳಲ್ಲೂ ತಮ್ಮ ಅಪ್ರತಿಮವಾದ ಸಾಧನೆಗಳನ್ನ ತೋರುತ್ತಿರುವ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸುವಲ್ಲಿ ಪೋಷಕರ ಪಾತ್ರ ಬಹುಮುಖ್ಯವಾಗಿದೆ ಎಂದು ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಹೇಳಿದರು.

ಪಟ್ಟಣದ ಕಮಲ ನೆಹರು ಬಾಲಿಕಾ ಪ್ರೌಢಶಾಲೆಯಲ್ಲಿ ನಡೆದ ಎಸ್ .ಎಸ್. ಎಲ್ .ಸಿ. ವಿದ್ಯಾರ್ಥಿಗಳ ಪೋಷಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೀವನದಲ್ಲಿ  ಶಿಕ್ಷಣವು ಬಹು ಮುಖ್ಯವಾಗಿದ್ದು ಸಮಾಜದ ಯಾವುದೇ ಹೆಣ್ಣು ಮಗು ಮೊದಲು ಶಿಕ್ಷಣವನ್ನು ಪಡೆದು ವಿದ್ಯಾವಂತರಾಗಿ ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ಪಡೆಯಬೇಕೆಂದರು.

 ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ  ಜವಾಬ್ದಾರಿಗಳನ್ನ ಕಳೆದುಕೊಳ್ಳಬೇಕು ಎಂಬ ಮನೋಭಾವದಿಂದ ಬಾಲ್ಯಾವಸ್ಥೆಯಲ್ಲಿಯೇ ಹೆಣ್ಣಮಕ್ಕಳಿಗೆ ಮದುವೆಯನ್ನ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದು ವಿಷಾದನೀಯ ಎಂದ ಅವರು, ಈ ಬಗ್ಗೆ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಜಾಗೃತಿಯನ್ನು ಮೂಡಿಸಬೇಕೆಂದು ಕರೆ ನೀಡಿದರು.

ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾನಸಿಕವ ಒತ್ತಡವನ್ನು ನೀಡದೆ ಅವರ ಆರೋಗ್ಯ ಮತ್ತು ದೈಹಿಕ ಸಮಸ್ಯೆಗಳಿಗೆ ಸರಿಯಾದ ರೀತಿಯಲ್ಲಿ ಪೋಷಕರು ಸ್ಪಂದಿಸುವ ಮೂಲಕ ಪರೀಕ್ಷೆಯನ್ನ ಆತ್ಮವಿಶ್ವಾಸದಿಂದ ಬರೆಯುವತ ವಾತಾವರಣವನ್ನು ಕಲ್ಪಿಸಿ ಕೊಡಬೇಕೆಂದು ಹೇಳಿದರು.

ವಿದ್ಯಾರ್ಥಿಗಳು ಕೂಡ ಉತ್ತಮ ಪೋಷಕಾಂಶಗಳಿರುವಂತಹ ಆಹಾರಗಳನ್ನು ಸೇವಿಸುವುದರ ಮೂಲಕ ದೈಹಿಕ ಹಾಗೂ ಮಾನಸಿಕ ಸಮತೋಲವನ್ನು ಕಾಪಾಡಿಕೊಂಡು ಯಾವುದೇ ಆತಂಕಗೊಳಗಾಗದೆ ಧೈರ್ಯದಿಂದ ಮುಂಬರುವ ಪರೀಕ್ಷೆಗಳನ್ನ ಎದುರಿಸಿ ಉತ್ತಮ ಫಲಿತಾಂಶವನ್ನು ಪಡೆದು ಶಾಲೆ ಮತ್ತೆ ಪೋಷಕರಿಗೆ ಒಳ್ಳೆಯ ಹೆಸರು ತರಬೇಕೆಂದು ಕಿವಿಮಾತು ಹೇಳಿದರು.

ಈ ವೇಳೆ ಶಿಕ್ಷಣ ಸಂಯೋಜಕರಾದ ಸುಬ್ರಹ್ಮಣ್ಯ ,ಲೋಕೇಶ್, ಮುಖ್ಯ ಶಿಕ್ಷಕ ಎನ್. ಕೃಷ್ಣ , ಎಂ. ಟಿ.ಚಂದ್ರಶೇಖರ್, ಶಿಕ್ಷಕರಾದ ಕೆಂಚೇಗೌಡ ,ಅಶ್ವಿನಿ ,ಕೀರ್ತಿಕುಮಾರಿ,ನಂದಿನಿ ಸೇರಿದಂತೆ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular