ಕೆ.ಆರ್.ನಗರ: ಮಲೇರಿಯಾ ರೋಗ ತಡೆಗಟ್ಟಲು ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ಸೊಳ್ಳೆ ನಿಯಂತ್ರಣ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡಿ. ಸೊಳ್ಳೆ ನಿಯಂತ್ರಿಸುವಲ್ಲಿ ಸಾರ್ವಜನಿಕರ ಪಾತ್ರ ಅತೀ ಮುಖ್ಯ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ತಿಳಿಸಿದರು.
ಅವರು ಪಟ್ಟಣದ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಿಗಳ ನಿಯಂತ್ರಣ ಕಾರ್ಯಕ್ರಮದಡಿ ಶಿಕ್ಷಕರಿಗೆ ಎನ್.ವಿ.ಡಿ.ಸಿ.ಪಿ ಮತ್ತು ಎಸ್.ಬಿ.ಸಿ.ಸಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಲೇರಿಯಾ ಜ್ವರ ಪ್ಲಾಸ್ಕೋಡಿಯಂ ವೈವಾಕ್ಸ್ / ಫಾಲ್ಸಿಫಾರಂ ಎಂಬ ಪರಾವಲಂಬಿ ಜೀವಿಯಿಂದ ಉಂಟಾಗುವ ಖಾಯಿಲೆ, ಇದು ಸೋಂಕು ಹೊಂದಿದ ಹೆಣ್ಣು ಅನಾಫಿಲಿಸ್ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಕಚ್ಚುತ್ತವೆ ಆದ್ದರಿಂದ ಶಿಕ್ಷಕರು ಅದಷ್ಟು ಶಾಲೆಗಳಲ್ಲಿ ಹೆಚ್ಚಿನ ರೀತಿಯಲ್ಲಿ ಕೊಠಡಿ ಹಾಗೂ ನೀರಿನ ತೋಟ್ಟಿಗಳ ಸ್ವಚ್ಛತೆ ಕಡ್ಡಾಯವಾಗಿ ಮಾಡಿಸಿ, ವಿದ್ಯಾರ್ಥಿಗಳ ಮೂಲಕ ಪೋಷಕರಿಗೆ ಸೊಳ್ಳೆಗಳ ನಿಯಂತ್ರಣಕ್ಕೆ ಅರಿವು ಮೂಡಿಸಿ, ಈ ಬಗ್ಗೆ ಸಂಬಂಧಪಟ್ಟ ಆರೋಗ್ಯ ಕೇಂದ್ರಗಳು ಮೂಲಕ ಜಾಥಾ ಮೂಲಕ ಗ್ರಾಮಗಳಲ್ಲಿ ಅಭಿಯಾನ ಹಮ್ಮಿಕೊಂಡಿ ಅರಿವು ಮೂಡಿಸಲಾಗುತ್ತಿದ್ದು, ಜಾಥ ಅಭಿಯಾನಕ್ಕೆ ಶಿಕ್ಷಕರು ಹೆಚ್ಚಿನ ಸಹಕಾರ ನೀಡ ಬೇಕು ಎಂದು ಮನವಿ ಮಾಡಿದರು.

ನಡೆದ ಕಾರ್ಯಗಾರದಲ್ಲಿ ರಕ್ತ ಪರೀಕ್ಷೆಯಿಂದ ರೋಗ ಪತ್ತೆ ಮಾಡಲಾಗುವುದು. ಇದು ಅತ್ಯಂತ ಸುಲಭ ವಿಧಾನ ಪ್ರತಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಪರೀಕ್ಷೆ ನಡೆಸಲಾಗುವುದು. ಮಲೇರಿಯಾ ಜ್ವರಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ಲಭ್ಯವಿದ್ದು, ಸಂಪೂರ್ಣ ಚಿಕಿತ್ಸೆಯಿಂದ ಜ್ವರ ಗುಣಮುಖವಾಗುತ್ತದೆ ಎಂದು ತಿಳಿಸಿದರು.
ಈ ರೋಗ ನಿಯಂತ್ರಣ ಹೇಗೆ : ಅನಾಫಿಲಿಸ್ ಸೊಳ್ಳೆಗಳ ನಿಯಂತ್ರಣ ಮಲೇರಿಯಾ ರೋಗದ ಹತೋಟಿಗೆ ಮುಖ್ಯ ವಿಧಾನ. ಈ ಸೊಳ್ಳೆಗಳು ಸ್ವಚ್ಛತೆ ಇಲ್ಲದ ನೀರು, ಮಳೆ ನೀರು ಇತ್ಯಾದಿಗಳಲ್ಲಿ ಉತ್ಪತ್ತಿಯಾಗುವುದರಿಂದ ನೀರು ನಿಲ್ಲದಂತೆ ಕ್ರಮವಹಿಸಬೇಕು,ಬ ಎಲ್ಲಾ ನೀರಿನ ತೊಟ್ಟಿಗಳು, ಡ್ರಮ್ ಗಳು, ಬ್ಯಾರೆಲ್‌ಗಳು, ಏರ್‌ಕೂಲರ್, ತೊಟ್ಟಿ ಇತ್ಯಾಧಿಗಳನ್ನು ವಾರಕ್ಕೊಮ್ಮೆ ಖಾಲಿಮಾಡಿ ಉಜ್ಜಿ ತೊಳೆದು ಒಣಗಿಸಿ ಮತ್ತೆ ಭರ್ತಿಮಾಡಿ ಕೊಳ್ಳುವುದು.
2025 ಸಾಲಿನೊಳಗೆ ಮೈಸೂರು ಜಿಲ್ಲೆಯನ್ನು ಮಲೇರಿಯಾ ಮುಕ್ತ (Elimination of Malaria) ಜಿಲ್ಲೆಯಾಗಿ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದ್ದು. ಇದನ್ನು ಯಶಸ್ವಿಗೊಳಿಸಲು ಶಿಕ್ಷಣ ಇಲಾಖೆ ಮತ್ತು ಬಿತರೆ ಇಲಾಖೆಗಳು ಸಹಕರಿಸಲು ಮನವಿ ಮಾಡಿದರು.
ಬಿಇಓ ಆರ್.ಕೃಷ್ಣಪ್ಪ, ಆರೋಗ್ಯ ಇಲಾಖೆ ಕೀಟಶಾಸ್ತ್ರ ತಜ್ಞ ರತ್ನಕುಮಾರಿ, ಶಿಕ್ಷಣ ಸಂಯೋಜಕ ದಾಸಪ್ಪ,, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ.ರಮೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರೇಖಾ, ಜಿಲ್ಲಾ ಏನ್ ವಿ ಬಿ ಡಿ ಪಿ ಮೇಲವಿಚಾರಕ ರಮೇಶ್, ಆರೋಗ್ಯ ನಿರೀಕ್ಷಣಾ ಧಿಕಾರಿ ಮಹೇಶ್, ರಮೇಶ್, ಶಿಕ್ಷಕ ಸಂಗರಶೆಟ್ಟಹಳ್ಳಿ ಸುರೇಶ್ ಮೊದಲಾದವರು ಇದ್ದರು.