Wednesday, April 9, 2025
Google search engine

HomeUncategorizedರಾಷ್ಟ್ರೀಯರೈಲಿನ ಎಸಿ ಕೋಚ್‌ನ ಮೇಲ್ಛಾವಣಿ ಸೋರಿಕೆ, ರೈಲ್ವೆ ಇಲಾಖೆ ವಿರುದ್ಧ ಪ್ರಯಾಣಿಕರ ಆಕ್ರೋಶ

ರೈಲಿನ ಎಸಿ ಕೋಚ್‌ನ ಮೇಲ್ಛಾವಣಿ ಸೋರಿಕೆ, ರೈಲ್ವೆ ಇಲಾಖೆ ವಿರುದ್ಧ ಪ್ರಯಾಣಿಕರ ಆಕ್ರೋಶ

ರೈಲಿನ ಮೇಲ್ಛಾವಣಿನಿಂದ ನೀರು ಸೋರುತ್ತಿರುವ ವೀಡಿಯೊ ಇದೀಗ ವೈರಲ್​ ಆಗಿದೆ. ಈ ಬಗ್ಗೆ ವ್ಯಾಪಕ ಅಕ್ರೋಶ ಕೂಡ ವ್ಯಕ್ತವಾಗಿದೆ. ಪ್ಯಾಸೆಂಜರ್ ರೈಲು ಕೋಚ್‌ನ ಮೇಲ್ಛಾವಣಿಯಿಂದ ನೀರು ಸೋರುತ್ತಿದ್ದು, ಇದೀಗ ಭಾರತೀಯ ರೈಲ್ವೇಯು ಅಪಹಾಸ್ಯಕ್ಕೆ ಕಾರಣವಾಗಿದೆ.

ಬಸ್​​, ಆಟೋ, ಕಾರು, ಇನ್ನಿತರ ವಾಹನಗಳ ಮೇಲ್ಛಾವಣಿನಿಂದ ನೀರು ಸೋರುವುದು ಸಹಜ, ಆದರೆ ರೈಲಿನ ಮೇಲ್ಛಾವಣಿನಿಂದ ನೀರು ಸೋರುತ್ತಿರುವ ವೀಡಿಯೊ ಇದೀಗ ವೈರಲ್​ ಆಗಿದೆ. ಈ ಬಗ್ಗೆ ವ್ಯಾಪಕ ಅಕ್ರೋಶ ಕೂಡ ವ್ಯಕ್ತವಾಗಿದೆ. ಪ್ಯಾಸೆಂಜರ್ ರೈಲು ಕೋಚ್‌ನ ಮೇಲ್ಛಾವಣಿಯಿಂದ ನೀರು ಸೋರುತ್ತಿದ್ದು, ಇದೀಗ ಭಾರತೀಯ ರೈಲ್ವೇಯು ಅಪಹಾಸ್ಯಕ್ಕೆ ಕಾರಣವಾಗಿದೆ. ಆವಂತಿಕಾ ಎಕ್ಸ್‌ಪ್ರೆಸ್‌ನ ಪ್ರಯಾಣಿಕರೊಬ್ಬರು ಮಳೆಯ ಸಮಯದಲ್ಲಿ ಎಸಿ ಕೋಚ್‌ನ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗಿರುವುದನ್ನು ವೀಡಿಯೊ ಮಾಡಿದ್ದಾರೆ.

ಈ ವೀಡಿಯೊವನ್ನು ಕಾಂಗ್ರೆಸ್ ಟ್ವಿಟರ್​​​ನಲ್ಲಿ​​ ಮರುಹಂಚಿಕೊಂಡಿದ್ದು, “ರೈಲ್ವೆಗೆ ಸಂಬಂಧಿಸಿದಂತೆ ಪೊಳ್ಳು ಪ್ರಚಾರದ ಬದಲು ಒಂದಿಷ್ಟು ಕೆಲಸ ಮಾಡಿದ್ದರೆ ಒಳ್ಳೆಯದು ಎಂದು ಟ್ವಿಟರ್​​ನಲ್ಲಿ ಬರೆದುಕೊಂಡಿದೆ. ಹೊಸ ರೈಲು ಬಂದಾಗ ಅನಾವರಣಗೊಳಿಸುವ ವ್ಯಕ್ತಿ (ಪ್ರಧಾನಿ)ಪ್ರಸ್ತುತ ವಿದೇಶದಲ್ಲಿದ್ದಾರೆ, ಈ ಬಗ್ಗೆ ರೈಲ್ವೆ ಸಚಿವರು ಗಮನಹರಿಸಬೇಕು, ಜತೆಗೆ ಇಲ್ಲಿಯವರೆಗೆ 18 ವಂದೇ ಭಾರತ್ ಎಕ್ಸ್‌ಪ್ರೆಸ್​​ನ್ನು ಫ್ಲ್ಯಾಗ್ ಆಫ್ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರೇ ನೀವು ಆಗಮಿಸಿಬೇಕು ಎಂದು ಅವರಿಗೂ ಟ್ಯಾಗ್​​​ ಮಾಡಿದೆ.

ಈ ಬಗ್ಗೆ ಮಹಿಳಾ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ನೆಟ್ಟಾ ಡಿಸೋಜಾ ಟ್ವೀಟ್ ಮಾಡಿದ್ದು, ಭಾರತೀಯ ರೈಲ್ವೇ ದುಸ್ಥಿತಿಗೆ ಯಾರು ಹೊಣೆ? ಎಂದು ಪ್ರಶ್ನೆ ಮಾಡಿದ್ದಾರೆ. ಈ ವೀಡಿಯೊವನ್ನು ನೋಡಿದ ಅನೇಕರು ಭಾರತೀಯ ರೈಲ್ವೆಯು ತೆರೆದ ಶವರ್ ಸೌಲಭ್ಯದೊಂದಿಗೆ ಹೊಸ ಸೂಟ್ ಕೋಚ್ ಅನ್ನು ಪ್ರಾರಂಭಿಸಿದೆ ಎಂದು ಟ್ವಿಟರ್ ಬಳಕೆದಾರರು ವ್ಯಂಗ್ಯವಾಗಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಶವರ್ ಜೆಲ್, ಶಾಂಪೂ ಮತ್ತು ಬಾತ್ರೋಬ್​​ನ್ನು ಒದಗಿಸಲು ಚರ್ಚಿಸುತ್ತಿವೆ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.

ವೆಸ್ಟರ್ನ್ ರೈಲ್ವೇ ಈ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸಿದೆ ಮತ್ತು ಆವಂತಿಕಾ ಎಕ್ಸ್‌ಪ್ರೆಸ್‌ನ ಎಲ್ಲಾ ಕೋಚ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುವುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಈಗ ಎಲ್ಲವೂ ಸರಿಯಾಗಿದೆ ಮತ್ತೆ ಆ ರೈಲು ಪ್ರಯಾಣಿಸಲಿದೆ. ಈಗ ಅಂತಹ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular