ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಹಲಗೂರು ಭಾಗದ ಹಲವೆಡೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಹಲಗೂರು ಸಮೀಪದ ಲಿಂಗಪಟ್ಟಣದಲ್ಲಿ ನಿನ್ನೆ ಸುರಿದ ಬಿರುಗಾಳಿ ಸಹಿತ ಭಾರಿ ಆಲಿಕಲ್ಲು ಮಳೆಗೆ ಹಲವು ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿವೆ.

ಹತ್ತಾರು ಎಕರೆಯಲ್ಲಿ ಬೆಳೆದಿದ್ದ ಬಾಳೆ ತೋಟ, ಜೋಳ ಸೇರಿ ಹಲವಾರು ಬೆಳೆಗಳು ನೆಲಸಮವಾಗಿದ್ದು, ಘಟನೆಯಿಂದ ಲಕ್ಷಾಂತರ ರೂ. ನಷ್ಟವಾಗಿದೆ.
ಲಿಂಗಪಟ್ಟಣದ ಕೃಷ್ಣ ಎಂಬುವರಿಗೆ ಸೇರಿದ 1,450 ಬಾಳೆ ನಾಶವಾಗಿದೆ.
