Friday, August 15, 2025
Google search engine

Homeರಾಜ್ಯಸುದ್ದಿಜಾಲರೋಟರಿ ಕ್ಲಬ್ ಪಿರಿಯಾಪಟ್ಟಣ ಐಕಾನ್ಸ್ ವತಿಯಿಂದ ವಿಶ್ವ ಆನೆ ದಿನ ಅಂಗವಾಗಿ ಭೀಮನಕಟ್ಟೆ ಸಾಕಾನೆ ಶಿಬಿರದ...

ರೋಟರಿ ಕ್ಲಬ್ ಪಿರಿಯಾಪಟ್ಟಣ ಐಕಾನ್ಸ್ ವತಿಯಿಂದ ವಿಶ್ವ ಆನೆ ದಿನ ಅಂಗವಾಗಿ ಭೀಮನಕಟ್ಟೆ ಸಾಕಾನೆ ಶಿಬಿರದ ಮಾವುತರು ಹಾಗೂ ಕಾವಾಡಿಗಳಿಗೆ ಸನ್ಮಾನ

ವರದಿ: ಸತೀಶ್ ಆರಾಧ್ಯ

ಪಿರಿಯಾಪಟ್ಟಣ: ರೋಟರಿ ಕ್ಲಬ್ ಪಿರಿಯಾಪಟ್ಟಣ ಐಕಾನ್ಸ್ ವತಿಯಿಂದ ವಿಶ್ವ ಆನೆ ದಿನ
ಕಾರ್ಯಕ್ರಮ ಅಂಗವಾಗಿ ಮಾವುತರು ಹಾಗೂ ಕಾವಡಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಹುಣಸೂರು ಉಪ ವಿಭಾಗದ ವಲಯ ಅರಣ್ಯಾಧಿಕಾರಿ ಸುಬ್ರಮಣ್ಯ ಅವರ ಮಾರ್ಗದರ್ಶನದಲ್ಲಿ ಪಿರಿಯಾಪಟ್ಟಣ ತಾಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾವುತರು ಹಾಗೂ ಕಾವಡಿಗರನ್ನು ಸನ್ಮಾನಿಸಿ ಹಾಡಿ ಮಕ್ಕಳಿಗೆ ಸಿಹಿ ವಿತರಿಸಲಾಯಿತು, ಈ ವೇಳೆ ರೋಟರಿ ವಲಯ 6 ರ ವಲಯ ಸೇನಾನಿ ಕೆ.ರಮೇಶ್ ಮಾತನಾಡಿ ಆನೆ ಬೃಹತ್ ಗಾತ್ರ ಪ್ರಾಣಿಯಾಗಿದ್ದರೂ ಸಹ ಮಾವುತರು ಆನೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಪಳಗಿಸುತ್ತಿರುವುದು ಹೆಮ್ಮೆಯ ವಿಷಯ, ಮಾವುತರು ತಮ್ಮ ಕುಟುಂಬದ ಸದಸ್ಯರೊಂದಿಗಿನ ಒಡನಾಟಕ್ಕಿಂತಲೂ ಹೆಚ್ಚು ಒಡನಾಟ ಆನೆಗಳೊಂದಿಗೆ ಹೊಂದಿದ್ದಾರೆ, ಆನೆಗಳ ಜೊತೆಗಿನ ಬಾಂಧವ್ಯದೊಂದಿಗೆ ತಮ್ಮ ಜೀವನವನ್ನು ಮುಡುಪಿಟ್ಟು ಬದುಕು ನಡೆಸುತ್ತಿರುವ ಮಾವುತರಿಗೆ ಉತ್ತಮ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಸರ್ಕಾರದ ಹೊಣೆಯಾಗಿದೆ, ಕೆಲವು ಸಂದರ್ಭ ಸಾಕಾನೆಗಳು ವಿಚಿತ್ರವಾಗಿ ವರ್ತಿಸಿ ಅತ್ಯಂತ ಪ್ರೀತಿಯಿಂದ ಸಾಕಿದ ಮಾವುತ ಹಾಗೂ ಕಾವಾಡಿಗಳನ್ನು ಬಲಿ ತೆಗೆದುಕೊಂಡಿರುವ ಪ್ರಸಂಗಗಳು ನಡೆದಿದ್ದು ಅವರ ಕುಟುಂಬಗಳಿಗೆ ಜೀವನ ಭದ್ರತೆಯಾಗುವಂತಹ ಯೋಜನೆಯನ್ನು ಸರ್ಕಾರ ಪ್ರಕಟಿಸಬೇಕಿದೆ ಎಂದರು.

ರೋಟರಿ ಐಕಾನ್ಸ್ ಅಧ್ಯಕ್ಷ ಎಂ.ಬಿ ಸಂಪತ್ ಮಾತನಾಡಿ ವನ್ಯಜೀವಿಗಳು ಮತ್ತು ಮಾನವನ ಸಂಘರ್ಷದಲ್ಲಿ ಕಾಡಾನೆಯ ದಾಳಿಯಿಂದಲೇ ಹೆಚ್ಚು ನಷ್ಟ ಉಂಟಾಗುತ್ತಿರುವುದು ಸತ್ಯವಾಗಿದ್ದರೂ ಆನೆಗಳಿಗೆ ಅರಣ್ಯದಲ್ಲಿ ಸರಿಯಾಗಿ ಮೇವು ದೊರಕದ ಕಾರಣ ನಾಡಿನತ್ತ ಬರುತ್ತಿವೆ, ವನ್ಯಜೀವಿಗಳ ಸಂಘರ್ಷವನ್ನು ತಪ್ಪಿಸಿ ರೈತರಿಗೆ ಬೆಳೆ ಹಾನಿಯಾಗದಂತೆ ಆನೆ ಕಂದಕಗಳು ಸೋಲಾರ್ ಬೇಲಿಗಳನ್ನು ನಿರ್ಮಿಸುವ ಕೆಲಸವಾಗಬೇಕಿದೆ, ಮನುಷ್ಯನ ಅತಿಯಾಸೆಯಿಂದಾಗಿ ಕಾಡು ಪ್ರಾಣಿಗಳ ವಾಸಪ್ರದೇಶ ಅತಿಕ್ರಮಣವಾಗುತ್ತಿದ್ದು ಕಾಡು ಪ್ರಾಣಿಗಳಿಗೆ ಅಗತ್ಯವಾದ ಪರಿಪೂರ್ಣ ಆಹಾರ ದೊರಕದಿದ್ದಲ್ಲಿ ಅವುಗಳು ಆಹಾರವನ್ನು ಅರಸಿ ನಾಡಿನತ್ತ ವಲಸೆ ಬರುವುದು ಅನಿವಾರ್ಯವಾಗಿದ್ದು ಇದರಿಂದಾಗಿ ಮಾನವ ಮತ್ತು ಕಾಡು ಪ್ರಾಣಿಗಳ ನಡುವೆ ಸಂಘರ್ಷಣೆ ಏರ್ಪಟ್ಟಿದೆ ಎಂದರು.

ಕಾರ್ಯಕ್ರಮದಲ್ಲಿ ಪಿರಿಯಾಪಟ್ಟಣ ರೋಟರಿ ಐಕಾನ್ಸ್ ನಿಕಟ ಪೂರ್ವ ಅಧ್ಯಕ್ಷ ಜೆ.ಎಸ್ ನಾಗರಾಜ್, ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಸಿ.ಎನ್ ವಿಜಯ್, ಕಾರ್ಯದರ್ಶಿ ಬಿ.ಎಸ್ ಸತೀಶ್ ಆರಾಧ್ಯ ಮಾತನಾಡಿದರು, ಮಾವುತರಾದ ವಿ.ಜಯಬಾಲು, ಜೆ.ಕೆ ರವಿ, ಹೆಚ್.ಸಿ ಮಂಜುನಾಥ್, ಲವ, ಗಣೇಶ್, ಉಪ ವಲಯ ಅರಣ್ಯಾಧಿಕಾರಿ ಸಿ.ಟಿ ಸುಂದರರಾಜ್ ರನ್ನು ಸನ್ಮಾನಿಸಿ ಗೌರವಿಸಲಾಯಿತು, ಸಂಸ್ಥೆ ಪದಾಧಿಕಾರಿಗಳಾದ ವಿ.ಎಸ್ ರಮೇಶ್, ಹೆಚ್.ಎಂ ಪರಮೇಶ್, ಡಿ.ಆರ್ ಧನಂಜಯ್, ಪಿ.ಎಸ್ ಶ್ರೀಧರ್, ಇಮ್ತಿಯಾಜ್ ಅಹಮದ್, ಶಿವರಾಮ್ ಸೇರಿದಂತೆ ಮತ್ತಿತರಿದ್ದರು.

RELATED ARTICLES
- Advertisment -
Google search engine

Most Popular