ಹುಣಸೂರು: ಡಾ.ಎನ್.ಆನಂದಗೌಡ ಅವರ ಮಾರ್ಗದರ್ಶನದಲ್ಲಿ ಕೊಡಗು ಜಿ.ಪಂ.ಯ ಎನ್.ಆರ್.ಐ.ಜಿ. ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನ ಮತ್ತು ಸವಾಲುಗಳು ಒಂದು ಅಧ್ಯಯನ ಎಂಬ ಮಹಾ ಪ್ರಬಂಧದ ಬಗ್ಗೆ ಸಂಶೋಧನೆ ನಡೆಸಿ ಪಿಎಚ್ ಡಿ ಪದವಿ ಪಡೆದಿರುವ ರೋಟರಿ ಸದಸ್ಯ ಸಿ.ಪುಟ್ಟರಾಜು ಅವರನ್ನು ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಅವರು, ನಾವು ಸಂಶೋಧನೆ ನಡೆಸಿ ಪದವಿ ಪಡೆಯವುದು ಮುಖ್ಯವಲ್ಲ. ಸಮಾಜದ ನಡುವೆ ನಮ್ಮನ್ನು ಗುರುತಿಸಿ ಗೌರವಿಸುವ ರೋಟರಿ ಕ್ಲಬ್ ನ ಸೇವಾ ಮನೋಭಾವನೆ ಶ್ಲಾಘನೀಯವೆಂದರು.
ವೇದಿಕೆಯಲ್ಲಿ ರೋಟರಿ ಅಧ್ಯಕ್ಷ ಡಾ.ಪ್ರಸನ್ನ ಕೆ.ಪಿ. ಕಾರ್ಯದರ್ಶಿ ಹೆಚ್.ಆರ್.ಕೃಷ್ಣಕುಮಾರ್, ಸಹಾಯಕ ಗವರ್ನರ್ ಆರ್.ಆನಂದ್,ರೊ.ರಾಜಶೇಖರ್, ರೊ.ಚನ್ನಕೇಶವ ಎಸ್. ರೊ.ಚೆರಿಯನ್, ಡಾ.ನಂದನ್,ಡಾ.ಬಸವರಾಜ್, ಧರ್ಮಾಪುರ ಶ್ಯಾಮ್, ಇದ್ದರು.