ಪಿರಿಯಾಪಟ್ಟಣ:ಸ್ವಹಿತ ಮೀರಿದ ಸೇವೆಯಿಂದ ವಿಶ್ವಶಾಂತಿ ಸಾಧ್ಯ ಎಂಬ ಧ್ಯೇಯವಾಕ್ಯದಿಂದ ರೋಟರಿ ಸಂಸ್ಥೆಯ ಮುನ್ನಡೆದು ನೂರು ವರ್ಷಗಳಿಗೂ ಮೀರಿ ಸೇವಾ ಕಾರ್ಯದಲ್ಲಿ ನಿರತವಾಗಿದೆ ಎಂದು ರೋಟರಿ ರೋಟರಿ ಸಂಸ್ಥೆ ಅಧ್ಯಕ್ಷ ಎಂ.ಎಂ.ರಾಜೇಗೌಡ ತಿಳಿಸಿದರು.
ಪಟ್ಟಣದ ರೋಟರಿ ಭವನದಲ್ಲಿ ಒಳಕೋಟೆ ನಿವಾಸಿ ಕಾಂತರಾಜು ಎಂಬುವವರಿಗೆ ಊರುಗೋಲು ( ವಾಕಿಂಗ್ ಸ್ಟಿಕ್) ವಿತರಿಸಿ ಮಾತನಾಡಿದರು.
ದೈನಂದಿನ ಬದುಕಿನಲ್ಲಿ ಅನೇಕ ಕಷ್ಟ ಕಾರ್ಪಣ್ಯಗಳ ನಡುವೆ ಇತ್ತೀಚೆಗೆ ಅಕಾಲಿಕ ಕಾಯಿಲೆಗೆ ತುತ್ತಾಗಿ ಕಾಲು ಕಳೆದುಕೊಂಡು ಪಟ್ಟಣದಲ್ಲಿ ಅಕ್ಕಸಾಲಿಗ ವೃತ್ತಿ ಮಾಡಿಕೊಂಡು ಬದುಕು ನಡೆಸುತ್ತಿರುವ ಕಾಂತರಾಜು ಎದೆಗುಂದದೆ ತಮ್ಮ ಕಾಯಕ ನಡೆಸುತ್ತಿರುವುದು ಇತರರಿಗೆ ಮಾದರಿಯಾಗಿದೆ. ಇಂಥ ಅಬಲರ ಬದುಕಿಗೆ ನಮ್ಮ ಸಂಸ್ಥೆ ಸದಾ ನೆರವು ನೀಡುವ ಮೂಲಕ ಅವರ ಸ್ವಾವಲಂಬನೆ ಬದುಕಿಗೆ ಸಹಕಾರಿಯಾಗಿದೆ. ಸಮಾಜದಲ್ಲಿ ಉಳ್ಳವರು ಕೊಡುಗೈ ದಾನಿಗಳಾಗಿ ಸಮಾಜ ಕಟ್ಟಬೇಕು.
ಮಾಡಿದ ಸೇವೆ ಅಜರಾಮರವಾಗಿ ಉಳಿಯುತ್ತದೆ. ಜನಿಸಿದಾಗ ಯಾರು ಶ್ರೀಮಂತರಲ್ಲ, ಮಾಡುವ ಸತ್ಕಾರ್ಯಗಳು ಅವರನ್ನು ಗುರುತಿಸಿ ಸಮಾಜ ಬೆಳೆಸುತ್ತದೆ. ಸಮುದಾಯ ಸೇವೆಗಳಲ್ಲಿ ಪ್ರಪಂಚದಲ್ಲೇ ರೋಟರಿ ಸಂಸ್ಥೆಯು ಪ್ರಥಮ ಸ್ಥಾನದಲ್ಲಿ ಇದೆ. ಪಲ್ಸ್ ಪೊಲಿಯೋ ಹಾಗೂ ಕರೋನ ಸಂದರ್ಭದಲ್ಲಿ ರೋಟರಿಯ ಸೇವೆ ಸದಾ ಅವಿಸ್ಮರಣೀಯ ಕೆಲಸಗಳನ್ನು ಮಾಡಿದೆ, ರೋಟರಿ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಹಾಗೂ ವಿದ್ಯಾಭ್ಯಾಸಕ್ಕೆ ಹೆಚ್ಚು ಹೊತ್ತನ್ನು ನೀಡುವುದರ ಮುಖಾಂತರ ಸೇವೆಯನ್ನು ಸಲ್ಲಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಐಕೆಪಿ ಹೆಗಡೆ, ಪದಾಧಿಕಾರಿಗಳಾದ ಸತ್ಯನಾರಾಯಣ,
ಕೆ.ಆರ್. ನಾಗರಾಜ್, ರವಿಶಂಕರ್, ಹರೀಶ್ ಗೌಡ, ಪಾರೆ ಕೊಪ್ಪಲು ಚಂದ್ರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು