Saturday, July 26, 2025
Google search engine

Homeರಾಜ್ಯಸುದ್ದಿಜಾಲದೊಡ್ಡಹರವೆ 2ನೇ ಬ್ಲಾಕ್ ಅಂಗನವಾಡಿಗೆ ರೋಟರಿ ಪಿರಿಯಾಪಟ್ಟಣ ಮಿಡ್ ಟೌನ್ ವತಿಯಿಂದ ಕುರ್ಚಿಗಳು, ಕಲಿಕಾ ಹಾಗೂ...

ದೊಡ್ಡಹರವೆ 2ನೇ ಬ್ಲಾಕ್ ಅಂಗನವಾಡಿಗೆ ರೋಟರಿ ಪಿರಿಯಾಪಟ್ಟಣ ಮಿಡ್ ಟೌನ್ ವತಿಯಿಂದ ಕುರ್ಚಿಗಳು, ಕಲಿಕಾ ಹಾಗೂ ಆಟೋಟ ಸಾಮಗ್ರಿಗಳ ವಿತರಣಾ ಸೇವೆ

ಪಿರಿಯಾಪಟ್ಟಣ: ದೊಡ್ಡಹರವೆ ಗ್ರಾಮ 2ನೇ ಬ್ಲಾಕಿನ ಅಂಗನವಾಡಿ ಕೇಂದ್ರಕ್ಕೆ ರೋಟರಿ ಪಿರಿಯಾಪಟ್ಟಣ ಮಿಡ್ ಟೌನ್ ವತಿಯಿಂದ ಮಕ್ಕಳ ಅಸನದ ವ್ಯವಸ್ಥೆಗೆ ಕುರ್ಚಿಗಳು ಕಲಿಕಾ ಸಾಮಗ್ರಿ ಹಾಗೂ ಆಟೋಟ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ವೇಳೆ ಅಧ್ಯಕ್ಷರಾದ ಜಗನ್ ಗೌಡ ಅವರು ಮಾತನಾಡಿ ರೋಟರಿ ಜಿಲ್ಲಾ ಪ್ರಾಜೆಕ್ಟ್ ಅಂಗನವಾಡಿ ಉನ್ನತೀಕರಣದಡಿಯಲ್ಲಿ ಗ್ರಾಮಾಂತರ ಪ್ರದೇಶದ ಅಂಗನವಾಡಿ ಕೇಂದ್ರಕ್ಕೆ ಅಗತ್ಯವಿರುವ ಮಕ್ಕಳಿಗೆ ಕುಳಿತುಕೊಳ್ಳಲು ಅಸನ ವ್ಯವಸ್ಥೆಗಾಗಿ ಚೇರ್ ಹಾಗೂ ಆಟೋಟ ಸಾಮಾಗ್ರಿಗಳನ್ನು ನಮ್ಮ ಸಂಸ್ಥೆ ವತಿಯಿಂದ ನೀಡಿದ್ದು ಇದಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದರು.

ರೋಟರಿ ಜಿಲ್ಲಾ ಜೋನ್ 06 ರ ಅಸಿಸ್ಟಂಟ್ ಗವರ್ನರ್ ತಿರುಮಲಾಪುರ ರಾಜೇಗೌಡ ಅವರು ಮಾತನಾಡಿ ಸಾಮಾಜಿಕ ಸೇವೆ ಅಂಗವಾಗಿ ರೋಟರಿ ಸಂಸ್ಥೆ ವತಿಯಿಂದ ಶಿಕ್ಷಣ ಆರೋಗ್ಯ ಸೇರಿದಂತೆ ಸಮಾಜದ ಹಲವು ಕ್ಷೇತ್ರಗಳಲ್ಲಿ ಕೈಲಾದ ಸಹಾಯ ಮಾಡಲಾಗುತ್ತಿದೆ ಎಂದರು.

ಬೈಲಕುಪ್ಪೆ ಪಿಡಿಓ ಬೋರೇಗೌಡ ಮಾತನಾಡಿ ಗ್ರಾಮಾಂತರ ಪ್ರದೇಶದ ಅಭಿವೃದ್ಧಿಗಾಗಿ ಸರ್ಕಾರದ ಅನುದಾನ ಜೊತೆ ಸಂಘ ಸಂಸ್ಥೆಗಳು ಸಹಕರಿಸಿದಾಗ ಬದಲಾವಣೆ ಕಾಣಬಹುದು ಈ ನಿಟ್ಟಿನಲ್ಲಿ ರೋಟರಿ ಮಿಡ್ ಟೌನ್ ಪಿರಿಯಾಪಟ್ಟಣ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದರು.

ಈ ಸಂದರ್ಭ ಗ್ರಾಮ ಪಂಚಾಯತಿ ಅಧ್ಯಕ್ಷ ರಘು ಹಾಗೂ ಸದಸ್ಯರು, ರೋಟರಿ ಮಿಡ್ ಟೌನ್ ನಿಕಟಪೂರ್ವ ಅಧ್ಯಕ್ಷ ಎಂ.ಎಂ ರಾಜೇಗೌಡ, ಐಕೆಪಿ ಹೆಗಡೆ, ಸದಸ್ಯರಾದ ಅಂಬ್ಲಾರೆ ಬಸವೇಗೌಡ, ಹರೀಶ್, ಎಂ.ಪಿ ರಾಜು, ಕೃಷ್ಣ ಮತ್ತು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಇದ್ದರು.

RELATED ARTICLES
- Advertisment -
Google search engine

Most Popular