ಪಿರಿಯಾಪಟ್ಟಣ: ಸಾಮಾಜಿಕ ಹಿತ ಚಿಂತನೆಯಿಂದಾಗಿ ರೋಟರಿ ಇಂದು ವಿಶ್ವದಲ್ಲಿ ಜನಮನ್ನಣೆ ಗಳಿಸಿದೆ
ಎಂದು ರೋಟರಿ 3181 ಜಿಲ್ಲೆಯ ಮಾಜಿ ಸಹಾಯಕ ಗವರ್ನರ್ ಡಾ.ಸಿ.ಆರ್ ಪ್ರಶಾಂತ್ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ನಡೆದ ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸಂಸ್ಥೆ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಭಿನ್ನ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸುವ ಮೂಲಕ ರೋಟರಿ ಚಟುವಟಿಕೆ ನಡೆಯುತ್ತಿದೆ. ನಮ್ಮಲ್ಲಿನ ವೈಯಕ್ತಿಕ ಹಿತಾಸಕ್ತಿ ಮತ್ತು ಸ್ವಾರ್ಥತೆ ಮರೆತು ಸೇವೆ ಸಲ್ಲಿಸಿದಾಗ ನಾವು ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ರೋಟರಿ ದೊಡ್ಡ ನಿದರ್ಶನವಾಗಿದೆ. ಯಾವುದೇ ರೀತಿಯ ಸ್ವಯಂ ಅಪೇಕ್ಷೆ ಹೊಂದದೆ ನಿಸ್ವಾರ್ಥ ಮನೋಭಾವದಿಂದ ಸೇವೆ ನೀಡುವುದು ರೋಟರಿ ಧ್ಯೇಯವಾಗಿದೆ,
ಕೇವಲ ಸದಸ್ಯತ್ವ ಹೊಂದಿದರೆ ಸಾಲದು ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜ ಸೇವೆ ಮಾಡಿದರೆ ಮಾತ್ರ ನಮ್ಮ ಉದ್ದೇಶ ಈಡೇರಲಿದೆ, 54 ಸದಸ್ಯರನ್ನು ಹೊಂದಿರುವ ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸಂಸ್ಥೆಯಲ್ಲಿ ಸದಸ್ಯರು ಕಡ್ಡಾಯವಾಗಿ ವಾರದ ಸಭೆಯಲ್ಲಿ ಪಾಲ್ಗೊಳ್ಳುವುದು ಬಹು ಮುಖ್ಯವಾಗಿದ್ದು ರೋಟರಿಯ ಕರ್ತವ್ಯ ಮತ್ತು ಉದ್ದೇಶ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಲಿ ಎಂದು ಶುಭ ಕೋರಿದರು.
ವಲಯ 6 ರ ಸಹಾಯಕ ಗವರ್ನರ್ ಡಿ.ಎಂ ತಿಲಕ್ ಪೊನ್ನಪ್ಪ ನೂತನ ಸದಸ್ಯರನ್ನು ಸಂಸ್ಥೆಗೆ ಸೇರ್ಪಡೆಗೊಳಿಸಿ ಮಾತನಾಡಿ ಅಂಗನವಾಡಿ ಸಂಸ್ಥೆಗಳ ಬಲವರ್ಧನೆ ಈ ಸಾಲಿನ ರೋಟರಿಯ ಪ್ರಮುಖ ಗುರಿಯಾಗಿದೆ ಸದಸ್ಯರು ಉತ್ತಮ ಸಹಕಾರ ನೀಡಿದರೆ ರೋಟರಿ ಜಿಲ್ಲೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಸಂಸ್ಥೆಯಾಗಿ ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಹೊರಹೊಮ್ಮಲ್ಲಿದೆ ಎಂದರು.
ರೋಟರಿ ವಲಯ ಸೇನಾನಿ ಎಂ.ಕೆ ಮಾಚಯ್ಯ ನೂತನ ಸದಸ್ಯರಿಗೆ ಮಾಹಿತಿ ಪುಸ್ತಕ ನೀಡಿ ಶುಭ ಕೋರಿದರು.
ರೋಟರಿ ಐಕಾನ್ಸ್ ಅಧ್ಯಕ್ಷ ಕೆ.ರಮೇಶ್ ಅವರು ಮಾತನಾಡಿ ಸರ್ವ ಸದಸ್ಯರ ಸಹಕಾರದಿಂದ ತಾಲೂಕಿನಾದ್ಯಂತ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿಯೂ ಸಂಸ್ಥೆ ವತಿಯಿಂದ ಸಾಮಾಜಿಕ ಕಳಕಳಿ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು. ಕಾರ್ಯದರ್ಶಿ ಪಿ.ಎಸ್ ಹರೀಶ್ ವಾರ್ಷಿಕ ವರದಿ ಮಂಡಿಸಿದರು.
ಸೇನೆಯಿಂದ ನಿವೃತ್ತಿ ಹೊಂದಿರುವ ತಾಲೂಕಿನ ಮಾಜಿ ಯೋಧ ಹಾಗೂ ರೋಟರಿ ಐಕಾನ್ಸ್ ಸದಸ್ಯ ವಿ.ಎಸ್ ರಮೇಶ್ ಮತ್ತು ಬೆಟ್ಟದತುಂಗ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಗೊಂಡ ರೋಟರಿ ಐಕಾನ್ಸ್ ಸದಸ್ಯೆ ಪ್ರೀತಿ ಅರಸ್ ರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಸಂಸ್ಥೆಯ ಪದಾಧಿಕಾರಿಗಳಾದ ಜೆ.ಎಸ್ ನಾಗರಾಜ್, ಎನ್.ಕರುಣಾಕರ್, ಸಿ.ಎನ್ ವಿಜಯ್, ಬಿ.ಆರ್ ಗಣೇಶ್, ಎಸ್.ರಮೇಶ್, ಆಲನಹಳ್ಳಿ ಕೆಂಪರಾಜು, ಬಿ.ಎಸ್ ಸತೀಶ್ ಆರಾಧ್ಯ, ಬಿ.ಎಸ್ ಪ್ರಸನ್ನ, ಆರ್.ವೆಂಕಟೇಶ್, ಕೆ.ವಿ ಶಿಲ್ಪ, ಡಿ.ರಮೇಶ್, ಎಂ.ಬಿ ಸಂಪತ್, ಡಿ.ಜೆ ಗಣೇಶ್, ಬಿ.ಎಂ ಕುಮಾರ್, ಟಿ.ಎಸ್ ಹರೀಶ್, ಎಂ.ಎನ್ ಸುರೇಶ್, ಕೆ.ಆರ್ ಕೆಂಪಣ್ಣ, ರೆಹಾನ್ ಅಹಮದ್, ಮಾಧು, ಎಸ್.ಎಲ್ ರವಿ, ಸುನಿಲ್, ಶಾಮ್, ದಿನೇಶ್, ಎ.ಜಿ ಸ್ವಾತಿ, ಎಚ್.ಆರ್ ರಮ್ಯಾ, ಸುನೀತಾ, ಪರಮೇಶ್, ಮಹೇಶ್, ನಾಗರಾಜ್, ಭಾನುಪ್ರಕಾಶ್, ನಾಗೇಂದ್ರ, ಹರೀಶ್ ಮತ್ತಿತರಿದ್ದರು.