ಚಾಮರಾಜನಗರ: ವಾರಾಂತ್ಯದ ಜೊತೆಗೆ ಕ್ರಿಸ್ಮಸ್ ರಜೆ ಇರುವ ಹಿನ್ನಲೆಯಲ್ಲಿ ಧಾರ್ಮಿಕ ಕೇಂದ್ರಗಳತ್ತ ಭಕ್ತರ ದಂಡೇ ಆಗಮಿಸುತ್ತಿದ್ದು ಈ ಮಧ್ಯೆ ಚಾಮರಾಜನಗರ ಜಿಲ್ಲೆ ಹನೂರಿನಲ್ಲಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಜನಸಾಗರ.
ಫ್ರೀ ಬಸ್ ಸೌಲಭ್ಯ ಇರುವ ಕಾರಣ ಮಾದಪ್ಪನ ಸನ್ನಿಧಿಗೆ ಬರುವ ಭಕ್ತರಲ್ಲಿ ಗಣನೀಯ ಏರಿಕೆಯಾಗಿದ್ದು , ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಂದ ತುಂಬಿ ತುಳುಕುತ್ತಿದೆ. ಚಿನ್ನದ ರಥ ಮೆರವಣಿಗೆ ವೇಳೆ ಸಹಸ್ರಾರು ಭಕ್ತರು ಉಘೇ ಮಾದಪ್ಪಾ ಉಘೇ ಉಘೇ ಎಂದು ಜೈಕಾರ ಹಾಕಿದರು.
ವಿಶೇಷ ದಿನಗಳ ಹೊರತುಪಡಿಸಿ ಸಾಮಾನ್ಯ ದಿನಗಳಲ್ಲೂ ಮಲೇ ಮಹದೇಶ್ವರ ಕ್ಷೇತ್ರಕ್ಕೆ ಭಕ್ತಗಣ ಹೆಚ್ಚಾಗಿದೆ. ಅಮಾವಾಸ್ಯೆ, ಹುಣ್ಣಿಮೆ, ವಾರಾಂತ್ಯಗಳಲ್ಲಿ ಹೆಚ್ಚಾಗುತ್ತಿರುವ ಜನರು ಮಾದಪ್ಪನ ದರ್ಶನಕ್ಕೆ ಆಗಮಿಸುತ್ತಿದ್ದು, ವಾರ್ಷಿಕ ೫೦ ಲಕ್ಷ ಭಕ್ತರು ಮಾದಪ್ಪನ ಸನ್ನಿಧಿಗೆ ಭೇಟಿ ನೀಡುವ ಮೂಲಕ ದಾಖಲೆ ಸೃಷ್ಟಿಯಾಗಿದೆ.