Saturday, April 19, 2025
Google search engine

Homeಸ್ಥಳೀಯಸಾಲು ಸಾಲು ರಜೆ: ಮಂಗಳವಾರವೂ ತೆರೆದಿರಲಿದೆ ಮೈಸೂರು ಮೃಗಾಲಯ

ಸಾಲು ಸಾಲು ರಜೆ: ಮಂಗಳವಾರವೂ ತೆರೆದಿರಲಿದೆ ಮೈಸೂರು ಮೃಗಾಲಯ

ಮೈಸೂರು: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಚಾಮರಾಜೇಂದ್ರ ಮೃಗಾಲಯದ ವಾರದ ರಜೆ ರದ್ದು ಮಾಡಲಾಗಿದ್ದು, ಇಂದು (ಡಿ.26) ಸಹ ತೆರೆದಿರಲಿದೆ.

ಪ್ರತಿ ಮಂಗಳವಾರ ಮೃಗಾಲಯಕ್ಕೆ ವಾರದ ರಜೆ ಇರುತ್ತದೆ. ಆದರೆ ಈ ಬಾರಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ವಾರದ ರಜೆ ರದ್ದು ಮಾಡಿ, ಎಂದಿನಂತೆ ಮೃಗಾಲಯ ತೆರೆದಿರಲಿದೆ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಡಿ ಮಹೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ದಾಖಲೆ ಪ್ರಮಾಣದಲ್ಲಿ ಪ್ರವಾಸಿಗರ ಭೇಟಿ

ಸಾಲು ಸಾಲು ರಜೆಯ ಕಾರಣದಿಂದಾಗಿ ಮೃಗಾಲಯಕ್ಕೆ ಶನಿವಾರದಿಂದ ಸೋಮವಾರದವರೆಗೆ ದಾಖಲೆ ಸಂಖ್ಯೆಯಲ್ಲಿ ಅಂದರೆ 1.01 ಲಕ್ಷ ಸಂದರ್ಶಕರು ಭೇಟಿ ನೀಡಿದ್ದರು. ಕಳೆದ ವರ್ಷ ಇದೇ ದಿನಗಳಲ್ಲಿ ಒಟ್ಟು 77,833 ಮಂದಿ ಬಂದಿದ್ದರು.

ಕ್ರಿಸ್‌ ಮಸ್‌ ದಿನವಾದ ಸೋಮವಾರ 35,344 ವೀಕ್ಷಕರು ಭೇಟಿ ನೀಡಿದ್ದರು. ಭಾನುವಾರ (ಡಿ.24) ದಾಖಲೆಯ 40,761 ಜನ ಬಂದಿದ್ದರು.

RELATED ARTICLES
- Advertisment -
Google search engine

Most Popular