ತುಮಕೂರು: ಕಾರು ಅಡ್ಡಗಟ್ಟಿ ರೌಡಿ ಶೀಟರ್ ಸೂರಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು.
ನಿನ್ನೆ ರಾತ್ರಿ ೧೦ ಸುಮಾರಿಗೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ಬೈಪಾಸ್‌ನಲ್ಲಿನಡೆದ ಘಟನೆ.
ಸೂರಿ ಕಾರಿನಲ್ಲಿ ತೆರಳುತಿದ್ದಾಗ ಇನ್ನೊಂದು ಕಾರಿನಲ್ಲಿ ಬಂದ ನಾಲ್ವರು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ರೌಡಿ ಶೀಟರ್ ಆಟೋ ರಾಮನ ಜೊತೆ ಗುರುತಿಸಿಕೊಂಡಿದ್ದ ಸೂರಿ, ಜೈಲು ವಾಸದ ಬಳಿಕ ಕಳೆದ ನಾಲ್ಕು ತಿಂಗಳಿನಿಂದ ಹುಲಿಯೂರುದುರ್ಗದಲ್ಲಿ ವಾಸಿಸುತ್ತಿದ್ದ , ಪೊಲೀಸ್ ವರಿಷ್ಟಾಧಿಕಾರಿ ಅಶೋಕ್ ಸ್ಥಳಕ್ಕೆ ಭೇಟಿ, ಪರಿಶೀಲನೆ ನೆಡೆಸುತ್ತಿದ್ದಾರೆ, ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.