Thursday, May 15, 2025
Google search engine

Homeಅಪರಾಧರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಮಂಗಳೂರಲ್ಲಿ ಮತ್ತೆ ಮೂವರು ಆರೋಪಿಗಳ ಅರೆಸ್ಟ್

ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಮಂಗಳೂರಲ್ಲಿ ಮತ್ತೆ ಮೂವರು ಆರೋಪಿಗಳ ಅರೆಸ್ಟ್

ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 01-05-2025ರಂದು ನಡೆದಿದ್ದ ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಅಜರುದ್ದೀನ್ @ ಅಜರ್ @ ಅಜ್ಜು, ಅಬ್ದುಲ್ ಖಾದರ್ @ ನೌಫಲ್ (24), ಮತ್ತು ನೌಷದ್ @ ವಾಮಂಜೂರು ನೌಷದ್ @ ಚೊಟ್ಟೆ ನೌಷದ್ (39) ಎಂದು ಗುರುತಿಸಲಾಗಿದೆ.

ಅಜರುದ್ದೀನ್ ವಿರುದ್ಧ ಪಣಂಬೂರು, ಸುರತ್ಕಲ್ ಮತ್ತು ಮುಲ್ಕಿ ಪೊಲೀಸ್ ಠಾಣೆಗಳಲ್ಲಿ ಒಟ್ಟು 3 ಕಳವು ಪ್ರಕರಣಗಳು ದಾಖಲಾಗಿದ್ದರೆ, ನೌಷದ್ ವಿರುದ್ಧ ಸುರತ್ಕಲ್, ಬಜ್ಪೆ, ಮೂಡಬಿದ್ರಿ, ಮಂಗಳೂರು ಉತ್ತರ ಮತ್ತು ಬಂಟ್ವಾಳ ಗ್ರಾಮಾಂತರ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ ಹಾಗೂ ದರೋಡೆಗೆ ಸಂಚು ಸೇರಿದಂತೆ 6 ಪ್ರಕರಣಗಳು ದಾಖಲಾಗಿವೆ.

ಆರೋಪಿಗಳ ಪೈಕಿ ನೌಫಲ್ ಕೊಲೆಯಾದ ಸುಹಾಸ್ ಶೆಟ್ಟಿಯ ಚಲನವಲನದ ಬಗ್ಗೆ ಮಾಹಿತಿ ನೀಡಿದ್ದು, ಕೊಲೆ ನಡೆದ ಬಳಿಕ ಕಾರಿನಲ್ಲಿ ಪರಾರಿಯಾಗಲು ಸಹಾಯ ಮಾಡಿದ್ದಾನೆ. ಚೊಟ್ಟೆ ನೌಷದ್ ಈ ಕೊಲೆ ಕೃತ್ಯದ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ.

ಪೊಲೀಸರು ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅಜರುದ್ದೀನ್ @ ಅಜರ್ @ ಅಜ್ಜು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನೌಫಲ್ ಮತ್ತು ಚೊಟ್ಟೆ ನೌಷದ್ ಅನ್ನು ಹೆಚ್ಚಿನ ತನಿಖೆಗಾಗಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೋರಲಾಗಿದೆ.

RELATED ARTICLES
- Advertisment -
Google search engine

Most Popular