Saturday, April 12, 2025
Google search engine

Homeರಾಜ್ಯಆರ್‌ಎಸ್‌ಎಸ್ ರೂಮರ್ಸ್ ಸ್ಪ್ರೆಡಿಂಗ್ ಸಂಘ್: ಬಿ.ಕೆ.ಹರಿಪ್ರಸಾದ್

ಆರ್‌ಎಸ್‌ಎಸ್ ರೂಮರ್ಸ್ ಸ್ಪ್ರೆಡಿಂಗ್ ಸಂಘ್: ಬಿ.ಕೆ.ಹರಿಪ್ರಸಾದ್

ಬೆಂಗಳೂರು: ಆರ್‌ಎಸ್‌ಎಸ್ ಅಂದ್ರೆ ರೂಮರ್ಸ್ ಸ್ಪ್ರೆಡಿಂಗ್ ಸಂಘ್ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದರು.

ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಅಂದ್ರೆ ರೂಮರ್ಸ್ ಸ್ಪ್ರೆಡ್ಡಿಂಗ್ ಸಂಘ್. ಅವರು ಕಳ್ಳನನ್ನು ಸುಳ್ಳ ಮಾಡ್ತಾರೆ, ಸುಳ್ಳನನ್ನು ಸತ್ಯವಂತ ಮಾಡ್ತಾರೆ. ಬಡವರು, ಅಮಾಯಕರನ್ನು ಧರ್ಮದ ಹೆಸರಲ್ಲಿ ದಾರಿ ತಪ್ಪಿಸುತ್ತಾರೆ ಎಂದು ಟೀಕಿಸಿದರು.

ಎಬಿವಿಪಿಯವರು ಮೊದಲು ಮುಸ್ಲಿಮರ ಬಗ್ಗೆ ಹೇಳೋದಿಲ್ಲ. ಶೂದ್ರ ಹುಡುಗರು ಸಿಕ್ಕಿದರೆ ಮೊದಲು ರಾಷ್ಟ್ರ ಕಟ್ಟಬೇಕು ಅಂತಾರೆ. ಆಮೇಲೆ ನಿಧಾನವಾಗಿ ಅವರ ತಲೆಯಲ್ಲಿ ಮುಸ್ಲಿಂ ದ್ವೇಷದ ಗೊಬ್ಬರ ತುಂಬುತ್ತಾರೆ. ದೇಶಭಕ್ತರು ಎನ್ನುವ ಆರ್‌ಎಸ್‌ಎಸ್‌ನವರು ತ್ರಿವರ್ಣ ಧ್ವಜಕ್ಕೆ ಗೌರವ ಕೊಡಲ್ಲ.

೫೨ ವರ್ಷ ಆರ್‌ಎಸ್‌ಎಸ್ ಕಚೇರಿ ಮೇಲೆ ಧ್ವಜ ಹಾರಿಸಿಲ್ಲ. ನಾವೆಲ್ಲ ಸಾಫ್ಟ್ ಹಿಂದುತ್ವದವರಲ್ಲ, ನಾವೆಲ್ಲ ಹಿಂದೂಗಳು. ನಮ್ಮ ಕಾಂಗ್ರೆಸ್‌ನಲ್ಲಿ ಕೆಲವರು ಸಾಫ್ಟ್ ಹಿಂದುತ್ವವಾದಿಗಳಿದ್ದಾರೆ ಎಂದರು.

RELATED ARTICLES
- Advertisment -
Google search engine

Most Popular