ಮುಂಬೈ: ಭಾರತದ ಅಭಿವೃದ್ಧಿಗೆ ಆರ್‌ಎಸ್‌ಎಸ್ ಕೊಡುಗೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಹಿಂದಿನಿಂದಲೂ ರಾಷ್ಟ್ರೀಯ ಸೇವೆಗೆ ಸಂಸ್ಥೆ ಬದ್ಧವಾಗಿದೆ ಎಂದು ಮೋದಿ ಬಣ್ಣಿಸಿದ್ದಾರೆ.
ಹಿಂಗ್ನಾದಲ್ಲಿ ಮಾಧವ ನೇತ್ರಾಲಯದ ಹೊಸ ಆವರಣಕ್ಕೆ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಮೋದಿ, ಮಾನವೀಯ ನೆರವಿನಲ್ಲಿ ಭಾರತದ ನಾಯಕತ್ವವನ್ನು ಒತ್ತಿ ಹೇಳಿದ್ದಾರೆ. ಜಾಗತಿಕ ಬಿಕ್ಕಟ್ಟುಗಳಿಗೆ ದೇಶದ ತ್ವರಿತ ಪ್ರತಿಕ್ರಿಯೆಗೆ ಆರ್‌ಎಸ್‌ಎಸ್ ಮೌಲ್ಯಗಳ ಬಗ್ಗೆ ತಿಳಿಸಿದ್ದಾರೆ.
ಆರ್‌ಎಸ್‌ಎಸ್ ಸಾಮಾಜಿಕ ಸೇವೆಯ ಆಧಾರಸ್ತಂಭ. 1925 ರಲ್ಲಿ ಸ್ಥಾಪನೆಯಾದಾಗಿನಿಂದ ‘ವಿಕಸಿತ ಭಾರತ’ ರೂಪಿಸುವಲ್ಲಿ ಅದರ ಪ್ರಸ್ತುತ ಪಾತ್ರದವರೆಗೆ ಗಮನಾರ್ಹ ಕೊಡುಗೆ ನೀಡಿದೆ. ಆರ್‌ಎಸ್‌ಎಸ್‌ನ ಅಭಿವೃದ್ಧಿ ಹೊಂದಿದ ಭಾರತದ ಕನಸು ರೂಪ ಪಡೆಯುತ್ತಿದೆ. ಮುಂದಿನ ವರ್ಷದಲ್ಲಿ, ನಾವು ಸಾಧಿಸಬೇಕಾದ ಮಹತ್ವದ ಮೈಲಿಗಲ್ಲುಗಳಿವೆ. ಮುಂದಿನ 1,000 ವರ್ಷಗಳಲ್ಲಿ ದೇಶದ ಪ್ರಗತಿಗೆ ಅಡಿಪಾಯ ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ಆರ್‌ಎಸ್‌ಎಸ್‌ನ ಸ್ಥಾಪಕ ಡಾ. ಕೇಶವ್ ಹೆಡ್ಗೆವಾರ್ ಅವರ ಆರಂಭಿಕ ಹೋರಾಟಗಳನ್ನು ಮೋದಿ ಶ್ಲಾಘಿಸಿದ್ದಾರೆ. ವಿಪತ್ತು ಪರಿಹಾರದಿಂದ ಹಿಡಿದು ಧಾರ್ಮಿಕ ಸಭೆಗಳಲ್ಲಿ ಯಾತ್ರಾರ್ಥಿಗಳಿಗೆ ಸಹಾಯ ಮಾಡುವವರೆಗೆ ಅವರ ನಿರಂತರ ಮಾನವೀಯ ಪ್ರಯತ್ನಗಳ ಬಗ್ಗೆ ಮಾತನಾಡಿದ್ದಾರೆ.
ಬ್ರಿಟಿಷ್ ಯುಗದ ಭಾರತೀಯ ದಂಡ ಸಂಹಿತೆಯನ್ನು ಭಾರತೀಯ ನ್ಯಾಯ ಸಂಹಿತೆ ಅಂತ ಬದಲಾಯಿಸಲಾಯಿತು. ದೆಹಲಿಯ ರಾಜಪಥವನ್ನು ಕರ್ತವ್ಯ ಪಥ ಅಂತ ಹೆಸರಿಸಲಾಯಿತು. ಭಾರತದ ವಸಾಹತುಶಾಹಿ ಭೂತಕಾಲದ ಅವಶೇಷಗಳನ್ನು ಅಳಿಸಿಹಾಕುವ ತನ್ನ ಸರ್ಕಾರದ ಬದ್ಧತೆಯನ್ನು ಮೋದಿ ಪುನರುಚ್ಚರಿಸಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದಲ್ಲಿರುವ ದ್ವೀಪಗಳಿಗೆ ವಿನಾಯಕ ಸಾವರ್ಕರ್ ಮತ್ತು ಸುಭಾಷ್ ಚಂದ್ರ ಬೋಸ್ ಅವರಂತಹ ರಾಷ್ಟ್ರೀಯತಾವಾದಿ ಐಕಾನ್‌ಗಳ ಹೆಸರನ್ನು ಇಡಲಾಗುವುದು ಎಂದು ತಿಳಿಸಿದ್ದಾರೆ.