ಬಳ್ಳಾರಿ: ತಾಲೂಕಿನ ರೂಪನಗುಡಿ ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗದವರಿಗೆ ಆಯುಷ್ಮಾನ್ ಭವ ಕೇಂದ್ರ ಆರೋಗ್ಯ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಇತರರಿಗೆ ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಲಾಯಿತು. ಕ್ಷಯ ರೋಗದ ಬಗ್ಗೆ ತರಬೇತಿ ನೀಡಲಾಯಿತು.
ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು ನಿಕ್ಷಯಮಿತ್ರ ಕಾರ್ಯಕ್ರಮದಡಿ 10 ಕ್ಷಯ ರೋಗಿಗಳಿಗೆ ಆರು ತಿಂಗಳ ಆಹಾರ ಕಿಟ್ ವಿತರಿಸಿದರು. ಇನ್ನೋರ್ವ ದಾನಿ ನಾರಾಯಣಸ್ವಾಮಿ ಆರು ತಿಂಗಳ ಕಾಲ 7 ಕ್ಷಯ ರೋಗಿಗಳಿಗೆ ಆಹಾರ ಕಿಟ್ ವಿತರಿಸಿದರು. ಒಟ್ಟು 17 ಕ್ಷಯ ರೋಗಿಗಳನ್ನು ಆರು ತಿಂಗಳ ಕಾಲ ದತ್ತು ಪಡೆದು ಸ್ವತಃ ದಾನಿಗಳಾಗಿ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು. ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರೂಪಂಗುಡಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಚಿತ್ರಾ ವರ್ಣೇಕರ್ ಹೇಳಿದರು.
ರೂಪನಗುಡಿ ಗ್ರಾಪಂ ಅಧ್ಯಕ್ಷ ಮಲ್ಲಯ್ಯ, ಉಪಾಧ್ಯಕ್ಷೆ ರಾಮಾಂಜಿನಿ, ಮಾಜಿ ಅಧ್ಯಕ್ಷ ನಾಗರಾಜು, ಪಿ.ಡಿ.ಒ.ಪ್ರಕಾಶ್, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಚೇರಿಯ ಹಿರಿಯ ವೈದ್ಯಕೀಯ ಮೇಲ್ವಿಚಾರಕ ಶಿವಾನಂದ, ವೀರೇಶ್, ಸಮುದಾಯ ಆರೋಗ್ಯಾಧಿಕಾರಿ ಪಿ.ಮರ್ಸಿ, ಸಜನಿ, ಶಾಜಿದಾ ಸುಲ್ತಾನ್ ಸೇರಿದಂತೆ ಗ್ರಾಮದ ಸರ್ವ ಸದಸ್ಯರು, ಸಿಬ್ಬಂದಿ ಹಾಗೂ ಆಶಾ ಸಿಬ್ಬಂದಿ, ಸ್ತ್ರೀಶಕ್ತಿ ಸಂಘದ ಸದಸ್ಯರು, ಅಂಗನವಾಡಿ ಶಿಕ್ಷಕರು ಹಾಗೂ ಎಲ್ಲಾ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.