ಹೊಸೂರು : ಪ್ರವಾಸೋಧ್ಯಮ ಇಲಾಖೆಯ ಮೂಲಕ ಚುಂಚನಕಟ್ಟೆ ಗ್ರಾಮವನ್ನು ಮತ್ತಷ್ಟು ಅಭಿವೃದ್ದಿ ಪಡಿಸಲು ತಾವು ಮತ್ತಷ್ಟು ರೂಪು ರೇಷೆಯನ್ನು ಸಿದ್ದಪಡಿಸಿದ್ದೇನೆ ಎಂದು ಶಾಸಕ ಡಿ ರವಿಶಂಕರ್ ಹೇಳಿದರು. ಸಾಲಿಗ್ರಾಮ ತಾಲ್ಲೋಕಿನ ಚುಂಚನಕಟ್ಟೆಯ ಶ್ರೀರಾಮ ರಥೋತ್ಸವಕ್ಕೆ ಚಾಲನೆ ನೀಡಿ ನಂತರ ನಡೆದ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಜಾತ್ರೆಯು ರಾಜ್ಯದಲ್ಲಿಯೇ ಹೆಸರನ್ನು ಪಡೆದಿದ್ದು ಚುಂಚನಕಟ್ಟೆ ಕ್ಷೇತ್ರದ ಅಭಿವೃದ್ದಿಗೆ ತಾವು ದುಡಿಯಲಿದ್ದು ಶ್ರೀರಾಮ ಕ್ಷೇತ್ರದ ಅವಳಿ ತಾಲ್ಲೋಕುಗಳ ಬರಪರಿಸ್ಥಿತಿಯನ್ನು ಹೋಗಲಾಡಿಸಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಬೆಳೆಯನ್ನು ನೀಡಲಿ ಎಂದು ಎಂದು ಪ್ರಾರ್ಥಿಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಸಂಸ್ಥಾನ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ ಚುಂಚನಕಟ್ಟೆ ಕ್ಷೇತ್ರ ಪ್ರಭು ಶ್ರೀರಾಮ-ಸೀತಾಮಾತೆ ಪಾದವಿಟ್ಟ ಜಾಗವಾಗಿದ್ದು ನಿಜಸತ್ಯದ ಆಡಳಿತವನ್ನು ಜನರಿಗೆ ನೀಡಿದ ರಾಮನ ಜೀವನ ಇಂದಿನ ದಿನಮಾನದಲ್ಲಿ ಎಲ್ಲರಿಗೂ ಆದ್ಯತೆಯಾಗಬೇಕಿದ್ದು ಜಗದ ಉದ್ದಾರವನ್ನು ರಾಮರಾಜ್ಯದ ಮೂಲಕ ನಾವು ಮಾಡಬೇಕಿದ್ದು ಆತನ ಆದರ್ಶಪ್ರಾಯ ಬದುಕು ಪ್ರಸ್ತುತ ಆಧುನಿಕ ಜಂಜಾಟಕ್ಕೆ ಪರಿಹಾರ ನೀಡಬಹುದಾಗಿದ್ದು ಭಾತೃತ್ವ,ತಂದೆತಾಯಿಯರ ಮೌಲ್ಯ ಕೌಟುಂಬಿಕ ಪರಿಸರದಲ್ಲಿ ಶುದ್ದತೆ ರಾಮ ಜಗತ್ತಿಗೆ ನೀಡಿದ ಕೊಡುಗೆಯಾಗಿದೆ ಎಂದು ಹೇಳಿದರು.