ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕಳೆದ 15 -20 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗ್ರಾಮೀಣ ಭಾಗದ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಡಿ ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ತೊಂದರೆ ಕೊಪ್ಪಲು ಗ್ರಾಮದಲ್ಲಿ ಸುಮಾರು 3.5 ಕೋಟಿ ವೆಚ್ಚದ ಸಾಲಿಗ್ರಾಮ ಹಳ್ಳಿ ಮೈಸೂರು ಮುಖ್ಯ ರಸ್ತೆಯಿಂದ ಮೇಲೂರು ಗ್ರಾಮದ ಸಂಪರ್ಕ ರಸ್ತೆವರೆಗಿನ ಸುಮಾರು 2.5 ಕಿಲೋಮೀಟರ್ ರಸ್ತೆಯ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ನಡುವೆಯೂ ಕೆ ಆರ್ ನಗರ ತಾಲೂಕಿನ ಅಭಿವೃದ್ಧಿ ಕೆಲಸಗಳಿಗೆ ಯಾವುದೇ ಕೊರತೆಯಾಗದಂತೆ ಸರ್ಕಾರದ ಬಳಿ ಚರ್ಚಿಸಿ ಅನುದಾನ ತರಲಾಗುತ್ತಿದೆ ಎಂದು ಹೇಳಿದ ಅವರು ಈ ಭಾಗದ ಗ್ರಾಮಗಳ ಸಂಪರ್ಕ ರಸ್ತೆಗಳನ್ನು ಜಿಲ್ಲಾ ರಸ್ತೆ ವ್ಯಾಪ್ತಿಯಿಂದ ಲೋಕೋಪಯೋಗಿ ರಸ್ತೆ ವ್ಯಾಪ್ತಿಗೆ ತರುವ ಕೆಲಸವಾಗುತ್ತಿದೆ ಪ್ರತಿ ಗ್ರಾಮದಲ್ಲೂ ಮೂಲಭೂತ ಸಮಸ್ಯೆ ನಿವಾರಣೆಗೆ ಒತ್ತು ನೀಡುತ್ತಿರುವುದಲ್ಲದೆ ಗ್ರಾಮೀಣ ನೀರು, ಆಸ್ಪತ್ರೆ ಹಾಗೂ ರಸ್ತೆಗಳನ್ನು ಉತ್ತಮಪಡಿಸುವ ಕಾರ್ಯ ಮಾಡಲಾಗುತ್ತಿದೆ. ಹಳ್ಳಿಗಳಲ್ಲಿ ಜನರ ಸಂಪರ್ಕಕ್ಕೆ ಉತ್ತಮ ರಸ್ತೆಗಳು ಅಗತ್ಯವಾಗಿದ್ದು, ಕ್ಷೇತ್ರ ಶಾಸಕರ ಅನುದಾನದ ಜತೆಗೆ ವಿಶೇಷ ಅನುದಾನದಲ್ಲಿ ಹಲವು ಕಡೆ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷ ಪ್ರಮೀಳಾ ರಮೇಶ್, ರೈತ ಮತ್ತು ಕಾರ್ಮಿಕ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ್, ಕೇಬಲ್ ರವಿ, ಚಂದ್ರೆಗೌಡ, ರಂಗೇಗೌಡ ನಾಗರಾಜು ಕುಳ್ಳೇಗೌಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್, ಸಹಾಯಕ ನವೀನ್ ಲೋಕೋಪಯೋಗಿ ಇಲಾಖೆಯ ಎ. ಇ. ಇ ಸುಮಿತ್ರಾ, ಎ. ಇ ಚಂದನ್,ತಂದ್ರೆ ವೆಂಕಟೇಶ್, ದಿಲೀಪ್, ಧರ್ಮ, ನವೀನ್, ಪುನೀತ್, ಶಿವಕುಮಾರ್ ಇದ್ದರು.