Friday, April 4, 2025
Google search engine

Homeವಿದೇಶಶೀಘ್ರದಲ್ಲೇ ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಭೇಟಿ

ಶೀಘ್ರದಲ್ಲೇ ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಭೇಟಿ

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.

ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿಯ ನಿರ್ದಿಷ್ಟ ದಿನಾಂಕ ಪ್ರಕಟಿಸಲು ರಷ್ಯಾ ಸಕಲ ಸಿದ್ಧತೆಯನ್ನು ಪ್ರಾರಂಭಿಸಿದೆ. ಶೀಘ್ರದಲ್ಲೇ ನಾವು ಅವರ ಭೇಟಿಯ ನಿಖರವಾದ ದಿನಾಂಕಗಳನ್ನು ತಿಳಿಸುತ್ತೇವೆ. ಪ್ರಧಾನಿ ಮೋದಿಯವರು ರಷ್ಯಾಕ್ಕೆ ಎರಡು ಬಾರಿ ಭೇಟಿ ನೀಡಿದ್ದರು. ಈಗ ಉಭಯ ದೇಶಗಳ ಸಂಬಂಧ ವೃದ್ಧಿಗಾಗಿ ನಮ್ಮ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಉಕ್ರೇನ್‌ನಲ್ಲಿ ಮೇಲಿನ ಯುದ್ಧಾಪರಾಧಗಳಿಗಾಗಿ ಪುಟಿನ್‌ಗೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಬಂಧನ ವಾರಂಟ್ ಜಾರಿ ಮಾಡಿದೆ. ಇದಾದ ಬಳಿಕ ICCಯು ಪುಟಿನ್ ಮತ್ತು ಮಕ್ಕಳ ಹಕ್ಕುಗಳ ರಷ್ಯಾದ ಕಮಿಷನರ್ ಮಾರಿಯಾ ಲ್ವೋವಾ-ಬೆಲೋವಾ ಇಬ್ಬರ ವಿರುದ್ಧವೂ ಯುದ್ಧ ಅಪರಾಧಗಳಿಗಾಗಿ ಬಂಧನ ವಾರಂಟ್‌ಗಳನ್ನು ಹೊರಡಿಸಿತು.

ನ್ಯಾಯಾಲಯದ ಬೈಂಡಿಂಗ್ ಒಪ್ಪಂದದ ಅಡಿಯಲ್ಲಿ ICC ವಾರಂಟ್ ಹೊರಡಿಸಲಾಗಿದೆ. ಈ ಇಬ್ಬರು ICC ಯ ಸದಸ್ಯ ರಾಷ್ಟ್ರಗಳಿಗೆ ಭೇಟಿ ನೀಡಿದರೆ ಅವರನ್ನು ಬಂಧಿಸಬೇಕು ಎಂಬ ಕಾನೂನಿದೆ. ಆದಾಗ್ಯೂ, ಭಾರತವು ಈ ಒಪ್ಪಂದಕೆ ಸಹಿ ಮಾಡಿಲ್ಲ.

ಕಳೆದ ತಿಂಗಳು, ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ರಾಷ್ಟ್ರಗಳ ಗುಂಪಿನ ನಾಯಕರ ವಾರ್ಷಿಕ ಶೃಂಗಸಭೆಗಾಗಿ ರಷ್ಯಾದ ಕಜಾನ್‌ಗೆ ಭೇಟಿ ನೀಡಿದ್ದರು. ಶೃಂಗಸಭೆಯ ಹಿನ್ನೆಲೆಯಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಸಭೆ ನಡೆಸಿದ್ದರು.

RELATED ARTICLES
- Advertisment -
Google search engine

Most Popular