ಪಿರಿಯಾಪಟ್ಟಣ: ಮಸಣಿಕಮ್ಮ ದೇವಾಲಯಕ್ಕೆ ಖ್ಯಾತ ಗಾಯಕಿ ಎಸ್. ಜಾನಕಿ ಭೇಟಿ ಪೂಜೆ ಸಲ್ಲಿಸಿದರು ನೀಡಿದರು. ಪಿರಿಯಾಪಟ್ಟಣದ ಮಸಣಿಕಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದ ಎಸ್ ಜಾನಕಿ ಮಸಣಿಕಮ್ಮ ದೇವರಿಗೆ ಸೀರೆ ಉಡುಗೊರೆಯಾಗಿ ನೀಡಿ ಭಕ್ತಿ ಸಮರ್ಪಿಸಿದರು.
ಪಿರಿಯಾಪಟ್ಟಣದ ಮಸನಣೀಕಮ್ಮ ದೇವಾಲಯದ ಬಗ್ಗೆ ಕೇಳಿದ್ದೆ ಆದರೆ ನೋಡಲು ಸಾಧ್ಯವಾಗಿರಲಿಲ್ಲ ಈ ಬಾರಿ ದೇವಾಲಯಕ್ಕೆ ಭೇಟಿ ನೀಡಿ ತಾಯಿ ಆಶೀರ್ವಾದ ಪಡೆದಿದ್ದೇನೆ ದೇವಾಲಯಕ್ಕೆ ಭೇಟಿ ನೀಡಿದ್ದು ಸಂತೋಷ ತಂದಿದೆ ಎಂದು ತಿಳಿಸಿದರು.
ಎಸ್. ಜಾನಕಿ ಭೇಟಿ ನೀಡಿರುವುದನ್ನು ಅರಿತ ಭಕ್ತಾದಿಗಳು ಜಾನಕಿಯವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ನಂತರ ಪಿರಿಯಾಪಟ್ಟಣದ ಪುರಸಭಾ ಸದಸ್ಯ ಪಿ.ಎನ್. ವಿನೋದ್ ರವರ ಮನೆಗೆ ಭೇಟಿ ನೀಡಿ. ಕುಟುಂಬಸ್ಥರಿಂದ ಸನ್ಮಾನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನವೀನ್ ಕುಮಾರ್, ಪುರಸಭಾ ಮಾಜಿ ಸದಸ್ಯ ಪಿ.ಎನ್ ನಂಜುಂಡಸ್ವಾಮಿ, ಮತ್ತಿತರರು ಹಾಜರಿದ್ದರು.