ಪಿರಿಯಾಪಟ್ಟಣ: ತಾಲೂಕಿನ ಹುಣಸವಾಡಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿಗ ಎಸ್.ಲೋಕೇಶ್ ಮತ್ತು ಉಪಾಧ್ಯಕ್ಷರಾಗಿ ಮಂಜುಳ ಅವಿರೋಧ ಆಯ್ಕೆಯಾದರು.
ಗ್ರಾ.ಪಂ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಸ್.ಲೋಕೇಶ್ ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆ ಚುನಾವಣಾಧಿಕಾರಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಅವಿರೋಧ ಆಯ್ಕೆ ಘೋಷಿಸಿದರು. ಚುನಾವಣಾ ಫಲಿತಾಂಶ ಬಳಿಕ ಜೆಡಿಎಸ್ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಪಕ್ಷದ ವರಿಷ್ಠರ ಪರ ಜೈಕಾರ ಕೂಗಿ ಸಂಭ್ರಮಿಸಿದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಮಾಜಿ ಶಾಸಕ ಕೆ.ಮಹದೇವ್ ಸಹೋದರ ಉದ್ಯಮಿ ಕೆ.ರಮೇಶ್, ಮೈಮುಲ್ ನಿರ್ದೇಶಕ ಎಚ್.ಡಿ ರಾಜೇಂದ್ರ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ತಾ.ಪಂ ಮಾಜಿ ಸದಸ್ಯರಾದ ಎಸ್.ರಾಮು, ಎ.ಟಿ ರಂಗಸ್ವಾಮಿ, ಪುರಸಭಾ ಮಾಜಿ ಅಧ್ಯಕ್ಷ ಕೆ.ಮಹೇಶ್ ಸನ್ಮಾನಿಸಿ ಶುಭ ಕೋರಿ ಮಾತನಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಗ್ರಾಮಗಳ ಮೂಲಭೂತ ಸೌಕರ್ಯ ಸಮಸ್ಯೆ ಬಗೆಹರಿಸಲು ನೂತನ ಅಧ್ಯಕ್ಷ ಉಪಾಧ್ಯಕ್ಷರು ಹೆಚ್ಚು ಒತ್ತು ನೀಡಿ ಪಂಚಾಯಿತಿಯನ್ನು ಅಭಿವೃದ್ಧಿ ಪಥದಲ್ಲಿ ಸಾಗಿ ಮತದಾರರು ನೀಡಿದ ತೀರ್ಪಿಗೆ ಪಾರದರ್ಶಕ ಕರ್ತವ್ಯ ನಿರ್ವಹಿಸಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುವಂತೆ ತಿಳಿಸಿದರು.
ಈ ಸಂದರ್ಭ ಸದಸ್ಯರಾದ ಸುಶೀಲಮ್ಮ, ಎ.ಜೆ ಸ್ವಾಮಿ, ಸ್ವಾಮಿನಾಯಕ, ಜ್ಯೋತಿ, ಅಶೋಕ್.ಆರ್, ದೇವ.ಕೆ, ಎಸ್.ನಾಗರಾಜು, ರತ್ನಮ್ಮ, ಶಶಿಕಲಾ.ಎಸ್, ಮಂಜುಳ, ಎಂ.ಟಿ ಸುಬ್ರಮಣ್ಯ, ಗೌರಮ್ಮ, ರವಿ, ರೇಣುಕಾ, ಲಕ್ಷ್ಮಮ್ಮ, ಶಾಂತೇಗೌಡ, ಪಿಡಿಒ ಮಂಜುನಾಥ್ ಮತ್ತು ಸಿಬ್ಬಂದಿ ಜೆಡಿಎಸ್ ಪಕ್ಷದ ಮುಖಂಡರಾದ ಸುನಿಲ್, ಪರಮೇಶ್ ಮಹದೇವ್, ಗಣೇಶ್ ಹಾಗು ಕಾರ್ಯಕರ್ತರು ಇದ್ದರು.
