ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ:ಎಚ್ ಡಿ ಕೋಟೆ ತಾಲೂಕು ಅಣ್ಣೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಉಳಿದ 30 ತಿಂಗಳಿಗೆ ಅವಧಿಗೆ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಡೆಯಿತು.
2020 ರಿಂದ 2023 ನೇ ಸಾಲಿಗೆ ಈ ಹಿಂದೆ ಅಧ್ಯಕ್ಷರಾಗಿ ಆಯ್ಕೆಗೊಂಡು ಉತ್ತಮ ಸೇವೆ ಸಲ್ಲಿಸಿದ ಪರಿಣಾಮ ಮತ್ತೆ ಅವರನ್ನೇ ಆಯ್ಕೆ ಮಾಡುವಲ್ಲಿ ಸದಸ್ಯರು ನಿರ್ಣಯ ಕೈಗೊಂಡರು. ಅದರಂತೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎಸ್ ಮಹೇಶ್ ರವರು ಸರ್ವಾನುಮತದಿಂದ ಪುನರಾಯ್ಕೆಗೊಂಡಿದ್ದಾರೆ.
ಆಯ್ಕೆಗೊಂಡ ನಂತರ ಮಾತನಾಡಿದ ಮಹೇಶ್ ನಮ್ಮ ಗ್ರಾಮ ಪಂಚಾಯಿತಿಗೆ ಬರುವ ಹಳ್ಳಿಗಳಿಗೆ ಸರ್ಕಾರದಿಂದ ಬರುವ ಅನುದಾನಗಳನ್ನು ಬಳಸಿಕೊಂಡು ಜನರಿಗೆ ತಲುಪುವ ಕೆಲಸ ಮಾಡುತ್ತೇನೆ. ನಮ್ಮ ಸಮಿತಿಗೆ ಬರುವ ಈ ಸ್ವತ್ತು ,11 ಬಿ ಹಾಗೂ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಹೊತ್ತು ನೀಡುತ್ತೇನೆ. ನನ್ನ ಜೊತೆ ಆಯ್ಕೆ ಕೊಂಡಿರುವ ಎಲ್ಲಾ ಸದಸ್ಯರ ಒಳಗೋಡಿ ನಮ್ಮ ಗ್ರಾಮ ಪಂಚಾಯಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ, P D O ಸಂತೋಷ್ ನಾಗ , ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಿದ್ದಮ್ಮ , ಉಪಾಧ್ಯಕ್ಷ ಸುಮಾ, ಗ್ರಾಮ ಪಂಚಾಯಿತಿ ತಾಲೂಕು ಒಕ್ಕೂಟದ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತಿ ಸದಸ್ಯ ಗುರುಸ್ವಾಮಿ , ಹೆಚ್ಎಸ್ ಸ್ವಾಮಿ ,ರಾಜೇಶ್ , ಶಶಿಕುಮಾರ್ , ಶಿವಮ, ಜಯಮ್ಮ , ಸುಂದರಮಣಿ, ಚಿಕ್ಕಮ್ಮ, ಸರಸ್ವತಿ , ಜಯಲಕ್ಷ್ಮಿ ಎಡತೊರೆ ಜಯಮ್ಮ , ಹಾಜರಿದ್ದರು.
