ಹೊಸೂರು : ಅಧಿಕಾರ ಇರಲಿ ಇಲ್ಲದಿರಲಿ ಜನರ ಸೇವೆ ಮಾಡುವುದೇ ಮಾಜಿ ಶಾಸಕ ಸಾ ರಾ ಮಹೇಶ್ ಅವರ ಗುರಿ ಯಾವತ್ತು ಕೂಡ ಅವರು ಅಧಿಕಾರದ ಹಿಂದೆ ಹೋದವರಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಮಧುಚಂದ್ರ ತಿಳಿಸಿದರು.
ಸಾಲಿಗ್ರಾಮ ಸರ್ಕಾರಿ ಆಸ್ಪತ್ರೆಯಲ್ಲಿ ಸಾ ರಾ ಮಹೇಶ್ ಹುಟ್ಟು ಹಬ್ಬದ ಪ್ರಯುಕ್ತ ತಂದ್ರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾವೆಂಕಟೇಶನಾಯಕ ಅವರು ಹಮ್ಮಿಕೊಂಡಿದ್ದ ರೋಗಿಗಳಿಗೆ ಉಚಿತ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
15 ವರ್ಷಗಳ ಅವಧಿಯಲ್ಲಿ ಮಾಜಿ ಶಾಸಕ ಸಾರಾ ಮಹೇಶ್ ಅವರ ಬಗ್ಗೆ ಎಲ್ಲೂ ಕಪ್ಪು ಚುಕ್ಕಿ ಇಲ್ಲದಂತೆ ಸಾಲಿಗ್ರಾಮ ಮತ್ತು ಕೆ ಆರ್ ನಗರ ಎರಡು ತಾಲೂಕುಗಳನ್ನ ಸಮಗ್ರ ಅಭಿವೃದ್ಧಿ ಮಾಡಿದ ವ್ಯಕ್ತಿ ಸಾ ರಾ ಮಹೇಶ್ ರವರು ಅಂತಹವರನ್ನು ಚುನಾವಣಾ ಪ್ರತಿನಿಧಿಯಾಗಿ ಕಳೆದುಕೊಂಡಿರುವುದು ಬಹಳ ನೋವಾಗಿದೆ. ಚುನಾವಣೆಯಲ್ಲಿ ಸೋತರು ಕೂಡ ಯಾವುದೇ ಧೃತಿ ಗಿಡದ ನಿತ್ಯವೂ ಜನರ ಕಷ್ಟ ಸುಖದಲ್ಲಿ ಭಾಗಿಯಾಗುತ್ತಿದ್ದಾರೆ ಎಂದರು.
ಪ್ರತಿನಿತ್ಯ ಸಾರ್ವಜನಿಕರ ಕುಂದು ಕೊರತೆಗೆ ಸ್ಪಂದಿಸುತ್ತಿದ್ದ ವ್ಯಕ್ತಿ ಸಾರಾ ಮಹೇಶ್ ಅವರನ್ನು ರಾಜಕೀಯವಾಗಿ ಕಳೆದುಕೊಂಡಿರುವುದು ಕಾರ್ಯಕರ್ತರಿಗೆ ನುಂಗಲಾರದ ತುತ್ತಾಗಿದೆ. ಶೀಘ್ರದಲ್ಲೇ ಮಾಜಿ ಶಾಸಕ ಸಾ ರಾ ಮಹೇಶ್ ರವರು ತಾಲೂಕಿನ ಅತ್ಯಂತ ಮತ ನೀಡಿರುವ ಜನರ ಕಷ್ಟ ಸುಖಗಳಿಗೆ ಸ್ಪಂದಿಸಲು ಬರುತ್ತಾರೆ ಎಂದ ಅವರು ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಣುಕಾ ವೆಂಕಟೇಶ ನಾಯಕ ಅವರಿಗೆ ಅಭಿನಂದಿಸಿದರು .ಇಂತಹ ಸಮಾಜಮುಖಿ ಕೆಲಸಗಳನ್ನು ಇನ್ನು ಹೆಚ್ಚು ಮಾಡಲು ಆ ದೇವರು ನಿಮಗೆ ಶಕ್ತಿ ಕೊಡಲಿ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಮಾತನಾಡಿ 40 ವರ್ಷಗಳಿಂದ ಅಭಿವೃದ್ಧಿ ಕಾಣದ ಕೆ ಆರ್ ನಗರ ವಿಧಾನಸಭಾ ಕ್ಷೇತ್ರವನ್ನು 15 ವರ್ಷದಲ್ಲಿ ಸಮಗ್ರ ಅಭಿವೃದ್ಧಿ ಮಾಡಿದ ಮಾಜಿ ಶಾಸಕ ಸಾ ರಾ ಮಹೇಶ್ ಅವರನ್ನ ಮತದಾರರು ತಿರಸ್ಕಾರ ಮಾಡಬರದಾಗಿತ್ತು. ಆದರೆ ಮಾಡಿದ ಮತದಾರರಿಗೆ ಈಗ ಅರ್ಥವಾಗುತ್ತಿದೆ ಆದರೆ ಈಗ ಪ್ರಯೋಜವಿಲ್ಲ, ಸಾರಾ ಮಹೇಶ್ ರವರು ತಾಲೂಕಿಗೆ ಬರುವ ತನಕ ಅವರ ಮಾರ್ಗದರ್ಶನದಲ್ಲಿ ಜೆಡಿಎಸ್ ಕಾರ್ಯಕರ್ತರೇ ಅವರ ಸ್ಥಾನದಲ್ಲಿ ಇದ್ದುಕೊಂಡು ಜನರ ಸೇವೆ ಮಾಡುತ್ತೇವೆ. ಜೆಡಿಎಸ್ ಕಾರ್ಯಕರ್ತರು ಕುಗ್ಗದೆ ಪಕ್ಷ ಸಂಘಟನೆ ಮಾಡಿ ಶೀಘ್ರದಲ್ಲೇ ಮಾಜಿ ಶಾಸಕ ಸಾರಾ ಮಹೇಶ್ ಅವರು ತಾಲೂಕಿಗೆ ಬರುತ್ತಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯೆ ಸುನಿತಾಸ್ವಾಮಿ. ಅನೀತಾಕೀರ್ತಿ, ರಾಂಪುರ ಲೋಕೇಶ್, ಮಾದನಾಯಕ, ಡಾ ಗಣೇಶ್, ಗೋಬಿಶಂಕರ್, ಸುರೇಶ್, ಆಟೋಶಂಕರ್ , ಮಾಜಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರ್. ವೈದ್ಯ ಮಂಜುನಾಥ್. ಕೀರ್ತಿ, ಜೆಡಿಎಸ್ ಮುಸ್ಲಿಂ ಮುಖಂಡ ಏಜೆಸ್ ಭಾಷಾ. ರಾಂಪುರಹರೀಶ್, ಮಟನ್ ಮಾದೇವ್, ಸಾ ರಾ ಸತೀಶ್, ಹೊಸೂರುಸಂತೋಷ್, ಸೇರಿದಂತೆ ಜೆಡಿಎಸ್ ಎಲ್ಲಾ ಕಾರ್ಯಕರ್ತರು ಹಾಜರಿದ್ದರು.