Friday, April 18, 2025
Google search engine

Homeರಾಜ್ಯಸುದ್ದಿಜಾಲನಾಗರಹೊಳೆ ವಲಯದಲ್ಲಿ ಜು.31ರವರೆಗೆ ಸಫಾರಿ ನಿರ್ಬಂಧ

ನಾಗರಹೊಳೆ ವಲಯದಲ್ಲಿ ಜು.31ರವರೆಗೆ ಸಫಾರಿ ನಿರ್ಬಂಧ

ಹುಣಸೂರು: ನಾಗರಹೊಳೆ ಉದ್ಯಾನವನದಲ್ಲಿ ಸತತ ಮಳೆಯಿಂದಾಗಿ ಜು.31ರವರೆಗೆ ನಾಗರಹೊಳೆ ವನ್ಯಜೀವಿ ವಲಯಕ್ಕೆ ಸಫಾರಿಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷ ಕುಮಾರ್ ಚಿಕ್ಕನರಗುಂದ ಈ ಕುರಿತು ಮಾಹಿತಿ ನೀಡಿದ್ದು, ಉದ್ಯಾನವನದ ಎಲ್ಲ ವಲಯಗಳಲ್ಲೂ ಉತ್ತಮ ಮಳೆಯಾಗಿದ್ದು, ಬಿರುಗಾಳಿ ಸಹಿತ ಮಳೆಗೆ ನಾಗರಹೊಳೆ ಸಫಾರಿ ಲೈನ್‌ ಗಳಲ್ಲಿ ಮರಗಳು ಬಿದ್ದಿರುವುದರಿಂದ ಜೊತೆಗೆ ಮಳೆಯಿಂದಾಗಿ ಸಫಾರಿ ರಸ್ತೆಗಳಲ್ಲಿ ವಾಹನ ಸಂಚಾರ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ವನ್ಯಧಾಮ ವೀಕ್ಷಣೆಗೆ ಬರುವ ವನ್ಯಪ್ರಿಯರ ಸುರಕ್ಷತೆಯ ಹಿತದೃಷ್ಟಿಯಿಂದ ನಾಗರಹೊಳೆ ವನ್ಯಜೀವಿ ವಲಯದ ನಾಣಚ್ಚಿ ಗೇಟ್ ಹಾಗೂ ವೀರನಹೊಸಹಳ್ಳಿ ಗೇಟ್‌ ನಿಂದ ಆರಂಭಗೊಳ್ಳುತ್ತಿದ್ದ ಸಫಾರಿಯನ್ನು  ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ಆದರೆ ನಾಗರಹೊಳೆ ಉದ್ಯಾನ ವ್ಯಾಪ್ತಿಯ ದಮ್ಮನಕಟ್ಟೆ(ಕಾಕನಕೋಟೆ) ಸಫಾರಿ ಕೇಂದ್ರವು ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular