Monday, January 12, 2026
Google search engine

Homeರಾಜ್ಯವೀರ ವೆಂಕಟೇಶ ದೇವರಿಗೆ ಸಹಸ್ರ ಕುಂಬಾಭಿಷೇಕ: 14 ನೇ ವರ್ಷದ ಪುನಃ ಪ್ರತಿಷ್ಠಾ ವರ್ಧಂತಿ

ವೀರ ವೆಂಕಟೇಶ ದೇವರಿಗೆ ಸಹಸ್ರ ಕುಂಬಾಭಿಷೇಕ: 14 ನೇ ವರ್ಷದ ಪುನಃ ಪ್ರತಿಷ್ಠಾ ವರ್ಧಂತಿ

ಮಂಗಳೂರು ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ದೇವರ ೧೪ ನೇ ವರ್ಷದ ಪುನಃ ಪ್ರತಿಷ್ಠಾ ವರ್ಧಂತಿ ಆದಿತ್ಯವಾರ ವಿಜೃಂಭಣೆಯಿಂದ ನಡೀತು. ಪ್ರಾತಃ ಕಾಲ ಮಹಾಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಪ್ರಧಾನ ಶ್ರೀ ಭೂದೇವಿ ಶ್ರೀದೇವಿ ಸಹಿತ ವೀರ ವೆಂಕಟೇಶ್ ದೇವರ ಹಾಗೂ ಉತ್ಸವ ಶ್ರೀನಿವಾಸ ದೇವರ ವಿಗ್ರಹಗಳಿಗೆ ಪಂಚಾಮೃತ, ಗಂಗಾಭಿಷೇಕ, ಕನಕಾಭಿಷೇಕ ಶತಕಲಶಭಿಷೇಕಗಳು ಶ್ರೀ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ನಡೆಯಿತು. ಮಧ್ಯಾಹ್ನ ಪೂಜೆ ಬಳಿಕ ಸಮಾರಾಧನೆ ಸಾಯಂಕಾಲ ಸ್ವರ್ಣ ಲಾಲಕಿ ಯಲ್ಲಿ ಒಂದು ಪೇಟೆ ಉತ್ಸವ ಬಳಿಕ ಶ್ರೀ ದೇವಳದಲ್ಲಿ ಪ್ರಾಕಾರೋತ್ಸವ, ವಸಂತ ಪೂಜೆ ಸಹಸ್ರಾರು ಭಜಕರ ಸಮ್ಮುಖದಲ್ಲಿ ನಡೆಯಿತು‌.

ಶ್ರೀ ದೇವರಿಗೆ ಸಹಸ್ರ ಕುಂಭಾಭಿಷೇಕ
ಜನವರಿ 19ಕ್ಕೆ ಶ್ರೀ ವೀರ ವೆಂಕಟೇಶ್ ದೇವರಸಹಿತ ಪರಿವಾರ ದೇವರುಗಳಿಗೆ ಸಹಸ್ರ ಕುಂಭಾಭಿಷೇಕ ನಡೆಯಲಿದೆ. ಐದು ದಿನಗಳ ಪರ್ಯಂತ ಶಾಸ್ತ್ರೋಕ್ತವಾಗಿ ವಿವಿಧ ವೈದಿಕರ ಸಹಯೋಗದೊಂದಿಗೆ ವೈದಿಕ ವಿಧಿವಿಧಾನಗಳು ಶ್ರೀ ದೇವಳದ ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯರ ನೇತ್ರತ್ವದಲ್ಲಿ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ನಡೆಯಲಿದೆ. ದೇಶ ವಿದೇಶಗಳಿಂದ ಸಾವಿರಾರು ಭಜಕರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು , ಬಳಿಕ ಜನವರಿ ೨೫ ರಂದು ವರ್ಷಾಮ್ ಪ್ರತಿ ಜರಗುವ ಬ್ರಹ್ಮರಥೋತ್ಸವ ನಡೆಯಲಿದೆ.

ವರದಿ: ಶಂಶೀರ್ ಬುಡೋಳಿ

ಚಿತ್ರ: ಮಂಜು‌ ನೀರೇಶ್ವಾಲ್ಯ

RELATED ARTICLES
- Advertisment -
Google search engine

Most Popular