Monday, April 21, 2025
Google search engine

Homeಸ್ಥಳೀಯಕಾಡಿನಿಂದ ನಾಡಿಗೆ ಬಂದ ಸಲಗ

ಕಾಡಿನಿಂದ ನಾಡಿಗೆ ಬಂದ ಸಲಗ

ಚಾಮರಾಜನಗರ: ಕಾಡಿನಿಂದ ನಾಡಿಗೆ ಬಂದ ಸಲಗವೊಂದು ಕಾಡಂಚಿನ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ ಘಟನೆ ಚಾಮರಾಜನಗರ ಗಡಿ ತಮಿಳುನಾಡಿನ ತಳವಾಡಿ ಸಮೀಪ ಸಂತರದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆ ಗಡಿಯಲ್ಲಿ ಹಲವು ದಿನಗಳಿಂದ ಕಾಡಾನೆ ಓಡಾಡುತ್ತಿದ್ದು, ಚಾಮರಾಜನಗರ ಗಡಿ ತಮಿಳುನಾಡಿನ ತಳವಾಡಿ ಸಮೀಪ ಸಂತರದೊಡ್ಡಿ ಗ್ರಾಮಕ್ಕೆ ದಿಢೀರ್ ನೇ ಆಗಮಿಸಿದೆ. ಬಳಿಕ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗ್ರಾಮದಲ್ಲಿ ಓಡಾಡಿದೆ.

ಗ್ರಾಮಕ್ಕೆ ಬಂದ ಒಂಟಿ ಸಲಗ ಸಿಕ್ಕ ಸಿಕ್ಕ ವಸ್ತುಗಳನ್ನು ಧ್ವಂಸ ಮಾಡಿದೆ. ರಾತ್ರಿಯಿಡೀ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿದ್ದ ಒಂಟಿ ಸಲಗ, ಕಬ್ಬು ಹಾಗೂ ಬಾಳೆ ಫಸಲು ಧ್ವಂಸಗೊಳಿಸಿದೆ.

ಗ್ರಾಮಕ್ಕೆ ಬಂದು ದಾಂಧಲೆ ನಡೆಸಿದ ಕಾಡಾನೆಯನ್ನು ಒಂದು ಗಂಟೆಯ ನಂತರ ಅರಣ್ಯಾಧಿಕಾರಿಗಳು ಒಂದು ಗಂಟೆಯ ಕಾರ್ಯಾಚರಣೆಯ ಬಳಿಕ ಕಾಡಿಗಟ್ಟಿದ್ದಾರೆ. ಆದರೂ, ಆನೆ ಮತ್ತೆ ಬರುವ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ

RELATED ARTICLES
- Advertisment -
Google search engine

Most Popular