ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಮಾಯಿಗೌಡನಹಳ್ಳಿ ಗ್ರಾಮಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ ಗುಡುಗನಹಳ್ಳಿ ಶೋಭಕರಿಯಯ್ಯ ಮತ್ತು ಉಪಾಧ್ಯಕ್ಷರಾಗಿ ಅಂಕನಹಳ್ಳಿ ಕೊಪ್ಪಲು ದೊಡ್ಡೇಗೌಡ ಅವಿರೋಧವಾಗಿ ಆಯ್ಕೆಯಾದರು.
ಮಂಗಳವಾರ ಗ್ರಾ.ಪಂ.ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶೋಭಕರಿಯಯ್ಯ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ದೊಡ್ಡೇಗೌಡ ಅವರನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.
ಹಾಲಿ ಅಧ್ಯಕ್ಷರಾಗಿದ್ದ ಸಾವಿತ್ರ ರಾಜಯ್ಯ ಮತ್ತು ಉಪಾಧ್ಯಕ್ಷ ಯಶೋದಮ್ಮ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೇ ಸಲ್ಲಿಸಿದ ಕಾರಣ ಈ ಚುನಾವಣೆ ನಡೆಯಿತು ಚುನಾವಣಾಧಿಕಾರಿ ತೋಟಗಾರಿಕೆ ಇಲಾಖೆಯ ಎಸ್.ಎ.ಡಿ.ಎಚ್ ಭಾರತಿ ಕಾರ್ಯನಿರ್ವಹಿಸಿದರು, ಸಹಾಯಕ ತೋಟಗಾರಿಕೆ ಅಧಿಕಾರಿ ಕಲ್ಲಹಳ್ಳಿನವೀನ್, ಸಹಾಯಕ ಚಿಕ್ಕಕೊಪ್ಪಕೊಪ್ಪಲು ಚರಣ್, ಪಿಡಿಓ ರಾಜೇಶ್ ಸಹಕಾರ ನೀಡಿದರು.
ಚುನಾವಣಾ ಸಭೆಯಲ್ಲಿ ಸದಸ್ಯರಾದ ಚಂದ್ರಪ್ಪ, ಮಹದೇವ, ಗೌಡಯ್ಯ, ಕುಮಾರಸ್ವಾಮಿ, ಚಂದ್ರಯ್ಯ, ಕುಮಾರಚಾರ್, ವಂದನಾ, ಯಶೋದ,ಕಮಲಮ್ಮ,ಆಶಾ, ಸಾವಿತ್ರಮ್ಮ, ಗಿರಿಜಮ್ಮ, ಸ್ವಾಮಿಗೌಡ ಇದ್ದರು.
ಅಧ್ಯಕ್ಷರಾಗಿ ಆಯ್ಕೆಗೊಂಡು ಮಾತನಾಡಿದ ಅಧ್ಯಕ್ಷೆ ಶೋಭಕರಿಯಯ್ಯ ಮಾತನಾಡಿ ತಮ್ಮ ಅವಧಿಯಲ್ಲಿ ಶಾಸಕ ಡಿ.ರವಿಶಂಕರ್ ನೇತೃತ್ವದಲ್ಲಿ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಮತ್ತು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಕೆಲಸ ಮಾಡುವುದಾಗಿ ತಿಳಿಸಿದರು.
ನಂತರ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಹಿರಿಯ ಕಾಂಗ್ರೇಸ್ ಮುಖಂಡ ದೊಡ್ಡಸ್ವಾಮೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಮಾಜಿ ಗ್ರಾ.ಪಂ.ಅಧ್ಯಕ್ಷರಾದ ಕಾವ್ಯಬೀರೇಗೌಡ, ಪಾನಿಮಹೇಶ್, ಮಾಜಿಸದಸ್ಯರಾದ ಕುಮಾರ್, ಮೀನಾಕ್ಷಿಕುಮಾರ್,ಮುಖಂಡರಾದ ಎ.ಆರ್.ಸುರೇಶ್, ಚಂದ್ರಶೇಖರಯ್ಯ, ಷಣ್ಮುಖ,ನಾಡಪ್ಪನಹಳ್ಳಿ ನಾಗೇಶ್, ಅಶ್ವತ್, ರವಿ ಯತೀಶ್, ಗಂಗಾಧರ್, ಸೋಮಣ್ಣ, ಎಲ್.ಐ.ಸಿ.ಮಹದೇವ್ ,ಹಾಡ್ಯರಘು,ಬಸವಕಿರಣ್, ಮಧು, ಜಲೇಂದ್ರ,ದಶರಥ, ಶಿವ,ಕುಮಾರ್ ಸೇರಿದಂತೆ ಮತ್ತಿತರರು ಅಭಿನಂದಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.